ಕರ್ನಾಟಕದಲ್ಲಿ ನಿಲ್ಲದ ಸಾರಿಗೆ ಮುಷ್ಕರ; ಖಾಸಗಿ ಬಸ್ ಮಾಲೀಕರಿಂದ ಸುಲಿಗೆ!

By Suvarna NewsFirst Published Apr 19, 2021, 10:23 PM IST
Highlights

ಒಂದೆಡೆ ಕೊರೋನಾ ಆತಂಕ, ಮತ್ತೊಂದೆಡೆ ರಾಜ್ಯದ ಸಾರಿಗೆ ನೌಕರರ ಮುಷ್ಕರ ಜರನ್ನು ಹೈರಾಣು ಮಾಡಿದೆ. 6ನೇ ವೇತನ ಜಾರಿಗೆ ಪಟ್ಟು ಹಿಡಿದಿರುವ ನೌಕರರ, ಮುಷ್ಕರ ಅಂತ್ಯಗೊಳಿಸುವ ಯಾವುದೇ ಸೂಚನೆಗಳಿಲ್ಲಿ. ಇದರ ನಡುವೆ ಖಾಸಗಿ ಬಸ್‌ಗಳು ದುಪ್ಪಟ್ಟು ಹಣ ವಸೂಲಿ ಮಾಡೋ ಮೂಲಕ ಜನರನ್ನು ಮತ್ತಷ್ಟು ಹಿಂಡಿ ಹಿಪ್ಪೆ ಮಾಡುತ್ತಿದೆ.
 

ಬೆಂಗಳೂರು(ಏ.19): ಸಾರಿಗೆ ನೌಕರರ ಮುಷ್ಕರ ಸತತ 13ನೇ ದಿನಗಳಿಂದ ನಡೆಯುತ್ತಿದೆ.  23,000 ಸಾರಿಗೆ ಬಸ್ ಓಡಾಟ ಸಂಪೂರ್ಣ ನಿಂತಿದೆ. ಇದರ ಪರಿಣಾಮ ಕರ್ನಾಟಕದ ಜನತೆ ಎದುರಿಸುತ್ತಿದ್ದಾರೆ.  ಬಸ್‌ಗಳಿಲ್ಲದೇ ಜನರು ಇದೀಗ ಖಾಸಗಿ ಬಸ್‌ಗಳ ಮೊರೆ ಹೋಗಬೇಕಾಗಿದೆ. ಇದೇ ಸಂದರ್ಭ ಬಳಸಿಕೊಂಡ ಖಾಸಗಿ ಬಸ್‌ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಕೆಲಸಕ್ಕೆ ಮತ್ತಷ್ಟು ನೌಕರರು: 7500 ಬಸ್‌ಗಳ ಸಂಚಾರ

ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ರಾಜಾರೋಷವಾಗಿ ಓಡಾಟ ಆರಂಭಿಸಿದೆ. ಆದರೆ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ಜನರಿಗೆ ಮತ್ತಷ್ಟು ಸಂಕಷ್ಟ ನೀಡುತ್ತಿದೆ. ಇದರ ನಡುವೆ  ಕರ್ತವ್ಯಕ್ಕೆ ಹಾಜರಾಗಿದ್ದ ಕೆಲವೇ ಕೆಲವು ಸಾರಿಗೆ ನೌಕರರ ಮೇಲೆ ಕಲ್ಲೂ ತೂರಾಟ ಮಾಡಿದ ಘಟನೆಗಳು ನಡೆದಿದೆ. 

ಸಾರಿಗೆ ಮುಷ್ಕರ: ಮತ್ತೆ 2443 ಸಿಬ್ಬಂದಿ ಅಮಾನತು.

ಇತ್ತ ಸಾರಿಗೆ ನೌಕರರೂ ಮತ್ತು ಅವರ ಕುಟುಂಬಗಳು ಜಿಲ್ಲಾ ಕೇಂದ್ರದಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ.  ಬೆಂಗಳೂರಿನಲ್ಲಿ ಪ್ರತಿಭಟನೆಗೆ ನಿರತ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆಯೂ(ಏ.20) ಮುಷ್ಕರ ಮುಂದುವರಿಯಲಿದೆ. 

click me!