
ಬೆಂಗಳೂರು (ಸೆ.12) ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಐಟಿ ದಾಳಿಯಾಗಿದೆ. ಈ ಬಾರಿ ಅತೀ ಜನಪ್ರಿಯ ಬಟ್ಟೆ ಶೋ ರೂಂ ಆಗಿರುವ ಫೋಥಿಸ್ ಮಳಿಗೆ ಮೇಲೆ ಐಟಿ ದಾಳಿಯಾಗಿದೆ. ಮೈಸೂರು ರಸ್ತೆಯ ಟೆಂಬರ್ ಲೇಔಟ್, ಗಾಂಧಿನಗರದ ಅತೀ ದೊಡ್ಡ ಶೋ ರೂಂ ಮೇಲೆ ಐಟಿ ದಾಳಿಯಾಗಿದೆ. 50ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರತ್ಯೇಕ ತಂಡವಾಗಿ ಪೋಥಿಸ್ ಮಳಿಗೆ ಮೇಲೆ ದಾಳಿ ನಡೆಯಲಾಗಿದೆ. ಆದಾಯ ತೆರಿಗೆ ವಂಚನ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಗಾಂಧಿನಗರದಲ್ಲಿರುವ ಪೋಥಿಸ್ ಬಟ್ಟೆ ಮಳಿಗೆ ಮೇಲೆ 30 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇನ್ನು ಟೆಂಬರ್ ಲೇಔಟ್‌ನಲ್ಲಿರುವ ಪೋಥಿಸ್ ಮಳಿಗೆ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಳಿಗೆಯಲ್ಲಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದದ್ದಾರೆ. ನಗದು ವಹಿವಾಟು, ಆನ್‌ಲೈನ್ ವಹಿವಾಟು, ಮಳಿಗೆಯಲ್ಲಿರುವ ಬಟ್ಟೆಗಳು, ಮೌಲ್ಯ ಸೇರದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಕರ್ನಾಟಕದ ಭಷ್ಟರ ವಿರುದ್ಧ ಲೋಕಾ ದಾಳಿ: ಅಧಿಕಾರಿಗಳ ಮನೆಯಲ್ಲಿ ಲೆಕ್ಕವಿಲ್ಲದ ಅಕ್ರಮ ಸಂಪತ್ತು ಪತ್ತೆ!
ಬೆಂಗಳೂರಿನಲ್ಲಿ ಭಾರಿ ವ್ಯಾಪಾರ ವ್ಯವಹಾರ ಮಾಡುತ್ತಿರುವ ಪೋಥಿಸ್ ಮಳಿಗೆ ತಮಿಳುನಾಡಿನ ಉದ್ಯಮಿಗೆ ಸೇರಿದೆ. ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನಲ್ಲಿ ಅತೀ ದೊಡ್ಡ ಉದ್ಯಮವಾಗಿ ಬೆಳೆದಿದೆ. ಬಳಿಕ ಹಂತ ಹಂತವಾಗಿ ಇತರ ರಾಜ್ಯಗಳಿಗೆ ವಿಸ್ತರಣೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಎರಡು ಅತೀ ದೊಡ್ಡ ಮಳಿಗೆ ತೆರಿದಿದೆ.
ಪೋಥಿಸ್ ಭಾರಿ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚಿಸಿದ ಆರೋಪ ಕೇಳಿಬಂದಿದೆ. ತಮಿಳುನಾಡಿನಲ್ಲಿ ಈ ಕುರಿಟು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಚೆನ್ನೈನಿಂದ ಐಟಿ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ದಾಳಿ ನಡೆಸಿದ್ದಾರೆ. ಕೆಲವೇ ವರ್ಷದಲ್ಲಿ ಪೋಥಿಸ್ ಮಳಿಗೆ ಅತೀ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಆದಾಯ ತೆರಿಗೆ ವಂಚನ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಇದೀಗ ಇದೀಗ ಪೋಥಿಸ್ ಮಳಿಗೆ ಮೇಲೂ ದಾಳಿ ನಡೆದಿದೆ.
ಅಮಿತಾಬಚ್ಚನ್, ಅಮೀರ್ ಖಾನ್ ರಿಂದ ಕಾರು ಖರೀದಿ, ಕೆಜಿಎಫ್ ಬಾಬು ಮನೆ ಮೇಲೆ RTO ದಾಳಿ!