ಬಿರು ಬೇಸಿಗೆಯಲ್ಲಿ ಬೆಂಗಳೂರು ಮಸೂರಿಗಿಂತಲೂ ಕೂಲ್ ಜನರು ಫುಲ್ ಖುಷ್: ಟ್ವಿಟ್ಟರ್‌ನಲ್ಲಿ ಟ್ರೆಂಡ್

By Suvarna NewsFirst Published May 13, 2022, 5:27 PM IST
Highlights
  • ಬೇಸಿಗೆಯಲ್ಲಿಯೂ ಬಲು ರೋಮ್ಯಾಂಟಿಕ್ ಆದ ಬೆಂಗಳೂರು
  • ಮಸೂರಿ, ಶಿಮ್ಲಾದಲ್ಲೂ ಇರದ ಚಿಲ್ಲಿಂಗ್ ವೆದರ್
  • ಟ್ವಿಟ್ಟರ್‌ನಲ್ಲಿ ಬೆಂಗಳೂರು ವೆದರ್ ಬಗ್ಗೆ ಫುಲ್ ಟಾಕ್

ದಿಲ್ಲಿ ಸೇರಿ ಉತ್ತರ ಭಾರತದ ನಗರಗಳು ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರ ಬಿರು ಬೇಸಿಗೆಯಲ್ಲೂ ಡಿಸೆಂಬರ್‌ನಂತಾಗಿದೆ. ಇದು ಚಳಿಗಾಲವೋ, ಬೇಸಿಗೆಯೋ ಎಂಬ ಅನುಮಾನ ಶುರುವಾಗಿದ್ದು, ಬೀರುವಿನಲ್ಲಿ ಬೆಚ್ಚಗೆ ಮಡಿಸಿಟ್ಟಿದ್ದ ಶಾಲು, ಸ್ಟೆಟರ್‌ಗಳು ಹೊರ ಬಂದಿವೆ. ಮಸೂರಿಯಲ್ಲಿಯೂ ಇರದಂಥ ವೆದರ್ ಬೆಂಗಳೂರಲ್ಲಿದ್ದು, ಅಬ್ಬಾ ಬೆಂಗಳೂರಿಗರು ಅದೃಷ್ಟವಂತರೆಂದು ಕೊಳ್ಳುತ್ತಿದ್ದಾರೆ, ಉತ್ತರ ಭಾರತೀಯರು.

ಭಾರತೀಯ ಹವಾಮಾನ ಇಲಾಖೆಯೂ ಕೂಡ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ 50 ವರ್ಷಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎಂದು ಹೇಳಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಬಿರು ಬೇಸಿಗೆಯಲ್ಲಿ ಕಾಣಿಸಿಕೊಂಡ ಈ ಚಿಲ್ಲಿಂಗ್ ವೆದರ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ.  ಅನೇಕರು ತಮ್ಮ ಫೋನ್‌ನಲ್ಲಿ ವೆದರ್ ಪೋರ್‌ಕಾಸ್ಟ್‌ ಫೋಟೋ ತೆಗೆದು ಟ್ವಿಟ್ಟರ್‌ನಲ್ಲಿ ಶೇರ್ ಮಾಡುತ್ತಿದ್ದಾರೆ. 

ಬೆಂಗಳೂರಿನಲ್ಲಿ ಮೇ ತಿಂಗಳಲ್ಲೇ ಅತ್ಯಂತ ಚಳಿ : 50 ವರ್ಷದಲ್ಲೇ ಇದೇ ಮೊದಲು

Blessed to be a Bengalurean. ⁦⁩ pic.twitter.com/POJqnfupKs

— karnataka.com (@karnatakacom)

Never in my wildest dreams did I imagine that i would be doing this on a summer day.
Courtesy : ♥️ pic.twitter.com/5NGguMD7rW

— ಸಾ_gar (@nanusagar)

Coconut Oil Froze . pic.twitter.com/exfqkCticg

— TheElusivePimpernel (@mystiquememoir)

Yen weather guru 😘🥰 pic.twitter.com/3ZQqYTyuIp

— ಟ್ರೋಲ್ ಹೈಕ್ಳು (@TrollHaiklu)

 

ಇದೇ ಕಾರಣಕ್ಕೆ ಬೆಂಗಳೂರಿನ ಮೇಲೆ ಮತ್ತೆ ಮತ್ತೆ ನೀವು ಪ್ರೀತಿಯಲ್ಲಿ ಬೀಳುತ್ತಿದ್ದೀರಿ ಎಂದು ಒಬ್ಬರು ಬರೆದುಕೊಂಡಿದ್ದರೆ, ಬೆಂಗಳೂರು ಬಿಬಿಎಂಪಿ ಈ ತಂಪಾದ ವಾತಾವರಣಕ್ಕಾಗಿ ಜನರಿಂದ ತೆರಿಗೆ ಸಂಗ್ರಹಿಸಬಹುದೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಅಲ್ಲದೇ ನೀರು ಬಿಸಿಯಾಗಲು ಕಾಯಿಲ್ ಆನ್‌ ಮಾಡಿರುವ ಫೋಟೋ ಹಾಕಿದ ನೆಟ್ಟಿಗರೊಬ್ಬರು ಬೇಸಿಗೆಯಲ್ಲಿ ಅದೂ ಮೇ ತಿಂಗಳಲ್ಲಿ ನಾನು ಈ ರೀತಿ ಮಾಡಿದ್ದು ಇದೇ ಮೊದಲು ಎಂದು ಬರೆದುಕೊಂಡಿದ್ದಾರೆ. ಆಫೀಸ್‌ಗೆ ಹೋಗಬೇಕೋ ಅಥವಾ ರಗ್ಗು ಹೊದ್ದುಕೊಂಡು ಮಲಗಲೋ ಎಂಬ ಗೊಂದಲದಲ್ಲಿದ್ದೇನೆ ಎಂದು ಒಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬೆಂಗಳೂರಿನ ಈ ತಂಪಾದ ವಾತಾವರಣದಿಂದ ದೀರ್ಘ ನಿದ್ರಾಹೀನತೆಯ (insomnia) ಕಾಯಿಲೆಯೂ ವಾಸಿಯಾಗಬಹುದು ಎಂದು ಒಬ್ಬರು ಬರೆದುಕೊಂಡಿದ್ದಾರೆ. 

ಬೆಂಗಳೂರು ರಸ್ತೆ ಸರಿ ಇಲ್ಲ ಎಂದ ಉದ್ಯಮಿ: ಬ್ಯಾಗ್ ಪ್ಯಾಕ್ ಮಾಡಿ ಎಂದ ತೆಲಂಗಾಣ ಸಚಿವ
 

ಕರ್ನಾಟಕ.ಕಾಮ್ ಎಂಬ ಟ್ವಿಟರ್ ಖಾತೆ ಮಸೂರಿ ಶಿಮ್ಲಾಗೆ ಬೆಂಗಳೂರನ್ನು ಹೋಲಿಸಿದ್ದು, ರಾಜ್‌ಕುಮಾರ್ ಅವರ ಸಿನಿಮಾದ ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನ ಇದು ಯಾರ ತಪ್ಪಸಿನ ಫಲವೋ ಕಂಗಳು ಮಾಡಿದ ಪುಣ್ಯವೋ ಎಂಬ ಸಾಲಿನ ದೃಶ್ಯವನ್ನು ಕತ್ತರಿಸಿ ಟ್ವಿಟ್ಟರ್‌ನಲ್ಲಿ ಹರಿ ಬಿಟ್ಟಿದ್ದಾರೆ. ಸದಾ ಚಳಿಯಿಂದ ಕೂಡಿದ ಹನಿಮೂನ್ ಸ್ಪಾಟ್ ಎಂದು ಕರೆಯಲ್ಪಡುವ ಶಿಮ್ಲಾ ಮಸ್ಸೂರಿಯಲ್ಲೂ ಪ್ರಸ್ತುತ ಕ್ರಮವಾಗಿ 25 , 24 ತಾಪಮಾನವಿದೆ. ಆದರೆ ಬೆಂಗಳೂರಿನಲ್ಲಿ 23 ತಾಪಮಾನವಿದೆ. 

ಇನ್ನು ಭಗ್ನಪ್ರೇಮಿಗಳು, ಪ್ರೇಮದಲ್ಲಿ ವೈಫಲ್ಯಗೊಂಡವರು ಮಾತ್ರ ಈ ಸುಂದರ ವಾತಾವರಣವನ್ನು ದೂರುತ್ತಿದ್ದಾರೆ. ಅಯ್ಯೋ ಸಾಕು ಬೆಂಗಳೂರು, ಏಕೆ ಹೆಚ್ಚು ಹೆಚ್ಚು ರೋಮ್ಯಾಂಟಿಕ್ ಆಗುತ್ತಿರುವೆ. ಕಳೆದ ಹೋದ ಪ್ರೇಮದ ದಿನಗಳ ಮತ್ತೇಕೆ ನೆನಪು ಮಾಡುವೆ ನೀ ಹೆಚ್ಚು ಹೆಚ್ಚು ರೋಮ್ಯಾಂಟಿಕ್ ಅದಂತೆ ನೆನಪುಗಳು ಹೆಚ್ಚುತ್ತಿವೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ವೆದರ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಪ್ರತಿಯೊಬ್ಬರು ಬೆಂಗಳೂರನ್ನು ಪ್ರೀತಿಸುವಂತೆ ಮಾಡುತ್ತಿದೆ. 

click me!