ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಕಿರಿಕ್ ಮಾಡಿದ ಪುಂಡರಿಗೆ ಪೊಲೀಸ್ ವಾರ್ನಿಂಗ್!

By Suvarna NewsFirst Published Dec 31, 2023, 10:22 PM IST
Highlights

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಎಚ್ಚರವಹಿಸಿದ್ದಾರೆ.ಇದರ ನಡುವೆ ಚರ್ಚ್‌ಸ್ಟ್ರೀಟ್‌ನಲ್ಲಿ ಕೆಲ ಪುಂಡರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಕಿರಿಕ್ ಮಾಡುತ್ತಿದ್ದ ಪುಂಡರಿಗೆ ಪೊಲೀಸರು ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು(ಡಿ.31) ಹೊಸ ವರ್ಷ ಸಂಭ್ರಮಾಚರಣೆ ರಂಗೇರಿದೆ. ಬೆಂಗಳೂರಿನ ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರೋಡ್‌ಗಳಲ್ಲಿ ಸಂಭ್ರಮ ಜೋರಾಗಿದೆ. ಸಂಭ್ರಮಾಚರಣೆ ನೆಪದಲ್ಲಿ ಕೆಲ ಕಿಡಿಗೇಡಿಗಳು ಅನಾಹುತ ಸೃಷ್ಟಿಸುವುದನ್ನು ತಡೆಯಲು ಬೆಂಗಳೂರು ಪೊಲೀಸರು ಮೊದಲೇ ಸಜ್ಜಾಗಿದ್ದಾರೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರ ನಡುವೆ ಕೆಲ ಪುಂಡರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಕಿರಿಕ್ ಮಾಡಿದ್ದಾರೆ. ಚರ್ಚ್‌ಸ್ಟ್ರೀಟ್‌ನಲ್ಲಿ ಪುಂಡಾಟ ಆರಂಭಿಸಿದ ಕಿಡಿಗೇಡಿಗಳಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮುಖ ಸಂಪೂರ್ಣವಾಗಿ ಮಾಸ್ಕ್ ಹಾಕಿಕೊಂಡ ಪುಂಡರು ಕಿರಿಕ್ ಮಾಡಲು ಆರಂಭಿಸಿದ್ದಾರೆ. ಚರ್ಚ್‌ಸ್ಟ್ರೀಟ್ ಬೀದಿಗಳಲ್ಲಿ ಕಿರಿಕ್ ಆರಂಭ ಮಾಡಿದ್ದಾರೆ. ಕಿಕ್ಕಿರಿದು ಸೇರಿದ್ದ ಜನರ ನಡುವೆ ಕಿರಿಕ್ ಶುರುಮಾಡುತ್ತಿದ್ದಂತೆ ಪೊಲೀಸರು ಎಂಟ್ರಿಕೊಟ್ಟಿದ್ದಾರೆ. ಚರ್ಚ್ ಸ್ಟ್ರೀಟ್‌ನಲ್ಲಿರುವ  ಮೇಟ್ರೋ ಸ್ಟೇಷನ್ ಮುಂಬಾಗದಲ್ಲಿ ನಿಂತು ಪುಂಡರು ಕಿರಿಕ್ ಮಾಡಲು ಆರಂಭಿಸಿದ್ದಾರೆ. 

ಹೊಸ ವರ್ಷ ಸಂಭ್ರಮಾಚರಣೆ, ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಮಾಡಿದ ಪೊಲೀಸರು!

ಪೊಲೀಸರು ಎಂಟ್ರಿಕೊಟ್ಟು ಪುಂಡರ ಮಾಸ್ಕ್ ತೆಗೆಸಿದ್ದಾರೆ. ಇಷ್ಟೇ ಅಲ್ಲ ಹೊಸ ವರ್ಷ ಸಂಭ್ರಮಿಸಿಲು ಬಂದಿದ್ದರೆ ಸಂಭ್ರಮಿಸಿ ತೆಪ್ಪಗೆ ಮನೆ ಸೇರಿಕೊಳ್ಳಿ, ಬಾಲ ಬಿಚ್ಚಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ವಾರ್ನ್ ಮಾಡಿದ್ದಾರೆ. ಜನಸಂದಣಿ ಇರೋ ಜಾಗದಲ್ಲಿ ಮಾಸ್ಕ್ ಹಾಕ್ಕೊಂಡು ಯಾರಿಗೂ ತಿಳಿಯದಂತೆ ಕಿರಿಕ್ ಮಾಡಿ ಪರಾರಿಯಾಗುವ ಪ್ಲಾನ್ ಇದ್ದರೆ ಬಿಟ್ಟುಬಡಿ. ಜನಸಂದಣಿ ಇರುವ ಕಡೆ ಮಾಸ್ಕ್ ಹಾಕಿ ಒಡಾಡುವಂತಿಲ್ಲ ಎಂದು ಪೊಲೀಸರು ವಾರ್ನ್ ಮಾಡಿದ್ದಾರೆ.

 ಇತ್ತ ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರೋಡ್ ನಡುವೆ ಪೊಲೀಸರು ಬ್ಯಾರಿಕೇಡ್ ಎಳೆದಿದ್ದಾರೆ. ಇದರ ಪರಿಣಾಮ ಜನರು ಆಕ್ರೋಶಗೊಂಡಿದ್ದಾರೆ. ಓಡಾಡಲು ಅಡ್ಡಿಯಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಿಗೇಡ್‌ ರಸ್ತೆಯಲ್ಲಿ ಮಹಿಳೆ, ಮಕ್ಕಳಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಿದ ಪೊಲೀಸರು!

ಎಂಜಿರೋಡ್, ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರಸ್ತೆಗಳು ಜನರು ಕಿಕ್ಕಿರಿದು ಸೇರಿರುವ ಹಿನ್ನಲೆಯಲ್ಲಿ ಇದೀಗ ಜನರು ಮೆಟ್ರೋ ಸ್ಟೇಶನ್ ಒಳಗೆ ನುಗ್ಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿಬ್ಬಂದಿಗಳು ಮೆಟ್ರೋ ನಿಲ್ದಾಣದ ಶಟರ್ ಹಾಕಿ ಬಂದ್ ಮಾಡಿದ್ದಾರೆ. ಎಂಜಿ ರಸ್ತೆಯ ಮೆಟ್ರೋ ನಿಲ್ದಾಣ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಗಿದೆ.
 

click me!