ಈ ಜಾಗದಲ್ಲಿ ನೀವು ಸೆಕೆಂಡ್‌ಗಳ ಕಾಲವೂ ವಾಹನ ಪಾರ್ಕಿಂಗ್ ಮಾಡುವಂತಿಲ್ಲ..!

By Anusha Kb  |  First Published Jul 5, 2022, 4:29 PM IST

ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂದೆಲ್ಲಾ ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಟ್ರಾಫಿಕ್‌ ಸಮಸ್ಯೆ ಹಾಗೂ ಪಾರ್ಕಿಂಗ್‌ ಸಮಸ್ಯೆ ನಿತ್ಯದ ಗೋಳು. ಮೆಟ್ರೋ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.  


ಬೆಂಗಳೂರು: ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂದೆಲ್ಲಾ ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಟ್ರಾಫಿಕ್‌ ಸಮಸ್ಯೆ ಹಾಗೂ ಪಾರ್ಕಿಂಗ್‌ ಸಮಸ್ಯೆ ನಿತ್ಯದ ಗೋಳು. ಮೆಟ್ರೋ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.  ಅದರಲ್ಲೂ ಬೆಳಗ್ಗೆ ಎಲ್ಲರೂ ಕೆಲಸಕ್ಕೆ ತೆರಳುವ ಹಾಗೂ ಮರಳುವಂತಹ ಪ್ರಮುಖ ಸಮಯಗಳಲಂತೂ ಟ್ರಾಫಿಕ್ ವಿಪರೀತವಾಗಿರುತ್ತದೆ. ರಸ್ತೆಯ ಪ್ರತಿ ಇಂಚಿನಲ್ಲೂ ಕಾರುಗಳ ಚಕ್ರಗಳು ಕಾಣಿಸುತ್ತಿರುತ್ತವೆ. ಹೀಗಾಗಿ ವಾಹನಗಳ ಸಂಖ್ಯೆ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲ ಸೆಕೆಂಡುಗಳ ಕಾಲವೂ ಕೆಲವೊಮ್ಮೆ ಪಾರ್ಕಿಂಗ್ ಮಾಡಲು ಮಹಾನಗರಿಯಲ್ಲಿ ಸ್ಥಳವಿಲ್ಲದಂತಾಗಿದೆ. ಹೆಚ್ಚು ಟ್ರಾಫಿಕ್‌ ಜಾಮ್‌ ಉಂಟಾಗದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ಜಾಗಗಳನ್ನು ನಿಗದಿಪಡಿಸಲಾಗಿದೆ. 

ಒಂದು ವೇಳೆ ಇದನ್ನು ಮೀರಿದವರನ್ನು ಶಿಕ್ಷಿಸಲು ಪಾರ್ಕಿಂಗ್ ಮಾರ್ಷಲ್‌ಗಳು ಮತ್ತು ಪಾರ್ಕಿಂಗ್‌ ಅಲ್ಲದ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹೊತ್ತೊಯ್ಯಲು ಟ್ರಕ್‌ಗಳು ನಗರಗಳಲ್ಲಿ ಸುಳಿದಾಡುತ್ತಿರುತ್ತವೆ. ಅದಾಗ್ಯೂ ಕೆಲವರು ಪಾರ್ಕಿಂಗ್ ನಿಯಮಗಳ ಬಗ್ಗೆ ತೀರಾ ನಿರ್ಲಕ್ಷ್ಯ ತೋರುತ್ತಿರುತ್ತಾರೆ. ಎಲ್ಲಿ ಪಾರ್ಕಿಂಗ್‌ ನಿಷೇಧ ಇದೆಯೋ ಅಲ್ಲೇ ವಾಹನಗಳನ್ನು ನಿಲ್ಲಿಸಿ ತೆರಳುತ್ತಾರೆ. ಇದರಿಂದ ಅನೇಕರಿಗೆ ತೊಂದರೆ ಉಂಟಾಗುತ್ತದೆ. 

Tap to resize

Latest Videos

ಈ ಕಾರಣಕ್ಕೆ ಬೆಂಗಳೂರಿನಲ್ಲಿ (Bengaluru) ಕೆಲವು ಮನೆಗಳ ಮಾಲೀಕರು ತಮ್ಮ ಮನೆ ಮುಂದೆ ವಾಹನ ನಿಲ್ಲಿಸದಿರುವಂತೆ ಮನೆ ಮುಂದೆಯೇ ನೋ ಪಾರ್ಕಿಂಗ್ ಬೋರ್ಡ್‌ ಅಳವಡಿಸಿರುತ್ತಾರೆ. ಅಂತಹ ನೋ ಪಾರ್ಕಿಂಗ್ ಬೋರ್ಡ್‌ (No Parking Board) ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರ ಆದಿತ್ಯ ಮೊರಾರ್ಕ (Aditya Morark) ಅವರು ನೋ ಪಾರ್ಕಿಂಗ್‌ನ ವಿಭಿನ್ನ ಬೋರ್ಡ್‌ಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬೆಂಗಳೂರಿನ ಕೋರಮಂಗಲದ ಮನೆ ಮುಂದೆ ಇದ್ದ ನೋ ಪಾರ್ಕಿಂಗ್ ಬೋರ್ಡ್ ಇದಾಗಿದೆ. 

ಈ ಎರಡು ಬೋರ್ಡ್‌ಗಳಲ್ಲಿ ಒಂದು ಬೋರ್ಡ್‌ನಲ್ಲಿ, ಇಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಯೋಚನೆಯೂ ಮಾಡದಿರಿ' ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ನೋ ಪಾರ್ಕಿಂಗ್ ಕೇವಲ ಐದು ನಿಮಿಷಕ್ಕೂ ಇಲ್ಲ, 30 ಸೆಕೆಂಡ್‌ಗೂ ಇಲ್ಲ, ಎಂದೆಂದಿಗೂ ಇಲ್ಲ ಎಂದು ಅವರು ಬರೆದಿದ್ದಾರೆ (No parking, not 5 minutes, not 30 seconds, not at all!)

ಕೋರಮಂಗಲದ (Koramangala) ಮನೆಗಳ ಮಾಲೀಕರು ವಾಹನ ಮಾಲೀಕರ ಬಗ್ಗೆ ಯಾವುದೇ ಕರುಣೆಯನ್ನು ಹೊಂದಿಲ್ಲ ಎಂದು ಈ ಫೋಟೋಗಳನ್ನು ಪೋಸ್ಟ್ ಮಾಡಿ ಆದಿತ್ಯ ಮೊರಕಾ (Aditya Morarka) ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಿಟ್ವಿಟ್ ಮಾಡಿದ್ದಾರೆ. ಅನೇಕರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಕೆಲವರು ಈ ಬೋರ್ಡ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಪಾರ್ಕಿಂಗ್‌ ಇಲ್ಲ ಎಂದು ಹೇಳುವುದಕ್ಕೆ ಅವರಿಗೆ ಕಾನೂನಿನಲ್ಲಿ ಅಧಿಕಾರ ಇದೆಯೇ ಎಂದು ಒಬ್ಬರು ಪ್ರಶ್ನಿಸಿದರು. 

ಯಾಕೆ ಮತ್ತೊಬ್ಬರ ಮನೆ ಮುಂದೆ ಪಾರ್ಕಿಂಗ್ ಮಾಡಬೇಕು.  ಪಾರ್ಕಿಂಗ್‌ಗೆ ನಿಮ್ಮದೇ ಜಾಗವನ್ನು ಹುಡುಕಿಕೊಳ್ಳಿ, ಲಕ್ಷಾಂತರ ಹಣ ಕೊಟ್ಟು ಕಾರು ಖರೀದಿಸುವ ನೀವು ಅದನ್ನು ನಿಲ್ಲಿಸುವುದಕ್ಕೂ ನಿಮ್ಮ ಕಾಪೌಂಡ್‌ನಲ್ಲಿ ಜಾಗ ಮಾಡಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಅಂಕಲ್‌ಗಳು ತಮ್ಮ ಮನೆ ಮುಂದೆ ವಾಹನ ದಾಟಿ ಹೋಗಲು ಕೂಡ ಬಿಡುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
 

click me!