ಹಿರಿಯ ಸಾಹಿತಿ, ಹೋರಾಟಗಾರ ಡಾ.ಮಳಲಿ ವಸಂತ್ ಕುಮಾರ್ ಇನ್ನಿಲ್ಲ!

By Suvarna NewsFirst Published Mar 18, 2021, 10:05 PM IST
Highlights

ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದೆ. ಹಿರಿಯ ಸಾಹಿತಿ, ಕನ್ನಡ ಪ್ರಾಧ್ಯಾಪಕ ಡಾ.ಮಳಲಿ ವಸಂತ್ ಕುಮಾರ್ ನಿಧನರಾಗಿದ್ದಾರೆ.

ಬೆಂಗಳೂರು(ಮಾ.18):  ಕನ್ನಡ ಸಾಹಿತ್ಯ ಲೋಕದಲ್ಲಿ ಮಿಂಚುತ್ತಿದ್ದ ಹಿರಿಯ ಸಾಹಿತಿ, ಕನ್ನಡ ಪ್ರಾಧ್ಯಾಪಕ, ಕನ್ನಡ ಹೋರಾಟಗಾರ ಡಾ.ಮಳಲಿ ವಸಂತ್ ಕುಮಾರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 76 ವರ್ಷದ ಮಳಲಿ ವಸಂತ್ ಕುಮಾರ್ ನಿಧನ, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಲಹರಿ ವೇಲು..ಕಂಬಾರ... ನಿತ್ಯೋತ್ಸವ ಕವಿಗೆ ವಂದನೆ ಸಲ್ಲಿಸಿದ ದಿಗ್ಗಜರು

ವಸಂತ್ ಕುಮಾರ್ ಇಂದು(ಮಾ.18) ಸಂಜೆ ಬೆಂಗಳೂರಿನಲ್ಲಿ ಅವರ ಪುತ್ರನ ಮನೆಯಲ್ಲಿ ನಿವಾಸದಲ್ಲಿ ನಿಧನರಾಗಿದ್ದಾರೆ.  ಪತ್ನಿ ಶಾಂತಾ ಮಳಲಿ, ಪುತ್ರಿ,ಪುತ್ರ, ಕುಟುಂಸ್ಥರು ಹಾಗೂ ಸಾಹಿತ್ಯಲೋಕದ ಅಭಿಮಾನಿ ಬಳಗವನ್ನು ಅಗಲಿದ್ದಾರೆ. 

ವಸಂತ್ ಕಮಾರ್ ಅವರ ಪಾರ್ಥೀವ ಶರೀರವನ್ನು ಮೈಸೂರಿನ ಕಳಲವಾಡಿಯಲ್ಲಿರುವ ತೋಟದ ಮನೆ ನಿವಾಸದಲ್ಲಿ ಅಂತ್ಯಕ್ರೀಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ಮೈಸೂರಿನ ಟೌನ್ ಹಾಲ್ ಮುಂದೆ ಬೆಳಗ್ಗೆ 9 ಗಂಟೆಯಿಂದ 10 ಗಂಟೆವರೆಗೆ ಇಡಲಾಗುವುದು ಎಂದು ಮೂಲಗಳು ಹೇಳಿವೆ.

ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ವಿಧಿವಶ

ಡಾ. ರಾಜ್‌ಕುಮಾರ್ ಜೊತೆ ಗೋಕಾಕ್ ಚಳವಳಿಯಲ್ಲಿ ಧುಮುಕಿದ ಹೋರಾಟಗಾರ, ರಾಷ್ಟ್ರಕವಿ ಕುವೆಂಪು ಆಪ್ತರಾಗಿದ್ದ ಮಳಲಿ ವಸಂತ್ ಕುಮಾರ್ ಹಲವು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡು ಜನಪ್ರಿಯರಾಗಿದ್ದಾರೆ. ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಕನ್ನಡ ಪರ ಧನಿ ಎತ್ತಿದ್ದರು.

ಮೈಸೂರಿನ ಮಹಾರಾಜ ಹಾಗೂ ಯುವರಾಜ್ ಕಾಲೇಜಿನ ಪ್ರಧ್ಯಾಪಕರಾಗಿ, ಮೈಸೂರಿ ವಿಶ್ವವಿದ್ಯಾಲಯದಲ್ಲಿ ದೇಜೆಗೌ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇನ್ನು ಮಂಡ್ಯ ಹಾಗೂ ಹಾಸನ ಸ್ನಾತಕೋತ್ತರ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ

click me!