
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru authority) ನಗರದಲ್ಲಿನ (Bengaluru City) ಫುಟ್‌ಪಾತ್ ತೆರವು ಕಾರ್ಯಚರಣೆಯನ್ನು (Footpath clearance operation) ಆರಂಭಿಸಿದೆ. ಮಲ್ಲೇಶ್ವರಂ, ಶಿವಾಜಿನಗರ, ಜಯನಗರ, ನ್ಯಾಷನಲ್ ಕಾಲೇಜ್ ರೋಡ್ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಫುಟ್‌ಪಾತ್ ತೆರವು ನಡೆದಿದೆ. ಇದೀಗ ಜಯನಗರದ (Jayanagar) ರಸ್ತೆಬದಿ ವ್ಯಾಪಾರಿಗಳ ಸಂಘಟನೆ ಸ್ಮಾರ್ಟ್ ಶಾಪಿಂಗ್ ಹಬ್ (Smart Shopping Hub) ನಿರ್ಮಿಸುವಂತೆ ಒತ್ತಾಯಿಸಿದೆ.
ಜಯನಗರ ಟ್ರೇಡರ್ ಅಸೋಸಿಯೇಷನ್ (JTA-Jayanagar Traders Association) ಸುಮಾರು 25 ಕೋಟಿ ಬಜೆಟ್‌ನ ಸ್ಮಾರ್ಟ್ ಶಾಪಿಂಗ್ ಹಬ್ ಯೋಜನೆಗೆ ಚಾಲನೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಮೊದಲ ಬಾರಿಗೆ ಅಂದ್ರೆ 2017ರಲ್ಲಿ ಈ ಯೋಜನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. 2020ರಲ್ಲಿ ಸರ್ಕಾರ ಈ ಯೋಜನೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೋವಿಡ್-19 ಕಾಲಘಟ್ಟದಲ್ಲಿ (Covid 19 Pandemic) ಸ್ಮಾರ್ಟ್ ಶಾಪಿಂಗ್ ಹಬ್ ಯೋಜನೆಯ ಅನುದಾನವನ್ನು ತಡೆಹಿಡಿಯಲಾಗಿತ್ತು. ಫುಟ್‌ಪಾತ್ ಅತಿಕ್ರಮಣ ತೆರವು ಬೆನ್ನಲ್ಲೇ ಈ ಯೋಜನೆಗೆ ಅನುಮೋದನೆ ನೀಡುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಜಯನಗರದ ಸುಮಾರು 14 ರಸ್ತೆಗಳಲ್ಲಿ 1500ಕ್ಕೂ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಇದೇ ಭಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ಗಳಿದ್ದು, ರಾಜಧಾನಿಯ ಅತಿದೊಡ್ಡ ರೀಟೈಲ್ ಮಾರುಕಟ್ಟೆಯಾಗಿದೆ. ಹಾಗಾಗಿ ಇಲ್ಲೊಂದು ಅತ್ಯಾಧುನಿಕ ಸುಧಾರಿತ ಮಾರುಕಟ್ಟೆ ನಿರ್ಮಾಣ ಮಾಡೋದು ಸೂಕ್ತವಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಅಥವಾ ಬ್ರಿಗೇಡ್ ರೋಡ್‌ನಲ್ಲಿ ದೊಡ್ಡ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳಿವೆ. ಹಾಗೆಯೇ ಜಯನಗರದ ಮಾರುಕಟ್ಟೆಗೂ ಇಂತಹ ಶಾಪಿಂಗ್ ಹಬ್ ಬೇಕಿದೆ. ಮಾದರಿ ಶಾಪಿಂಗ್ ತಾಣವಾಗುವ ಎಲ್ಲಾ ಸಾಧ್ಯತೆಗಳನ್ನು ಈ ತಾಣ ಹೊಂದಿದೆ ಎಂದು ಜಯನಗರ ಟ್ರೇಡರ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಮಂದೋಟ್ ಹೇಳುತ್ತಾರೆ.
ಜಯನಗರ ಸುಮಾರು 5 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇಲ್ಲಿ ಮತ್ತಷ್ಟು ಆರ್ಥಿಕ ಚಟುವಟಿಕೆ ಸುಧಾರಣೆಗಾಗಿ ಉತ್ತಮ ಮೂಲಸೌಕರ್ಯ ಮತ್ತು ಸುಧಾರಿತ ಮಾರುಕಟ್ಟೆಯ ವಿನ್ಯಾಸದ ಅಗತ್ಯವಿದೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ಸುಧಾರಿತ ವಲಯದ ರಚನೆಯಾಗಬೇಕಿದೆ. ಸರ್ಕಾರ ಕೈಗಾರಿಕ ಪ್ರದೇಶ, ವಿಶೇಷ ಆರ್ಥಿಕ ವಲಯ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ. ಹಾಗೆಯೇ ಚಿಲ್ಲರೆ ಮಾರುಕಟ್ಟೆಗಳ ಸುಧಾರಣೆಯತ್ತ ಗಮನ ಹರಿಸಬೇಕಿದೆ ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಜಯನಗರದ ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಮಾಡಲಾಗಿದೆ. ಫುಟ್‌ಪಾತ್ ದುರಸ್ತಿ ಕಾರ್ಯವೂ ನಡೆಯುತ್ತಿದೆ. ವಿಶ್ವದರ್ಜೆಯ ಶಾಪಿಂಗ್ ಕಟ್ಟಡ ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು HRಗೆ ಅಶ್ಲೀಲ ಸಂದೇಶ ಕಳಿಸಿ ಕೊಲೆ ಬೆದರಿಕೆ ಹಾಕಿದ 24 ವರ್ಷದ ಉದ್ಯೋಗಕಾಂಕ್ಷಿ
ಪಬ್ಲಿಕ್ ವೈಫೈ, ವ್ಯಾಪಾರ ಮಾಹಿತಿ ಕೇಂದ್ರ, ಸಿಸಿಟಿವಿ, ಜಯನಗರ ಮಿತ್ರ ಎಂಬ ಸಹಾಯವಾಣಿ, ಸುಧಾರಿತ ಪಾರ್ಕಿಂಗ್, ಪಾದಾಚಾರಿಗಳಿಗೆ 10ನೇ ಮುಖ್ಯರಸ್ತೆ, ಕುಡಿಯುವ ನೀರಿನ ಸೌಲಭ್ಯ, ಸೈಕಲ್ ಟ್ರ್ಯಾಕ್, ಇವಿ ಚಾರ್ಜಿಂಗ್ ವ್ಯವಸ್ಥೆ, ಪೊಲೀಸ್ ಔಟ್‌ಪುಟ್, ಓಪನ್ ಏರ್ ಥಿಯೇಟರ್
ಇದನ್ನೂ ಓದಿ: ಆಗಸ್ಟ್ 5ಕ್ಕೆ ಕಾರಂತ ಬಡಾವಣೆ ನಿವೇಶನಕ್ಕೆ ಅರ್ಜಿ; ಬೆಲೆ ಎಷ್ಟು? ಮಧ್ಯಮ ವರ್ಗಕ್ಕೆ ಸಿಗುತ್ತಾ?