Covid 19 cases ಬೆಂಗಳೂರಿನಲ್ಲಿ 118 ಮಂದಿಗೆ ಕೊರೋನಾ ಸೋಂಕು!

By Kannadaprabha NewsFirst Published May 16, 2022, 4:40 AM IST
Highlights

-ಪಾಸಿಟಿವಿಟಿ ದರ ಶೇ.1.07, 100 ಮಂದಿ ಚೇತರಿಕೆ
- ನಗರದಲ್ಲಿ ಒಂಬತ್ತು ಕಂಟೈನ್ಮೆಂಟ್‌ ವಲಯ
- ಒಂದೂ ಸಾವಿಲ್ಲ, ನಿಯಂತ್ರಣದಲ್ಲಿ ಕೋವಿಡ್

ಬೆಂಗಳೂರು(ಮೇ.16): ನಗರದಲ್ಲಿ ಭಾನುವಾರ 118 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.1.07 ಇದ್ದು, 100 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.ನಗರದಲ್ಲಿ ಒಟ್ಟು 1,810 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಮೂವರು ಮತ್ತು ಸಾಮಾನ್ಯ ವಾರ್ಡ್‌ನಲ್ಲಿ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

ಭಾನುವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ. ಒಟ್ಟು ಒಂಬತ್ತು ಕಂಟೈನ್ಮೆಂಟ್‌ ವಲಯಗಳಿವೆ. ಮಹದೇವಪುರದಲ್ಲಿ 39 ಪ್ರಕರಣ ಪತ್ತೆಯಾಗಿದ್ದು, ಶೇ.2.61 ಪಾಸಿಟಿವಿಟಿ ಇದೆ. ಉಳಿದಂತೆ ಪೂರ್ವ 23, ಬೊಮ್ಮನಹಳ್ಳಿ 19, ದಕ್ಷಿಣ 12, ಪಶ್ಚಿಮ 7, ಯಲಹಂಕ 6, ಆರ್‌ಆರ್‌ ನಗರ 5 ಮತ್ತು ದಾಸರಹಳ್ಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ.

Covid 19 cases ಕೋವಿಡ್‌ ಸೋಂಕಿನ ಮೊದಲ ಮಾಹಿತಿ ಬೆನ್ನಲ್ಲೇ ಉ.ಕೊರಿಯಾದಲ್ಲಿ 6 ಸಾವು!

ಭಾನುವಾರ 11,965 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1407 ಮಂದಿ ಮೊದಲ ಡೋಸ್‌, 4211 ಮಂದಿ ಎರಡನೇ ಡೋಸ್‌ ಮತ್ತು 6347 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 12,668 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10,263 ಆರ್‌ಟಿಪಿಸಿಆರ್‌ ಹಾಗೂ 2405 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಒಂದೂ ಸಾವಿಲ್ಲ, ನಿಯಂತ್ರಣದಲ್ಲಿ ಕೋವಿಡ್
ರಾಜ್ಯದಲ್ಲಿ ಭಾನುವಾರ 126 ಮಂದಿಗೆ ಸೋಂಕು ತಗುಲಿದ್ದು, 103 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.ಸದ್ಯ 1891 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 18,566 ನಡೆದಿದ್ದು, ಪಾಸಿಟಿವಿಟಿ ದರ ಶೇ 0.8 ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 490 ಕಡಿಮೆಯಾಗಿವೆ. ಆದರೆ, ಹೊಸ ಪ್ರಕರಣಗಳು 23 ಏರಿಕೆಯಾಗಿವೆ.

ಬೆಂಗಳೂರು 118, ಹಾಸನ 2, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಒಬ್ಬರಿಗೆ ಸೋಂಕು ತಗುಲಿದೆ. 24 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.ವಾರಾದ ಆರಂಭದಿಂದಲೂ 150 ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು ಶನಿವಾರ 100 ಆಸುಪಾಸಿಗೆ ತಗ್ಗಿದ್ದವು. ಆದರೆ, ಮತ್ತೆ ಏರಿಕೆಯಾಗಿವೆ. ಸತತ ಆರನೇ ದಿನ ಸೋಂಕಿತರ ಸಾವಿಲ್ಲ. ಒಟ್ಟಾರೆ ರಾಜ್ಯದಲ್ಲಿ ಈವರೆಗೆ 39.49 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.07 ಲಕ್ಷ ಮಂದಿ ಗುಣಮುಖರಾಗಿದ್ದು, 40,063 ಮಂದಿ ಸಾವಿಗೀಡಾಗಿದ್ದಾರೆ.

Covid cases ಭಾರತದಲ್ಲಿ 2,841 ಕೋವಿಡ್ ಪ್ರಕರಣ ಪತ್ತೆ, 9 ಸಾವು!

ದ.ಕ.ದಲ್ಲಿ ಒಬ್ಬರಿಗೆ ಕೊರೋನಾ ಪತ್ತೆ
ದ.ಕ. ಜಿಲ್ಲೆಯಲ್ಲಿ ಭಾನುವಾರ ಒಂದು ಕೊರೋನಾ ಕೇಸ್‌ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 18. ಜಿಲ್ಲೆಯ ಕೋವಿಡ್‌ ಪಾಸಿಟಿವಿಟಿ ದರ ಶೇ. 0.20 ಆಗಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,35,547ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 1,33,679 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ.

ಅಪಾರ್ಟ್‌ಮೆಂಟ್‌ನಲ್ಲಿ 5+ ಮಂದಿಗೆ ಸೋಂಕು
ಗರದಲ್ಲಿ ಶನಿವಾರ 96 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.07ಕ್ಕೆ ಇಳಿಕೆಯಾಗಿದೆ. 89 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.ನಗರದಲ್ಲಿ ಒಟ್ಟು 1,792 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಮೂವರು ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

ಶನಿವಾರ ಪೂರ್ವ ವಲಯದ ಅಪಾರ್ಚ್‌ಮೆಂಟ್‌ ಒಂದರಲ್ಲಿ ಐದಕ್ಕಿಂತ ಹೆಚ್ಚು ಕೊರೋನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಎಂಟರಿಂದ ಒಂಬತ್ತಕ್ಕೆ ಏರಿಕೆಯಾಗಿದೆ. ಮಹದೇವಪುರದಲ್ಲಿ 39 ಪ್ರಕರಣ ಪತ್ತೆಯಾಗಿದ್ದು ಶೇ.2.55 ಪಾಸಿಟಿವಿಟಿ ಇದೆ. ಉಳಿದಂತೆ ಪೂರ್ವ 23, ಬೊಮ್ಮನಹಳ್ಳಿ 16, ದಕ್ಷಿಣ 11, ಪಶ್ಚಿಮ 7, ಯಲಹಂಕ 6, ಆರ್‌ ಆರ್‌ ನಗರ 4 ಮತ್ತು ದಾಸರಹಳ್ಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ.ಶನಿವಾರ 11,776 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ.

click me!