Bengaluru Rain: ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ‌ ಸಿಟಿ ರೌಂಡ್ಸ್​​​​​​​

By Suvarna News  |  First Published Sep 1, 2022, 10:08 AM IST

ಸಿಲಿಕಾನ್ ಸಿಟಿ ಮಳೆಯಿಂದ ಮುಳುಗುತ್ತಿದ್ದು, ಎಲ್ಲೆಡೆ ಅಪಾರ ಹಾನಿ ಸಂಭವಿಸಿದೆ. #SaveBengaluru ಹ್ಯಾಷ್ ಟ್ಯಾಗ್ ಅಡಿಯಲ್ಲಿ ಐಟಿ ಉದ್ಯೋಗಿಗಳು ಟ್ವೀಟರ್ ಕ್ಯಾಂಪೇನ್ ಆರಂಭಿಸಿದ್ದು, ಅಪಾರ ಜನ ಸ್ಪಂದನೆ ವ್ಯಕ್ತವಾಗುತ್ತಿದೆ. ಹೀಗೆ ಮಳೆ ಮುಂದುವರಿದರೆ ಇನ್ನೇನು ಆಗುತ್ತೋ ಎಂಬ ಭಯ ಬೆಂಗಳೂರಿಗರನ್ನು ಕಾಡುತ್ತಿಜೆ. ಈ ಬೆನ್ನಲ್ಲೇ ಸಿಎಂ ಸಿಟಿ ರೌಂಡ್ಸ್ ಮಾಡಲಿದ್ದಾರೆ. 


ಬೆಂಗಳೂರು (ಸೆ.1): ನಗರದಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕರ್ನಾಟಕ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿಯವರು ಸಂಜೆ 4 ಗಂಟೆ ನಂತರ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.  ಮಹದೇವಪುರ ವಿಧಾನಸಭಾ ಕ್ಷೇತ್ರದ  ಮಾರತಹಳ್ಳಿ ಭಾಗದಲ್ಲಿ‌ ಸಿಎಂ ರೌಂಡ್ಸ್ ಹಾಕಲಿದ್ದಾರೆ.  ಮಳೆ ಹಾನಿಯಿಂದ ಬೇಸತ್ತ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೇವ್ ಬೆಂಗಳೂರು ಎಂಬಾ ಟ್ಯಾಗ್ ಲೈನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಲಾಗುತ್ತಿದೆ. 

ಸೇವ್ ಬೆಂಗಳೂರು (Save Bengaluru) ಎಂದು ಮೋದಿಗೆ ಟ್ವೀಟ್ ಮಾಡಿದ್ದ ಐಟಿ ಉದ್ಯಾಮಿ ಮೋಹನ್ ದಾಸ್ ಪೈ,, ಹಲವು ಐಟಿ ಉದ್ಯೋಗಿಗಳು ಪ್ರದಾನ ಮಂತ್ರಿಗಳಿಗೆ ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ. ನಿನ್ನ ಬಿಬಿಎಂಪಿ (BBMP) ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ತೀವ್ರ ಹಾನಿ ಸಂಭವಿಸಿರುವ ಸ್ಥಳಗಳನ್ನು ಗುರುತಿಸಿದ್ದಾರೆ. ಮಹದೇವಪುರದ 9 ಸ್ಥಳಗಳು ಹಾಗೂ ಬೊಮ್ಮನಹಳ್ಳಿ 11 ಕಡೆ ಹಾನಿಗೊಳಗಾಗಿದ್ದು, ಸವಳಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಕೆರೆ ನೀರು ರಸ್ತೆಗೆ ಹರಿದು ಹಾನಿ ಸಂಭವಿಸಿದೆ.  

Tap to resize

Latest Videos

ಬೆಳ್ಳಂದೂರು ಇಕೋಸ್ಪೇಸ್ ಹಾಗೂ ಆರ್ ಎಂಝಡ್ ಪ್ರದೇಶದಲ್ಲಿ ನೀರು ಸಂಗ್ರಹ ತೆರವುಗೊಳಿಸುವಂತೆ ಸೂಚಿಸಲಾಗಿದೆ. ರೇನ್ಭೋ ಲೇಔಟ್‌ನಲ್ಲಿ ಪರಿಹಾರ ಕಾರ್ಯಕ್ಕೆ ಸೂಚಿಸಲಾಗಿದೆ. ಸಿಎಂ ರೌಂಡ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಬಿಬಿಎಂಪಿ, ಬೆಸ್ಕಾಂ , ಬಿಬಿಎಂಪಿ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ. 

Mohandas Pai Tweet: ದಯವಿಟ್ಟು ಬೆಂಗಳೂರು ಕಾಪಾಡಿ; ಮೋದಿಗೆ ಟ್ವೀಟ್ ಮೂಲಕ ಮನವಿ

ಭರ್ಜರಿ ಮಳೆಗೆ ನೀರಲ್ಲಿ ತೇಲಿದ ಲೇಔಟ್‌ಗಳು!
ಸಿಲಿಕಾನ್ ಸಿಟಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿ ಇಡೀ ಬಡಾವಣೆಗಳೇ ಸಂಪರ್ಕ ಕಳೆದುಕೊಂಡಿದ್ದವು. ನುಡು ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಸ್ಥಳಾಂತರ ಮಾಡಲು ಟ್ಯಾಕ್ಟರ್‌ ಮತ್ತು ಬೋಟ್‌ಗಳನ್ನು ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ವಾಯುಭಾರ ಕುಸಿತದಿಂದ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಾಲನಾಯಕನಹಳ್ಳಿಯ ಕೆರೆ ಕೋಡಿ ಒಡೆದು ಮಾರತ್ತಹಳ್ಳಿ ಹಾಗೂ ಸಜ್ಜಾಪುರ ರಸ್ತೆಯಲ್ಲಿರುವ ರೇನ್‌ ಬೋ ಬಡಾವಣೆ ಸಂಪೂರ್ಣವಾಗಿ ದ್ವೀಪವಾಗಿತ್ತು. 4ರಿಂದ 5 ಅಡಿ ನೀರು ನಿಂತು ಸಮಸ್ಯೆ ಆಗಿತ್ತು. ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ಉಂಟಾಗಿದ್ದು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌ ಹಾಗೂ ನಾಗರಿಕ ರಕ್ಷಣಾ ಪಡೆಗಳ ತಂಡಗಳು ನೀರಿನಲ್ಲಿ ಸಿಲುಕಿದ್ದ ನಿವಾಸಿಗಳನ್ನು ಬೋಟ್‌ಗಳನ್ನು ಬಳಸಿ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು. ಇನ್ನು ಅಗತ್ಯ ಸಾಮಗ್ರಿಗಳನ್ನು ತರಲು ಹೊರ ಹೋಗುವವರಿಗೆ ಮತ್ತು ಬೇರೆಡೆಯಿಂದ ಬಡಾವಣೆ ಒಳ ಹೋಗುವವರಿಗೆ ಬೋಟ್‌ಗಳಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಐಟಿ ಕಂಪನಿಗಳೂ ನೀರಿನಲ್ಲಿ ಜಲಾವೃತವಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. 

ನೀರು ಹೊರ ಹಾಕುವುದಕ್ಕೆ ಪಂಪ್‌ ಬಳಕೆ
ರೇನ್‌ಬೋ ಬಡಾವಣೆಯಲ್ಲಿ ನಿಲ್ಲುವ ನೀರನ್ನು ಹೊರಹಾಕಲು ಬಿಬಿಎಂಪಿ ತಾತ್ಕಾಲಿಕ ಪಂಪ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಪಂಪ್‌ನ ಸಾಮರ್ಥ್ಯ ಕಡಿಮೆಯಿದ್ದು, ಮೇಲಿಂದ ಹರಿದುಬರುವ ನೀರನ್ನು ಹೊರಹಾಕಲು ಸಾಧ್ಯವಾಗುತ್ತಿಲ್ಲ. ಪ್ರತಿಬಾರಿ ಮಳೆ ಬಂದಾಗಲೂ ಪ್ರವಾಹ ಉಂಟಾಗುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ರೇನ್‌ ಬೋ ಬಡಾವಣೆಗೆ ಮೂರನೇ ಬಾರಿ ನೀರು ನುಗ್ಗಿತ್ತು, ಜನರ ಜೀವನ ಅಸ್ತವ್ಯಸ್ತಗೊಂಡಿತ್ತು. ಮತ್ತೆ ವರುಣ ನಗರದಲ್ಲಿ ಆರ್ಭಟ ತೋರಲು ಶುರು ಮಾಡಿದರೆ, ಜನರು ಭಯದಿಂದಲೇ ಜೀವಿಸುವಂತಾಗುತ್ತದೆ. 

Bengaluru Rains: ಮಳೆಯಿಂದ ಜಲಾವೃತಗೊಂಡ ರೈನ್‌ಬೊ ಲೇಔಟ್; ತಲೆಕೆಡಿಸಿಕೊಳ್ಳದ ಬಿಬಿಎಂಪಿ!

ಹಲವು ಬಡಾವಣೆಗಳು ಜಲಾವೃತ
ಬೊಮ್ಮನಹಳ್ಳಿ ವಲಯದ ಅನುಗ್ರಹ ಬಡಾವಣೆಯಲ್ಲಿ 1ನೇ ಮತ್ತು 2ನೇ ಹಂತದ 35ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಹಂಪಿನಗರದ 5ನೇ ಕ್ರಾಸ್‌ನ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ಹಾರೋಹಳ್ಳಿಯ ತಗ್ಗು ಪ್ರದೇಶಗಳಲ್ಲಿದ್ದ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯ ವಸ್ತುಗಳೆಲ್ಲವೂ ನೀರು ಪಾಲಾಗಿದೆ. ಜೆ.ಪಿ.ನಗರ 6ನೇ ಹಂತದ ರಸ್ತೆಗಳಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತು ಕೊಂಡಿತ್ತು. ವಸಂತಪುರ, ನವೋದಯನಗರ ಬಡಾವಣೆ, ಆರ್‌.ಆರ್‌.ನಗರದ ಬಲರಾಮ್‌ ಲೇಔಟ್‌, ಎಚ್‌ಎಸ್‌ಆರ್‌ ಬಡಾವಣೆಗಳಲ್ಲಿಯೂ ನೀರು ನಿಂತಿದ್ದರಿಂದ ಜನರು ಮನೆಯಿಂದ ಹೊರಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 

click me!