Bengaluru: ನೆಕ್ಸಸ್ ಮಾಲ್‌ನಲ್ಲಿ ಮುಂದುವರಿದ ಶೋಧ; 6 ಮಳಿಗೆಗಳಲ್ಲಿ 45 ಸಾವಿರ ದಂಡ

Published : Aug 30, 2026, 07:52 AM IST
Food

ಸಾರಾಂಶ

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲ ನೆಕ್ಸಸ್ ಮಾಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದ 6 ಮಳಿಗೆಗಳಿಗೆ ಅಧಿಕಾರಿಗಳು ಒಟ್ಟು 45 ಸಾವಿರ ರೂ. ದಂಡ ವಿಧಿಸಿದ್ದಾರೆ. ಕಸ ವಿಂಗಡಿಸದಿರುವುದು ಮತ್ತು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲ ನೆಕ್ಸಸ್ ಮಾಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದ ನೆಕ್ಸಸ್ ಮಾಲ್‌ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸತತ 2ನೇ ದಿನವೂ ಪರಿಶೀಲನೆ ಮುಂದುವರಿಸಿದ್ದು, ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಕಸ ವಿಂಗಡಿಸದೆ ಇರುವುದು ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, 6 ಮಳಿಗೆಗಳಿಗೆ 45 ಸಾವಿರ ದಂಡ ವಿಧಿಸಿದೆ.

ಸಬ್‌ವೇ ಮಳಿಗೆಗೆ ₹15 ಸಾವಿರ, ಕ್ಯಾಲಿಫೋರ್ನಿಯಾ ಬುರ್ರಿಟೋ ₹10 ಸಾವಿರ, ಟ್ಯಾಕೋ ಬೆಲ್, ಗೋಚುಜಾಂಗ್, ಡ್ರಿಂಕಲ್ ಮತ್ತು ಸ್ಕ್ವೀಸ್ ಮಳಿಗೆಗಳಿಗೆ ತಲಾ ₹5 ಸಾವಿರಗಳಂತೆ ದಂಡ ವಿಧಿಸಲಾಗಿದೆ.

ಕಸ ವಿಂಗಡಿಸದಿರುವುದು ಮತ್ತು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ

ಎಲ್ಲಾ ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳು ಹಾಗೂ ಮಾಲ್ ಮಳಿಗೆಗಳು ಕಡ್ಡಾಯವಾಗಿ ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ಮತ್ತು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತ್ಯಜಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ಪರಿಸರಕ್ಕೆ ಹಾನಿಯುಂಟು ಮಾಡುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ನಿರಂತರ ತಪಾಸಣೆ ನಡೆಸಿ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರೋಗ್ಯ ಪರಿವಿಕ್ಷಕರು ಹಾಗೂ ಮಾರ್ಷಲ್‌ಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಆರ್‌ಎಸ್‌ಎಸ್‌ ಅವಹೇಳನ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಜಾಮೀನು,. ಕೋರ್ಟ್ ಆದೇಶವೇನು? ಮುಂದಿನ ವಿಚಾರಣೆ ಯಾವಾಗ?

ಇದನ್ನೂ ಓದಿ: ಬೆಂಗಳೂರಿನ ಈ 20 ರಸ್ತೆಗಳಲ್ಲಿ ಶೀಘ್ರ ಪಾರ್ಕಿಂಗ್ ಶುಲ್ಕ: ಬೈಕ್, ಕಾರ್‌ಗೆ ಎಷ್ಟು ಹಣ?

PREV
Read more Articles on
click me!

Recommended Stories

ಇಂದಿರಾನಗರದಲ್ಲಿ 1 ರೂಪಾಯಿಗೆ ಆಟೋ ರೈಡ್! 'ಬೆಂಗಳೂರು ಯಾಕೆ ಬೆಸ್ಟ್' ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ!
Gruha Lakshmi re-verify: ಗೃಹಲಕ್ಷ್ಮಿಯರಿಗಾಗಿ ಮನೆಮನೆ ಸಮೀಕ್ಷೆ; ಅನರ್ಹ ಫಲಾನುಭವಿಗಳ ಪತ್ತೆಗೆ ಬೇಟೆ ಶುರು!