ಮತ್ತೆ ನಮ್ಮ ಮೆಟ್ರೋ ದೋಷ : ಅರ್ಧದಲ್ಲಿಯೇ ನಿಂತ ರೈಲು

By Web DeskFirst Published Nov 4, 2019, 2:51 PM IST
Highlights

ನಮ್ಮ ಮೆಟ್ರೋದಲ್ಲಿ ಮತ್ತೆ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ರೈಲು ಮಾರ್ಗಮಧ್ಯೆಯೆ ನಿಂತಿದ್ದು, ಪ್ರಯಾಣಿಕರಲ್ಲಿ ಆತಂಕ ಎದುರಾದ ಘಟನೆ ನಡೆದಿದೆ. 

ಬೆಂಗಳೂರು [ನ.04]: ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಟ್ರ್ಯಾಕ್ ಮಧ್ಯದಲ್ಲಿಯೇ  ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. 

ಬೆಂಗಳೂರಿನ ಶ್ರೀ ರಾಂಪುರ - ಕುವೆಂಪು ಮಹಾಕವಿ ಮೆಟ್ರೋ ನಿಲ್ದಾಣದ ಮಧ್ಯೆ 15 ನಿಮಿಷಗಳಿಗೂ ಹೆಚ್ಚು ಕಾಲ ರೈಲು ನಿಂತಿದೆ. 

ಏಕಾ ಏಕಿ ಮೆಟ್ರೋ ನಿಂತ ಕಾರಣದಿಂದ  ಪ್ರಯಾಣಿಕರು ಆತಂಕಗೊಂಡಿದ್ದು, ಬಳಿಕ ಮೆಟ್ರೋ ರೈಲನ್ನು ಹಿಮ್ಮುಖವಾಗಿ ಚಲಾಯಿಸಲಾಗಿದೆ. 

ಆರ್‌.ವಿ.ರಸ್ತೆ ಮೆಟ್ರೋ ನಿಲ್ದಾಣದ ವಾಯುವ್ಯ ಪ್ರವೇಶ ದ್ವಾರ ಬಂದ್‌...

ಮೆಜೆಸ್ಟಿಕ್ ನಿಂದ ನಾಗಸಂದ್ರ ತೆರಳುತ್ತಿದ್ದ ಮೆಟ್ರೋ ರೈಲಲ್ಲಿ ದೋಷ ಕಾಣಿಸಿಕೊಂಡಿದ್ದು ಬಳಿಕ ಶ್ರೀ ರಾಂಪುರ ನಿಲ್ದಾಣದವರೆಗೆ ವಾಪಸ್ ಚಲಾಯಿಸಲಾಗಿದೆ. 

ಈ ಹಿಂದೆಯೂ ಒಮ್ಮೆ ಇಲ್ಲಿಯೇ ಮೆಟ್ರೋ ರೈಲಲ್ಲಿ ದೋಷ ಕಾಣಿಸಿಕೊಂಡು, 20 ನಿಮಿಷಗಳ ಕಾಲ ಸ್ಥಗಿತವಾಗಿತ್ತು. ಅಲ್ಲದೇ ಶ್ರೀ ರಾಂಪುರ ರೈಲ್ವೆ ನಿಲ್ದಾಣದಲ್ಲಿಯೇ ಮಗುವೊಂದು ಕೆಳಕ್ಕೆ ಬಿದ್ದು ಮೃತಪಟ್ಟಿತ್ತು. 

6 ಬೋಗಿಗಳ ಮತ್ತೆರಡು ಮೆಟ್ರೋ ರೈಲಿಗೆ ಚಾಲನೆ...

ಪದೇ ಪದೇ ಇದೇ ಮಾರ್ಗದಲ್ಲಿ ಅನೇಕ ರೀತಿಯ ಅಚಾತುರ್ಯಗಳಾಗುತ್ತಿದ್ದು, ನಿರ್ವಹಣೆ ವೈಪಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. 

click me!