226 ಸೇತುವೆ, 57 ಸುರಂಗ, 108 ತಿರುವು, ಪ್ರಕೃತಿ ನಡುವೆ ಬೆಂಗಳೂರು ಮಂಗಳೂರು ವಂದೇ ಭಾರತ್ ಬ್ಯೂಟಿ

Published : Aug 28, 2026, 07:04 PM IST
Bengaluru Mangaluru Vande Bharat Beauty

ಸಾರಾಂಶ

ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲಿನ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಪ್ರಕೃತಿ ನಡುವೆ ಸಾಗುತ್ತಿರುವ ರೈಲು 227 ಸೇತುವೆ, 57 ಸುರಂಗಗಳಿಂದ ಹಾದು ಹೋಗುತ್ತಿದೆ. ಬೆಂಗಳೂರು-ಮಂಗಳೂರು ದಾರಿಯಲ್ಲಿದೆ ಹಲವು ಅಚ್ಚರಿ

ಬೆಂಗಳೂರು (ಆ.28) ಪಶ್ಟಿಮ ಘಟ್ಟಗಳ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇದರ ನಡುವೆ ಬಳುತ್ತಾ ಸಾಗುವ ವಂದೇ ಭಾರತ್ ರೈಲಿನ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಏರಿಯಲ್ ವಿಡಿಯೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇಸರಿ ಬಣ್ಣದ ವಂದೇ ಭಾರತ್ ರೈಲು ಈ ಹಚ್ಚ ಹಸುರಿನ ಪ್ರಕೃತಿ ನಡುವೆ ಸಾಗುತ್ತಿರುವ ದೃಶ್ಯ ಇದಾಗಿದೆ. ವಿಶೇಷ ಅಂದರೆ ಬೆಂಗಳೂರು ಮಂಗಳೂರು ಭಾರತೀಯ ರೈಲ್ವೇಯ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಕಾರಣ ಈ ಪೈಕಿ ಸಕಲೇಶಪುರದಿಂದ ಸುಬ್ರಹ್ಮಣ್ಯವರೆಗಿನ 55 ಕಿಲೋಮೀಟರ್ ರಸ್ತೆ ನಿಜಕ್ಕೂ ಹಲವು ಅಚ್ಚರಿಗಳ ತಾಣ.

ಸುರಂಗ, ಸೇತುಗಳ ಮೇಲೆ ಪ್ರಯಾಣ

ಮಂಜು ಮುಸುಕಿದ ವಾತಾರಣವ, ಸುರಂಗ, ಸೇತುವೆ, ನದಿ, ಝರಿ, ಜಲಾಪತ ಸೇರಿದಂತೆ ಹಲವು ಸೌಂದರ್ಯಗಳ ನಡುವೆ ರೈಲು ಸಾಗಲಿದೆ. ಪಶ್ಚಿಮ ಘಟ್ಟಗಳ ನಡುವೆ ಸಾಗುವಾಗ ರೈಲು ಬರೋಬ್ಬರಿ 57 ಸುರಂಗದ ಮೂಲಕ ಸಾಗಲಿದೆ. 226 ಸೇತುಗಗಳು ಸಿಗಲಿದೆ. ಕೆಲವು ಸಣ್ಣ ಸೇತುವೆಗಳಾಗಿದ್ದರೆ, ಮತ್ತೆ ಕೆಲವು ದೊಡ್ಡದು. ಇನ್ನು 108 ತಿರುವುಗಳು ಸಿಗಲಿದೆ. ಕಡಿದಾದ ಬೆಟ್ಟ, ದೈತ್ಯ ಮರಗಳು, ಇಳಿಜಾರುಗಳ ನಡುವೆ ರೈಲು ಸಾಗಲಿದೆ. ಮಳೆಗಾಲದಲ್ಲಿ ಭೂಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ವಿಶೇಷ ಅಂದರೆ ಮಳೆಗಾಲದಲ್ಲಿ ಈ ಪ್ರಯಾಣ ಮತ್ತಷ್ಟು ಆಹ್ಲಾದಕರ. ಪ್ರಮುಖವಾಗಿ 100ಕ್ಕೂ ಹೆಚ್ಚು ಜಲಪಾತಗಳು ಕಾಣಿಸಿಗುತ್ತದೆ. ಇನ್ನು ಹಚ್ಚ ಹಸುರಿನ ನಡುವೆ ಬೆಳ್ಳಿನ ಹಾಲಿನಂತೆ ಹರಿಯುವ ನದಿಗಳು, ತೊರೆಗಳು ಎಲ್ಲೆಡೆ ಕಾಣುತ್ತದೆ.

ಅತ್ಯಂತ ಸವಾಲಿನ ಮಾರ್ಗ

ಭಾರತೀಯ ರೈಲ್ವೇ ಇಲಾಖೆ ಭಾರತದ ಹಲವು ಪ್ರದೇಶಗಳಲ್ಲಿ ಸವಾಲಿನ ಮಾರ್ಗ ರಚಿಸಿದೆ. ಬೆಂಗಳೂರು-ಮಂಗಳೂರು ಇದೇ ರೀತಿಯ ಅತ್ಯಂತ ಸವಾಲಿನ ಮಾರ್ಗವಾಗಿದೆ. ಅದರಲ್ಲೂ 55 ಕಿಲೋಮೀಟರ್ ಪಶ್ಟಿಮ ಘಟ್ಟಗಳ ನಡುವೆ ಮಾರ್ಗ ದುರ್ಗಮವಾಗಿತ್ತು. ಹಲವು ವರ್ಷಗಳೇ ಬೇಕಾಯಿತು. ಪರಿಸರ, ಬಂಡೆಗಳು, ಕಡಿದಾಟ ಬೆಟ್ಟ, ಝರಿಗಳು ಸೇರಿದಂತೆ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಎಂಜಿನೀಯರ್ ಈ ಮಾರ್ಗ ರಚಿಸಿದ್ದಾರೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ರೈಲು ಮಾರ್ಗ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ವಿಶೇಷ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ಭೂಕುಸಿತ ಆತಂಕ ಹೆಚ್ಚಿರುವ ಕಾರಣ ಸುರಕ್ಷತಾ ತಂಡಗಳು ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ವಂದೇ ಭಾರತ್ ಯಶಸ್ವಿಯಾಗಿ ಪ್ರಯಾಣ ಆರಂಭಿಸಿದೆ. ಇದರೊಂದಿಗೆ ಬೆಂಗಳೂರು ಹಾಗೂ ಮಂಗಳೂರಿಗೆ ವಂದೇ ಭಾರತ್ ಸಂಪರ್ಕ ಸಾಧ್ಯವಾಗಿದೆ.

PREV
Read more Articles on
click me!

Recommended Stories

ಅಮ್ಮನಿಗೆ ದುಡ್ಡು ಕೊಡಬೇಕಿತ್ತು, ಆದರೆ... 'ಹಾಸ್ಪಿಟಲ್ ಎಮರ್ಜೆನ್ಸಿ' ಅಂತ ಹೇಳಿ ರಾಪಿಡೋ ಡ್ರೈವರ್‌ಗೆ ವಂಚನೆ!
ಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?