Idgah Ground Row; ಶಾಸಕ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮುಖಂಡರ ಸಭೆ

Published : Jul 08, 2022, 11:56 AM IST
Idgah Ground Row; ಶಾಸಕ ಜಮೀರ್‌ ಅಹಮದ್‌  ನೇತೃತ್ವದಲ್ಲಿ ಮುಖಂಡರ ಸಭೆ

ಸಾರಾಂಶ

ಚಾಮರಾಜಪೇಟೆ ಆಟದ ಮೈದಾನ  ವಿವಾದಕ್ಕೆ ಜು.12ರಂದು  ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಜಮೀರ್‌ ಅಹಮದ್‌ ಖಾನ್‌ ಶುಕ್ರವಾರ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಸಭೆ ಕರೆದಿದ್ದಾರೆ.

ಬೆಂಗಳೂರು (ಜು.8): ಚಾಮರಾಜಪೇಟೆ ಆಟದ ಮೈದಾನ ಸಾರ್ವಜನಿಕರ ಆಸ್ತಿ ಹಾಗೂ ಮಕ್ಕಳ ಆಟದ ಮೈದಾನವಾಗಿ ಉಳಿಯಬೇಕೆಂದು ಆಗ್ರಹಿಸಿ ಜು.12ರಂದು ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಕರೆ ನೀಡಿವ ಹಿನ್ನೆಲೆಯಲ್ಲಿ ಶಾಸಕ ಜಮೀರ್‌ ಅಹಮದ್‌ ಖಾನ್‌ ಶುಕ್ರವಾರ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಸಭೆ ಕರೆದಿದ್ದಾರೆ.

ಶುಕ್ರವಾರ ಚಾಮರಾಜಪೇಟೆಯ ವೆಂಕಟರಾಮ್‌ ಕಲಾ ಭವನದಲ್ಲಿ ಸಭೆ ಬೆಳಗ್ಗೆ 10ಕ್ಕೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಬಂದ್‌ಗೆ ಕರೆ ನೀಡಿರುವ ಒಕ್ಕೂಟದ ಪ್ರಮುಖರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಜತೆಗೆ ಮೈದಾನ ವಿವಾದದ ಕುರಿತು ಚರ್ಚಿಸಲಾಗುತ್ತದೆ.

ಬಿಬಿಎಂಪಿ ಮಾಜಿ ಸದಸ್ಯರ ಜತೆಗೆ ಮಲೆಮಹದೇಶ್ವರ ಸ್ವಾಮಿ ದೇಗುಲ ಟ್ರಸ್ಟ್‌, ಅಯ್ಯಪ್ಪ ದೇವಸ್ಥಾನ ಟ್ರಸ್ಟ್‌, ಸುಬ್ರಹ್ಮಣ್ಯಸ್ವಾಮಿ ಭಜನಾ ಸೇವಾ ಮಂಡಳಿ, ಚಾಮರಾಜಪೇಟೆ ಕನ್ನಡ ರಾಜ್ಯೋತ್ಸವ ಸಮಿತಿ, ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ, ವರ್ತಕರ ಸಂಘ, ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿ 10ಕ್ಕೂ ಹೆಚ್ಚಿನ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸಂಸದ ಪಿ.ಸಿ.ಮೋಹನ್‌, ಮಾಜಿ ಶಾಸಕಿ ಪ್ರಮಿಳಾ ನೇಸರ್ಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Idgah Ground Row; ಸಿಗ್ನಲ್‌ನಲ್ಲಿ ಚಾಪೆ ಹಾಸಿ ಪ್ರಾರ್ಥಿಸುವಂತಿಲ್ಲ: BBMP ಮುಖ್ಯ ಆಯುಕ್ತ

ಚಾಮರಾಜಪೇಟೆ ಮುಖಂಡರು, ಪಾಲಿಕೆ ಮಾಜಿ ಸದಸ್ಯರಿಗೆ ಆಹ್ವಾನ ಸಭೆಗೆ ಆಹ್ವಾನ ನೀಡಿರುವ ಮಾಜಿ ಕಾರ್ಪೊರೇಟರ್  ಚಂದ್ರಶೇಖರ್ ಮಾತನಾಡಿ,  ಲೋಕ ಸಭೆ ಸದಸ್ಯರಾದ ಪಿಸಿ ಮೋಹನ್ ಗೆ ಆಹ್ವಾನ ನೀಡಿದ್ದೇವೆ . ಎಮ್‌ಎಲ್‌ಎ ಜಮೀರ್ ಅಹ್ಮದ್ ಅವ್ರಿಗೆ ಹೇಳಿದ್ದೇವೆ. ಮಾಜಿ ಕಾರ್ಪೊರೇಟರ್ ಗಳು ಸಭೆಯಲ್ಲಿ ಭಾಗವಹಿಸುತ್ತಾರೆ.  ಸ್ಥಳೀಯ ಶಾಸಕರು ಆಟದ ಮೈದಾನವನ್ನು ಉಳಿಸಿಕೊಂಡು ಹೋಗ್ಬೇಕು ಅನ್ನುದು ನಮ್ಮ ಆಸೆ. ನಾವು ಇರುವವರೆಗೂ ಆಟದ ಮೈದಾನ ಉಳಿಸಿಕೊಂಡು ಹೋಗ್ತೀವಿ ಅಂತ ತಿಳಿಸಲಿ. ಹಾಗೆ ತಿಳಿಸಿದ್ರೆ ನಾಗರೀಕ ವೇದಿಕೆಗೆ ಬಂದ್ ಕೈ ಬಿಡುವಂತೆ ಮನವಿ ಮಾಡುತ್ತೇವೆ.

ಬಿಬಿಎಂಪಿ ಆಯುಕ್ತರು ಹೇಳಿದ ಹೇಳಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ. ಇದು 45 ವರ್ಷಗಳಿಂದ ಹೀಗೆ ಇದೆ ಅವ್ರು ನಮಾಜ್ ಮಾಡಿಕೊಂಡು ಹೋಗ್ತಾ ಇದ್ದಾರೆ ನಾವು ಆಟಾಡ್ಕೊಂಡು ಹೋಗ್ತಾ ಇದ್ದೀವಿ. ಇವಾಗ ಬಿಬಿಎಂಪಿ ಕಮಿಷಿನರ್ ನೀಡಿದ ಗೊಂದಲದಿಂದನೇ ಇವೆಲ್ಲ ಸೃಷ್ಟಿ ಆಗಿದೆ. ಅದನ್ನು ಸರಿ ಪಡಿಸಲು ಈ ಸಭೆಯಲ್ಲಿ ಪ್ರಯತ್ನ ಪಡಲಾಗುವುದು ಎಂದಿದ್ದಾರೆ.

ಈದ್ಗಾ ವಿವಾದ: 12 ರಂದು ಚಾಮರಾಜಪೇಟೆ ಬಂದ್‌, ಮೈದಾನ ಹೆಸರು ಬದಲಾಯಿಸಲು ನಾಗರಿಕರ ನಿರ್ಧಾರ!

ಇನ್ನೊಂದೆಡೆ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ (Idga ground) ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈದ್ಗಾ ಮೈದಾನ ಬಿಬಿಎಂಪಿ (BBMP) ಯ ಆಸ್ತಿ ಅನ್ನೋ ಬಗ್ಗೆ ದಾಖಲೆ ಪತ್ತೆಯಾಗಿದೆ. ಈ ಹಿಂದೆ ಬಿಬಿಎಂಪಿ ಕೂಡ ಮೈದಾನ ನಮಗೆ ಸೇರಿದ್ದು ಅಂತಾ ಹೇಳಿಕೊಂಡಿತ್ತು, ಆದ್ರೆ ಅದರ ದಾಖಲೆಗಳು ಸಿಗದೇ ಸುಮ್ಮನಾಗಿತ್ತು. ಇದೀಗ ಈದ್ಗಾ ಮೈದಾನ ಬಿಬಿಎಂಪಿಯ ಆಸ್ತಿ ಎಂಬ ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ.

2021ರ ಸರ್ವೇ ಪ್ರಕಾರ 299 ಆಸ್ತಿ ಬಿಬಿಎಂಪಿಗೆ ಸೇರಿದೆ. 299 ಆಸ್ತಿ ಪೈಕಿ ಈದ್ಗಾ ಮೈದಾನವೂ ಬಿಬಿಎಂಪಿಯ ಆಸ್ತಿ ಎಂದು ಗುರುತಿಸಲಾಗಿದೆ.  2017ರಲ್ಲಿ ಆಟದ ಮೈದಾನಗಳ ಸಮೀಕ್ಷೆ ನಡೆಸಿದ್ದ ಬಿಬಿಎಂಪಿಯ ದಾಖಲೆಯಲ್ಲಿ ಈ ಅಂಶ ಪತ್ತೆಯಾಗಿದೆ. ಒಟ್ಟು 9016 ಚದರ ಮೀಟರ್ ಇರುವ ಚಾಮರಾಜಪೇಟೆ ಮೈದಾನಲ್ಲಿ ನಮಾಜ್ ಮಾಡುವ ಟವರ್ ನಿರ್ಮಾಣದ ಬಗ್ಗೆ ಉಲ್ಲೇಖ ಇಲ್ಲ ಎಂದು ಹೇಳಲಾಗುತ್ತಿದೆ.

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ: ಸಚಿವ ಎಂ.ಬಿ.ಪಾಟೀಲ್‌