ಸಮೋಸಾ ಪ್ರಿಯರೇ ಎಚ್ಚರ : ಬೆಂಗಳೂರಿಗೆ ಸಪ್ಲೈ ಆಗುವ ಈ ಘಟಕ ನೋಡಿದ್ರೆ ಜೀವನದಲ್ಲಿ ತಿನ್ನೋದೇ ಇಲ್ಲ

Published : Sep 03, 2026, 06:33 PM IST
samosa

ಸಾರಾಂಶ

ಸಮೋಸಾ ಪ್ರಿಯರು ಓದಲೇಬೇಕಾದ ಸ್ಟೋರಿ ಇದು. ನೀವು ಟೀ ಅಂಗಡಿಗಳ ಮುಂದೆ ನಿಂತು ತಿನ್ನುವ ಒಂದು ಸಮೋಸಾ ನಿಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಿಗುವ ಸಮೋಸಾ ಯಾವ ರೀತಿ ತಯಾರಾಗುತ್ತಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ನೆಲಮಂಗಲ: ಬಿಸಿಬಿಸಿಯಾದ ಈರುಳ್ಳಿ ಸಮೋಸಾ ನೋಡಿದರೆ ಯಾರಿಗೆ ತಾನೇ ಬಾಯಲ್ಲಿ ನೀರೂರಲ್ಲ? ರಸ್ತೆ ಬದಿಯ ಗಾಡಿಗಳಲ್ಲೋ ಅಥವಾ ಸಣ್ಣ ಹೋಟೆಲ್‌ಗಳಲ್ಲೋ ಸಿಗುವ ಈ ರುಚಿಕರ ಸಮೋಸಾಗಳನ್ನು ನಾವು ಆನಂದಿಸಿ ತಿನ್ನುತ್ತೇವೆ. ಆದರೆ, ನೀವು ತಿನ್ನುವ ಆ ಸಮೋಸಾ ಎಲ್ಲಿ ತಯಾರಾಗುತ್ತದೆ? ಯಾವ ರೀತಿ ತಯಾರಾಗುತ್ತದೆ ಎಂಬ ಕಹಿ ಸತ್ಯ ತಿಳಿದರೆ ನೀವು ಜೀವನದಲ್ಲಿ ಮತ್ತೆ ಸಮೋಸಾದತ್ತ ಮುಖ ಮಾಡಲಾರರಿ! ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಅಂತಹದ್ದೊಂದು ಆಘಾತಕಾರಿ ಸಮೋಸಾ ದಂಧೆ ಬೆಳಕಿಗೆ ಬಂದಿದೆ.

ನೆಲಮಂಗಲದ ಹರಿಶಿನಕುಂಟೆಯಲ್ಲಿರುವ ಸಮೋಸಾ ತಯಾರಿಸುವ ಗೋಡೌನ್ ಒಂದರಲ್ಲಿ ಆಹಾರ ಸುರಕ್ಷತೆಯ ಹೆಸರೇ ಇಲ್ಲದಂತೆ ಸಮೋಸಾ ತಯಾರಿಸಲಾಗುತ್ತಿದೆ. ಇಲ್ಲಿನ ದೃಶ್ಯಗಳನ್ನು ನೋಡಿದರೆ ನಿಜಕ್ಕೂ ಶಾಕ್ ಆಗುತ್ತೀರಾ.

  • ಸಮೋಸಾದ ಒಳಗೆ ಹಾಕುವ ಮಸಾಲೆಗೆ ಬಳಸುತ್ತಿರುವುದು ಸಂಪೂರ್ಣ ಕೊಳೆತು ಹೋದ ಈರುಳ್ಳಿ ಮತ್ತು ತರಕಾರಿಗಳನ್ನು!
  • ಸಮೋಸಾ ಹಿಟ್ಟು ಮತ್ತು ಹೂರಣದ ಮೇಲೆ ನೂರಾರು ನೊಣಗಳು ಮುತ್ತಿಕೊಂಡಿರುತ್ತವೆ. ಸ್ವಚ್ಛತೆಯ ಲವಲೇಶವೂ ಇಲ್ಲಿಲ್ಲ.
  • ಅಕ್ಕಪಕ್ಕದ ಮಾರುಕಟ್ಟೆಯಲ್ಲಿ ಬಿಸಾಡುವ ಅಥವಾ ಹಳಸಲು ತರಕಾರಿಗಳನ್ನು ತಂದು ಇಲ್ಲಿ 'ರುಚಿಕರ' ಸಮೋಸಾ ಸಿದ್ಧಪಡಿಸಲಾಗುತ್ತಿದೆ.

ದಿನಕ್ಕೆ 10 ಸಾವಿರ ಸಮೋಸಾ ಸಪ್ಲೈ!

ಕೇವಲ ನೆಲಮಂಗಲ ಮಾತ್ರವಲ್ಲದೆ ಬೆಂಗಳೂರಿನ ವಿವಿಧ ಭಾಗಗಳಿಗೆ ಇಲ್ಲಿಂದಲೇ ಸಮೋಸಾ ಸರಬರಾಜಾಗುತ್ತದೆ. ಪ್ರತಿದಿನ ಸುಮಾರು 5,000 ದಿಂದ 10,000 ಸಮೋಸಾಗಳು ಇಲ್ಲಿಂದ ಮಾರುಕಟ್ಟೆಗೆ ರವಾನೆಯಾಗುತ್ತವೆ. ಕಳೆದ ಒಂದು ವರ್ಷದಿಂದ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎನ್ನಲಾಗಿದೆ.

ಕೆಟ್ಟು ಹೋದ ಎಣ್ಣೆ, ಕೊಳೆತ ತರಕಾರಿ ಮತ್ತು ಅಶುಚಿಯಾದ ಜಾಗದಲ್ಲಿ ತಯಾರಾಗುವ ಈ ಸಮೋಸಾಗಳನ್ನು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಣ್ಣ ಮಕ್ಕಳು ಮತ್ತು ವೃದ್ಧರು ಇಂತಹ ಆಹಾರ ಸೇವಿಸಿದರೆ ತಕ್ಷಣವೇ ವಾಂತಿ, ಭೇದಿ ಅಥವಾ ಫುಡ್ ಪಾಯಿಸನಿಂಗ್ ಆಗುವ ಅಪಾಯವಿದೆ.

ಅಧಿಕಾರಿಗಳ ಕಣ್ಣಾಮುಚ್ಚಾಲೆ

ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು, ನೆಲಮಂಗಲದಲ್ಲಿ ಕಣ್ಣೆದುರೇ ನಡೆಯುತ್ತಿರುವ ಈ ಕೃತ್ಯವನ್ನು ಕಂಡು ಕಾಣದಂತೆ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಶ್ರೀರಕ್ಷೆಯಲ್ಲೇ ಈ ದಂಧೆ ನಡೆಯುತ್ತಿದೆಯೇ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಹೊರಗಡೆ ಸಿಗುವ ಅಗ್ಗದ ಬೆಲೆಯ ಸಮೋಸಾಗಳನ್ನು ತಿನ್ನುವ ಮುನ್ನ ಹತ್ತು ಬಾರಿ ಯೋಚಿಸಿ. ಎಲ್ಲಿಂದ ಸರಬರಾಜಾಗುತ್ತದೆ ಎಂಬ ಅರಿವಿರಲಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.

PREV
Read more Articles on
click me!

Recommended Stories

ಆಟೋ ಮೀಟರ್ ಜೊತೆಗೆ ಇವರ ಪ್ಯಾಷನ್ ಕೂಡ ಓಡುತ್ತೆ, ಹಗಲಿನಲ್ಲಿ ಚಾಲಕ, ಸಂಜೆಯಾದರೆ ಟೇಬಲ್ ಟೆನ್ನಿಸ್ ಕೋಚ್
Bengaluru: ಶ್ರೀರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು; ಸಿಎಂ ಡಿಕೆ ಶಿವಕುಮಾರ್