ಟ್ರಾಫಿಕ್ ಸಿಗ್ನಲ್‌ಗಳನ್ನು ಬಳಸಿಕೊಂಡು ಹೃದಯ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮಣಿಪಾಲ್ ಆಸ್ಪತ್ರೆಗಳೊಂದಿಗೆ ಕೈಜೋಡಿಸಿದ್ದೇವೆ. ಬ್ಯಾನರ್ ಮತ್ತು ಕರಪತ್ರಗಳನ್ನು ಸಹ ಬಳಸಬೇಕು. 15 - 25 ನೇ ತಾರೀಕಿನವರೆಗೆ ಹೃದಯಗಳನ್ನು ಪ್ರದರ್ಶಿಸಲು 20 ಟ್ರಾಫಿಕ್ ಜಂಕ್ಷನ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾರದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಬೆಂಗಳೂರಲ್ಲಿ (Bengaluru) ವಾಹನ ಓಡಿಸೋದು ಅಂದ್ರೆ ಹಲವರಿಗೆ ಕಿರಿಕಿರಿ. ಟ್ರಾಫಿಕ್ ಜಾಮ್ (Traffic Jam) ತೊಂದರೆಗೆ ಕಾರು ಮುಂತಾದ ವೆಹಿಕಲ್ ಓಡಿಸೋಕೆ ಹಲವರಿಗೆ ಬೇಸರ. ಆದರೂ, ದ್ವಿಚಕ್ರ ವಾಹನ ಸವಾರಿ ಅಥವಾ ನಾಲ್ಕು ಚಕ್ರದ ವಾಹನ ಓಡಿಸುತ್ತಿದ್ದರೆ ಟ್ರಾಫಿಕ್ ಲೈಟ್ ಅನ್ನು ಗಮನಿಸಿದರೆ ನಿಮಗೆ ಅಚ್ಚರಿ ಕಾದಿರಬಹುದು. ಏಕೆಂದರೆ ಟ್ರಾಫಿಕ್ ಲೈಟ್‌ಗಳಲ್ಲಿ ಹೃದಯದ ಚಿಹ್ನೆ (Heart Shaped Traffic lights) ಗೋಚರಿಸಿದರೆ ನಿಮಗೆ ಆಶ್ಚರ್ಯವಾಗುವುದಿಲ್ಲವೇ. ಇದೇ ರೀತಿ, ಇತ್ತೀಚೆಗೆ ಬೆಂಗಳೂರಿನ ಹಲವು ಟ್ರಾಫಿಕ್ ಲೈಟ್‌ಗಳಲ್ಲಿ ಹೃದಯ ಚಿಹ್ನೆ ಕಾಣಿಸಿಕೊಂಡಿರುವುದನ್ನು ನೋಡಿದ ಪ್ರಯಾಣಿಕರು ಆಶ್ಚರ್ಯಚಕಿತರಾದರು. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಾಕಿದ್ದರೆ, ಇನ್ನು ಕೆಲವರು ಕರ್ನಾಟಕದ ರಾಜಧಾನಿಯಲ್ಲಿ ಕೆಂಪು ಟ್ರಾಫಿಕ್ ಲೈಟ್‌ಗಳಲ್ಲಿ ಇದ್ದಕ್ಕಿದ್ದಂತೆ ಹೃದಯದಂತೆ ಹೊಳೆಯುತ್ತಿದೆ ಎಂದು ಆಶ್ಚರ್ಯಪಡುತ್ತಿದ್ದಾರೆ.
ಹೃದಯಾಕಾರದ ಟ್ರಾಫಿಕ್ ಲೈಟ್‌ಗಳು ಮಣಿಪಾಲ್ ಆಸ್ಪತ್ರೆಗಳು, ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police) (ಬಿಟಿಪಿ), ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) (ಬಿಬಿಎಂಪಿ) ಜಂಟಿ ಉಪಕ್ರಮದ ಫಲಿತಾಂಶವಾಗಿದ್ದು, ಹೃದಯದ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಗೆ ತ್ವರಿತ ಪ್ರವೇಶವನ್ನು ಒದಗಿಸುತ್ತವೆ ಎಂದು ತಿಳಿದುಬಂದಿದೆ.
undefined
ಇದನ್ನು ಓದಿ: ಈ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿದ್ಯಾ ?
On the occasion of , Manipal Hospitals installed innovations to encourage Bangalore to be a 'heart smart city'. pic.twitter.com/cYSJPKx4uC
— Manipal Hospitals | #TogetherStronger (@ManipalHealth)ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಸಲು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್ ಜಂಕ್ಷನ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಆದ್ದರಿಂದ ಬೆಂಗಳೂರಿನ ನಿವಾಸಿಗಳು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತುರ್ತು ಸೇವೆಗಳ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದು ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ. ಬೆಂಗಳೂರನ್ನು ಹಾರ್ಟ್ ಸ್ಮಾರ್ಟ್ ಸಿಟಿಯನ್ನಾಗಿ ಪ್ರೋತ್ಸಾಹಿಸಲು ವಿಶ್ವ ಹೃದಯ ದಿನದಂದು ಹೃದಯಾಕಾರದ ಟ್ರಾಫಿಕ್ ದೀಪಗಳನ್ನು ಅಳವಡಿಸಲಾಗಿದೆ. ನಗರದ 20 ಕ್ಕೂ ಹೆಚ್ಚು ಸ್ಥಳಗಳು ಈ ರೀತಿಯ ಸಂಚಾರ ದೀಪಗಳನ್ನು ಹೊಂದಿವೆ ಎಂದೂ ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ.
ಈ ಉಪಕ್ರಮದ ಅಡಿಯಲ್ಲಿ, ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಆಡಿಯೋ ಸಂದೇಶಗಳನ್ನು ಸಹ ನಗರದಲ್ಲಿ ಪ್ಲೇ ಮಾಡಲಾಗಿದೆ. ಬಳಕೆದಾರರಿಗೆ ತುರ್ತು ಸೇವೆಗಳನ್ನು ಡಯಲ್ ಮಾಡುವ ಬದಲು ಕ್ಯೂಆರ್ ಕೋಡ್‌ಗಳು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಹೇಳಿದೆ. ಒಂದೇ ಕ್ಲಿಕ್‌ನಲ್ಲಿ, ಬಳಕೆದಾರರನ್ನು ಆಂಬ್ಯುಲೆನ್ಸ್ ಸೇವೆಗೆ ನಿರ್ದೇಶಿಸಲಾಗುತ್ತದೆ ಎಂದೂ ಮಾಹಿತಿ ನೀಡಿದೆ.
ಇದನ್ನೂ ಓದಿ: ಹುಷಾರ್ ! ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗ್ತಿದೆ ವೀಡಿಯೋ ಗೇಮ್ಸ್
What's with all the ❤️ shaped traffic signals in Bangalore? 🤔
❤️ Turns out its a campaign to provide first-aid
❤️ BBMP & Manipal Hospitals have posted QR codes at🚦s in the city
❤️If you scan the QR code, you'll connect to the emergency no & directed to an 🚑 pic.twitter.com/vl8WV813GP
ಇನ್ನು, ಈ ಸಂಬಂಧ ಬೆಂಗಳೂರಿನ ಜಂಟಿ ಟ್ರಾಫಿಕ್ ಕಮೀಷನರ್ ರವಿಕಾಂತೇ ಗೌಡ ಮಾಹಿತಿ ನೀಡಿದ್ದು, ಟ್ರಾಫಿಕ್ ಸಿಗ್ನಲ್‌ಗಳನ್ನು ಬಳಸಿಕೊಂಡು ಹೃದಯ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮಣಿಪಾಲ್ ಆಸ್ಪತ್ರೆಗಳೊಂದಿಗೆ ಕೈಜೋಡಿಸಿದ್ದೇವೆ. ಬ್ಯಾನರ್ ಮತ್ತು ಕರಪತ್ರಗಳನ್ನು ಸಹ ಬಳಸಬೇಕು. 15 - 25 ನೇ ತಾರೀಕಿನವರೆಗೆ ಹೃದಯಗಳನ್ನು ಪ್ರದರ್ಶಿಸಲು 20 ಟ್ರಾಫಿಕ್ ಜಂಕ್ಷನ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Bengaluru | City to display heart symbol in traffic lights
Joined hands with Manipal hospitals to create awareness about heart health issues using traffic signals. Banner & pamphlets to be used as well. 20 junctions selected to display hearts b/w 15-25th: Jt CP Traffic, R Gowda pic.twitter.com/4JC17WcE0w
"ಪ್ರತಿಯೊಂದು ಜೀವವೂ ಮುಖ್ಯ ಎಂಬುದನ್ನು ಸೂಚಿಸಲು ಹೃದಯ ಆಕಾರದ ಟ್ರಾಫಿಕ್ ಸಿಗ್ನಲ್ ಅನ್ನು ಹಾಕಲಾಗಿದೆ" ಎಂದು ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು. “ಜನರು ವೇಗವಾಗಿ ಸವಾರಿ ಮಾಡಬಾರದು ಮತ್ತು ಸಿಗ್ನಲ್‌ಗಳನ್ನು ಜಂಪ್ ಮಾಡಬಾರದು. ವಾಹನ ಸವಾರಿ ಮಾಡುವವರು ಜಾಗರೂಕರಾಗಿರಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದರ ಹೊರತಾಗಿ, ಅವರ ಪ್ರೀತಿಪಾತ್ರರು ಸಹ ಅವರು ಮನೆಗೆ ಬೇಗ ವಾಪಸ್ ಬರಲೆಂದು ಕಾಯುತ್ತಿರುತ್ತಾರೆ. ಈ ಹಿನ್ನೆಲೆ ಅವರು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸುತ್ತದೆ’’ ಎಂದೂ ಅವರು ಹೇಳಿದ್ದಾರೆ.