ಬೆಂಗಳೂರಿನಲ್ಲಿ ನಾಳೆ ಕರೆಂಟಿಲ್ಲ, ನಾಡಿದ್ದು ನೀರಿಲ್ಲ: ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ

By Anusha KbFirst Published Oct 12, 2022, 7:13 PM IST
Highlights

ನ್ನೆರಡು ದಿನ ಸಿಲಿಕಾನ್ ಸಿಟಿಯಲ್ಲಿ ನೀರು ಇರೋದಿಲ್ಲ. ಎರಡು ದಿನಗಳ ಕಾಲ ಕಾವೇರಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾವೇರಿ 1 ಮತ್ತು 2ನೇ ಹಂತದಿಂದ ನೀರು ಸರಬರಾಜಾಗುವ  ಪ್ರದೇಶಗಳಲ್ಲಿ ನೀರಿನ ಪೂರೈಕೆ ಸ್ಥಗಿತವಾಗಲಿದ್ದು ಜನ ಎಚ್ಚೆತ್ತುಕೊಂಡು ನೀರಿನ ಬಳಕೆ ಮಾಡಿಕೊಳ್ಳಬೇಕಿದೆ. 

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು: ಬೆಂಗಳೂರಿಗರೇ ನೀರು ಮಿತವಾಗಿ ಬಳಸಿ. ಯಾಕಂದ್ರೆ ಇನ್ನೆರಡು ದಿನ ಸಿಲಿಕಾನ್ ಸಿಟಿಯಲ್ಲಿ ನೀರು ಇರೋದಿಲ್ಲ. ಎರಡು ದಿನಗಳ ಕಾಲ ಕಾವೇರಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾವೇರಿ 1 ಮತ್ತು 2ನೇ ಹಂತದಿಂದ ನೀರು ಸರಬರಾಜಾಗುವ  ಪ್ರದೇಶಗಳಲ್ಲಿ ನೀರಿನ ಪೂರೈಕೆ ಸ್ಥಗಿತವಾಗಲಿದ್ದು ಜನ ಎಚ್ಚೆತ್ತುಕೊಂಡು ನೀರಿನ ಬಳಕೆ ಮಾಡಿಕೊಳ್ಳಬೇಕಿದೆ. 

Latest Videos

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು  ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿನ ಕಾವೇರಿ  1 ಮತ್ತು 2ನೇ ಹಂತದ  ಜಲರೇಚಕ ಯಂತ್ರಗಾರಗಳ ದುರಸ್ಥಿ  ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ದಿನಾಂಕ:14-10-2022 ಮತ್ತು 15-10-2022  ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇಡೀ ಬೆಂಗಳೂರಿಗೆ ನೀರಿನ ಸಮಸ್ಯೆ ಉಂಟಾಗಲಿದೆ. ಹಾಗಾಗಿ ಜನರು ನೀರಿನ ಮಿತ ಬಳಕೆ ಮಾಡುವಂತೆ ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. 
                                 
ಯಾವ್ಯಾವ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ..?

ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ.ಅಗ್ರಹಾರ. ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಪೇಟೆ, ರಾಮಚಂದ್ರ  ಅಗ್ರಹಾರ, ಆದರ್ಶನಗರ, ಕನ್ನೀರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮಿಕಿ ನಗರ, ವಿ.ಎಸ್ ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್‌ಗೈ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಕಾದಿಮಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಶಾಸ್ತಿನಗರ, ಎನ್.ಆರ್.ಕಾಲೋನಿ, ಬೈರಪ್ಪ ಬ್ಲಾಕ್, ಮೌಂಟ್ ಜಾಯ್ ಎಕ್ಸ್ ಟೆನ್‌ಷನ್, ಅಶೋಕ್‌ನಗರ, ಬನಂಶAಕರಿ ಒಂದನೇ ಹಂತ,  ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್ 1ನೇ ಹಂತ ಮತ್ತು 2 ನೇ ಹಂತ, ಇಸ್ರೋ ಲೇಔಟ್, ಸಮೃದ್ದಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠ್ಠಲ್ ನಗರ. ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನೆಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜೀಪುರ, ವಿವೇಕ್ ನಗರ, ಅಶೋಕ್ ನಗರ.

ರಿಚ್‌ಮಂಡ್ ಟೌನ್, ಎಂಜಿ.ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್, ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು ೨ನೇ ಹಂತ, ಎಚ್‌ಎಎಲ್  ೨ನೇ ಹಂv,À ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟರ್ಸ್, ಕೊಡಿಹಳ್ಳಿ, ಎಂ.ಜಿ.ರಸ್ತೆ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ಟಿ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಕೇಂಬ್ರಿಡ್ಜ್ ಲೇಜೌಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್.ಆರ್.ಡಿ.ಐ. ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್, ನೇತ್ರಾವತಿ ೧ ರಿಂದ ೧೦ ಬ್ಲಾಕ್‌ಗಳು, ನಂದಿ ಸಂಕೀರ್ಣ1 ರಿಂದ 32 ಬ್ಲಾಕ್‌ಗಳು ಮತ್ತು ಟಿಪ್ಪು ಬ್ಲಾಕ್‌ಗಳು, ಕೋರಮಂಗಲ 6ನೇ 7ನೇ ಬ್ಲಾಕ್, ಕೆ.ಆರ್.ಗಾರ್ಡನ್, ಕೆ.ಹೆಚ್.ಬಿ ಕಾಲೋನಿ.

ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ 8ನೇ ಬ್ಲಾಕ್, ಪಾರ್‌ಸಿಯಲ್ ಎನ್.ಜಿ,ವಿ, ಜಯನಗರ 3ನೇ ಬ್ಲಾಕ್, 4ನೇ ಬ್ಲಾಕ್ ಮತ್ತು 4ನೇ ‘ಟಿ’ ಬ್ಲಾಕ್, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ ಆಡುಗೋಡಿ, ಬೃಂದಾವನ ನಗರ,ಸೆಂಟ್ ಜಾನ್ಸ್ ಕ್ವಾಟರ್ಸ್, ಮಾರುತಿ ನಗರ, ವಿ.ಪಿ ರೋಡ್, ಎ.ಕೆ ಕಾಲೋನಿ, ಭೋವಿ ಕಾಲೋನಿ, ಎನ್‌ಟಿವೈ ಲೇಔಟ್, ಟೆಲಿಕಾಮ್ ಲೇಔಟ್, ಬ್ಯಾಟರಾಯನಪುರ, ಕಸ್ತೂರ ಬಾ ನಗರ, ನ್ಯೂ ಗುಡ್ಡದಹಳ್ಳಿ, ಮಾರುತಿನಗರ, ಶಾಮಣ್ಣ ನಗರ, ಬಾಪೂಜಿ ನಗರ. ಜಾಲಿ ಮೊಹಲ್, ಪಿ.ವಿ.ಆರ್ ರೋಡ್, ಓ.ಟಿ.ಪೇಟೆ. ವಿ.ವಿ.ಪುರಂ, ಪಾರ್ವತಿಪುರ, ಕಲಾಸಿಪಾಳ್ಯ, ಅನ್ನಿಪುರ, ಕುಂಬಾರಗುಂಡಿ, ಬಾದಮಕಾನ್, ಸುಧಾಮನಗರ, ದೊಡ್ಡಮಾವಳ್ಳಿ, ಕೆ.ಜಿ.ನಗರ, ಶಂಕರ್ ಪುರಂ, ರುದ್ರಪ್ಪ ಗಾರ್ಡನ್.

ವಾಲ್ಮಿಕೀನಗರ, ಅನಂತರಾಮಯ್ಯ ಕಾಂಪೌಂಡ್, ಮುದಲೀಯರ್ ಕಾಂಪೌಂಡ್, ವಿಠ್ಠಲ್ ನಗರ, ಅಜಾದ್ ನಗರ, ಆದರ್ಶನಗರ, ರಾಮಚಂದ್ರ ಅಗ್ರಹಾರ, ಟಿಪ್ಪುನಗರ, ಸೀತಾಪತಿ ಅಗ್ರಹಾರ, ಎನ್.ಟಿ.ಪೇಟ್, ಅಪ್ಪಜಪ್ಪ ಅಗ್ರಹಾರ, ಚಿಕ್ಕಣ್ಣ ಗಾರ್ಡನ್, ವಿನಾಯಕ ಲೇಔಟ್, ಎನ್.ಜಿ.ಕೆ ಲೇಔಟ್, ಸಮೀರ್‌ಪುರ, ರಂಗರಾವ್ ರೋಡ್, ಡಿಸ್‌ಪೇನ್‌ಸರಿ ರೋಡ್, ಕೋಟೆ ಎರಿಯಾ, ಪಾದರಾಯನಪುರ, ಜೆ.ಜೆ.ಆರ್.ನಗರ, ರಂಗನಾಥ್ ಕಾಲೋನಿ, ಓಬಲೇಶ್ ಕಾಲೋನಿ, ರಾಯಪುರಂ, ಓಲ್ಡ್ ಗುಡ್ಡದಹಳ್ಳಿ, ವಿನಾಯಕ ನಗರ, ಅರ್‌ಫ್ತ ನಗರ, ಮಂಜುನಾಥ್ ನಗರ, ಜನತ ಕಾಲೋನಿ, ಫರ್‌ಕ್ ನಗರ, ದೇವರಾಜ್  ಅರಸ್ ನಗರ, ಸಿದ್ದಾರ್ಥ ನಗರ, ದೇವಗಿರಿ-1, ಮತ್ತು 2, ಜಯನಗರ ಟಿ ಬ್ಲಾಕ್‌ನ ಒಂದು ಭಾಗ, 9ನೇ ಬ್ಲಾಕ್ ನ ಒಂದು ಭಾಗ, ಜಯನಗರ ಜಯನಗರ, 1 ಮತ್ತು 25ನೇ ಬ್ಲಾಕ್ 7 ಮತ್ತು 8ನೇ ಬ್ಲಾಕ್ , ಜಯನಗರ ಪೂರ್ವ, ಜಯನಗರ, ಯಡಿಯೂರು, ಕರಿಸಂದ್ರ, ಬಿ.ಎಸ್.ಕೆ. 2ನೇ ಹಂತ, ಯರಬ್‌ನಗರ.

ಇಂದಿನಿಂದಲೇ ಓಲಾ ಉಬರ್ ಆಟೋಗಳು ಬ್ಯಾನ್, ಸಹಾಯವಾಣಿ ಆರಂಭಿಸಿದ ಸಾರಿಗೆ ಇಲಾಖೆ

ಟೀರ್ಸ್ ಕಾಲೋನಿ, ಬನಗಿರಿ ನಗರ, ಸಿಟಿಬೆಡ್, ಕಾವೇರಿ ನಗರ, ಭವಾನಿ ನಗರ, ಕಾಮಾಕ್ಯ ಲೇಔಟ್, ಭುವನೆಶ್ವರಿ ನಗರ, ಕೃಷ್ಣಪ್ಪ ಲೇಔಟ್,ಇಟ್ಟಮಡು, ಹೊಸಕೆರೆಹಳ್ಳಿ, ಮುಕಾಂಬಿಕ ನಗರ, ದತ್ತಾತ್ರೆಯ ನಗರ, ಕೆರೆಕೊಡಿ, ಪುಷ್ಪಗಿರಿ ನಗರ, ಡಿಸೋಜಾ ನಗರ, ದ್ವಾರಕ ನಗರ, ಎನ್.ಸಿ.ಇ.ಆರ್.ಟಿ. ರೋಡ್, ಹೃಷಿಕೇಶ ನಗರ, ಗಾಂಧಿ ಬಜಾರ್, ಬಸವನಗುಡಿ, ಎಂ.ಡಿ ಬ್ಲಾಕ್, ಅಶೋಕ್ ನಗರ, ಬನಶಂಕರಿ, ಪ್ರಗತಿಪುರ, ಸರಬಂಡೆಪಾಳ್ಯ, ಕದಿರೇನಹಳ್ಳಿ, ಜೆ.ಹೆಚ್.ಬಿ.ಸಿ.ಎಸ್ ಲೇಔಟ್, ಪದ್ಮನಾಭ ನಗರ, ಆರ್.ಕೆ ಲೇಔಟ್, ಗುರುರಾಜ್ ಲೇಔಟ್, ಚಿಕ್ಕಲ್ಲಸಂದ್ರ, ಗೌಡನಪಾಳ್ಯ, ಮಂಜುನಾಥನಗರ, ಸಾರ್ವಬೌಮ ನಗರ, ಉದಯ್‌ನಗರ, ಉತ್ತರಹಳ್ಳಿ, ರಾಮಂಜನೇಯ ನಗರ, ಪಿ.ಪಿ. ಲೇಔಟ್, ಎಜಿ.ಎಸ್.ಲೇಔಟ್, ಅರೇಹಳ್ಳಿ, ಜೆ.ಕೆ.ಪುರ, ಶಾಂತಿನಗರ, ಅಕ್ಕಿತಿಮ್ಮೇನಹಳ್ಳಿ, ಭೈರಸಂದ್ರ, ಎಲ್.ಐ.ಸಿ ಕಾಲೋನಿ, ಆರ್‌ಬಿಐ ಕಾಲೋನಿ,  ಕಾರ್ಪೋರೇಷನ್ ಕಾಲೋನಿ, ಹೂವಿನ ಗಾರ್ಡನ್, ಸೋಮೇಶ್ವರ ನಗರ, ಹೊಂಬೇಗೌಡ ನಗರ, ಸಿದ್ಧಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆಪಿ ನಗರ 1,2 ಮತ್ತು 3ಫೇಸ್, ಜೀವನ್ ಭೀಮಾ ನಗರ, ಕಲ್ಲಹಳ್ಳಿ, ಲಕ್ಷ್ಮೀಪುರ, ಕದಿರಾಯನ ಪಾಳ್ಯ,ಚಿಕ್ಕಪೇಟೆ,  ಅರೇಕೆಂಪನಹಳ್ಳಿ, ಎಸ್.ಆರ್.ನಗರ, ಹೊಸೂರು ರಸ್ತೆ, ಲಸ್ಕರ್ ಹೊಸೂರು ರಸ್ತೆ, ಆಡುಗೋಡಿ, ಶಾಕಾಂಬರಿ ನಗರ, ನರೇನಹಳ್ಳಿ, ನಾರಾಯಣಪುರ, ಬಕ್ಷಿಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
 

click me!