
ಬೆಂಗಳೂರು(ಡಿ.26) ಹೊಸ ವರ್ಷ ಬರಮಾಡಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ನ್ಯೂ ಇಯರ್ ಪಾರ್ಟಿ ಜೋಶ್ ಈಗಲೇ ತುಂಬಿ ತುಳುಕುತ್ತಿದೆ. ಪ್ರಮುಖವಾಗಿ ಬೆಂಗಳೂರಿನ ಎಂಜಿ ರೋಡ್, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರೋಡ್ ಸೇರಿದಂತೆ ಹಲವೆಡೆ ಹೊಸ ವರ್ಷದ ಪಾರ್ಟಿ ಅತ್ಯಂತ ಜನಪ್ರಿಯವಾಗಿದೆ. ಹೊಸ ವರ್ಷದ ಪಾರ್ಟಿಗಾಗಿ ಹಲವರು ಬೆಂಗಳೂರಿನತ್ತ ಮುಖಮಾಡುತ್ತಿದ್ದಾರೆ. ಈ ವರ್ಷ ಕೆಲ ಕಠಿಣ ನಿಯಮಗಳನ್ನು ಪೊಲೀಸರು ಜಾರಿಗೊಳಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಪೊಲೀಸರು ರೂಲ್ಸ್ ಜಾರಿಗೊಳಿಸುತ್ತಿದ್ದಾರೆ.ಹೊಸ ರೂಲ್ಸ್ ಪೈಕಿ ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕು. ಕ್ಲಬ್, ಪಬ್, ಹೊಟೆಲ್ ಸೇರಿದಂತೆ ಎಲ್ಲಾ ಪಾರ್ಟಿಗೂ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ.
ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡಿಸೆಂಬರ್ 31ರ ರಾತ್ರಿ ಬೆಂಗಳೂರು ಪೊಲೀಸರು ನಗರದ ವಿವಿಧ ಭಾಗಗಳಲ್ಲಿ 48 ಚೆಕ್‌ಪೋಸ್ಟ್ ನಿರ್ಮಿಸಿ ಎಲ್ಲರ ಮೇಲೂ ಹದ್ದಿನ ಕಣ್ಣಿಡಲಾಗುತ್ತದೆ. ಮುಫ್ತಿಯಲ್ಲೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಲಿದೆ. ಪೊಲೀಸರು ಹೈ ಅಲರ್ಟ್ ಆಗಿದ್ದು, ತೀವ್ರ ನಿಘಾವಹಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ, JN.1 ಪ್ರಕರಣ 63ಕ್ಕೆ ಏರಿಕೆ, ಸಕ್ರಿಯ ಕೊರೋನಾ 4054!
ಎಂಜಿ ರೋಡ್, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರೋಡ್ ಸೇರಿ ಹೊಸ ವರ್ಷ ಪಾರ್ಟಿ ಆಯೋಜಿಸುವ ಕೆಲಸ ರಸ್ತೆಗಳಲ್ಲಿ ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗುತ್ತದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಆಗಲಿದೆ. ಪಾರ್ಟಿ ಆಯೋಜಿಸುವ, ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ನಿಗಾವಹಿಸಲಾಗುತ್ತದೆ.
5,200 ಕಾನ್‌ಸ್ಟೇಬಲ್, 1800 ಮುಖ್ಯಪೇದೆ, 600 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 160 ಇನ್ಸ್‌ಪೆಕ್ಟರ್, 45 ಅಸಿಸ್ಟೆಂಟ್ ಕಮಿಷನರ್, 15 ಡೆಪ್ಯೂಟಿ ಕಮಿಷನರ್, 1 ಜಾಯಿಂಟ್ ಕಮಿಷನರ್ ಆಫ್ ಪೊಲೀಸ್, ಇಬ್ಬರು ಅಡೀಷನಲ್ ಕಮಿಷನರ್ ಆಫ್ ಪೊಲೀಸ್ ನಿಯೋಜನೆ ಮಾಡಲಾಗಿದೆ. ಈ ಪೊಲೀಸ್ ಪಡೆ ಬೆಂಗಳೂರಿನ ಮೇಲೆ ಹದ್ದಿನ ಕಣ್ಣಿಡಲಿದೆ.
2024ರ ಮೊದಲ ದಿನವೇ ಸೋಮವಾರ… ಆ ದಿನ ತಪ್ಪದೇ ಈ ಕೆಲಸ ಮಾಡಿ
ಬಹುತೇಕ ಎಲ್ಲಾ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗುತ್ತದೆ.ಹೊಸ ವರ್ಷದ ಪಾರ್ಟಿ ಆಯೋಜನೆ ಮಾಡುವ ಎಲ್ಲರೂ ಆಗಮಿಸುವ ಗ್ರಾಹಕರ ಹೆಸರು, ವಿಳಾಸ, ಫೋನ್ ನಂಬರ್ ಸೇರಿದಂತೆ ಇತರ ಕೆಲ ದಾಖಲೆಗಳನ್ನು ನಮೂದಿಸಲು ಸೂಚನೆ ನೀಡಲಾಗಿದೆ.