Bengaluru Techie Layoffs: ₹43.5 ಲಕ್ಷ ಸಂಬಳದ ಕೆಲಸ ಹೋಯ್ತು; ಮುಂದಾದ ಅನಾಹುತ ಬಿಚ್ಚಿಟ್ಟ ಬೆಂಗಳೂರು ಟೆಕ್ಕಿ!

Published : Jun 30, 2025, 10:44 AM ISTUpdated : Jun 30, 2025, 11:02 AM IST
IT employees layoffs

ಸಾರಾಂಶ

ಬೆಂಗಳೂರಿನಲ್ಲಿ ₹43.5 ಲಕ್ಷ ವಾರ್ಷಿಕ ಪ್ಯಾಕೇಜ್ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗ ಕಳೆದುಕೊಂಡ ನಂತರದ ಆಘಾತಕಾರಿ ಸ್ಥಿತಿಯನ್ನು ಈ ಲೇಖನ ವಿವರಿಸುತ್ತದೆ. ಉದ್ಯೋಗ ನಷ್ಟ ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ಜಾಬ್ ಕಳೆದುಕೊಂಡ ಕತೆಯನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕೆಲಸ ಮಾಡುವ ಮಧ್ಯಮ ವರ್ಗಕ್ಕೆ ಸಾಮಾಜಿಕ ಭದ್ರತೆ ಎಲ್ಲಿದೆ ಎಂಬ ಪ್ರಶ್ನೆ ಎದ್ದಿದೆ.

ಇಂದು ಕಾಸ್ಟ್‌ ಕಟಿಂಗ್‌, ಆಫೀಸ್‌ ರಾಜಕೀಯ ಎಂದು ಲೇಆಫ್‌ ಮಾಡಲಾಗುತ್ತಿದೆ. ಅತಿ ಹೆಚ್ಚು ಆದಾಯ ಪಡೆಯುವವರು ಮೊದಲ ಟಾರ್ಗೆಟ್‌ ಆಗಿರುತ್ತಾರೆ. ಈಗಾಗಲೇ ದೊಡ್ಡ ದೊಡ್ಡ ಕಂಪೆನಿಗಳು ಕೂಡ ಸಾವಿರಾರು ಉದ್ಯೋಗಿಗಳನ್ನು ಲೇಆಫ್‌ ಮಾಡಿವೆ.

‌ಕಂಪೆನಿಯಿಂದ ಲೇಆಫ್!

ಸಲೀಂ ಎಂಬ ಟೆಕ್ಕಿ, NIT ಯಿಂದ ಉನ್ನತ ಶ್ರೇಣಿಯಲ್ಲಿ ಗ್ರಾಜುಯೇಟ್ ಆಗಿದ್ದರು. ಇತ್ತೀಚೆಗಿನವರೆಗೆ ಬೆಂಗಳೂರಿನಲ್ಲಿ ವಾರ್ಷಿಕ ₹43.5 ಲಕ್ಷ ಪ್ಯಾಕೇಜ್‌ನ ಜಾಬ್ ಹೊಂದಿದ್ದರು. ಈ ಕತೆಯನ್ನು ವೆಂಕಟೇಶ್ ಅಲಾ ಎನ್ನುವವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಲೀಂ ಅವರನ್ನು ಕಳೆದ ತಿಂಗಳು ಕಂಪೆನಿಯಿಂದ ಲೇಆಫ್‌ ಮಾಡಲಾಗಿತ್ತು. ಕೇವಲ ಮೂರು ತಿಂಗಳ ಸಂಬಳ ಕೊಟ್ಟು, ಹೊರಗಡೆ ಕಳಿಸಲಾಗಿತ್ತು.

ಡಿಪ್ರೆಶನ್‌ಗೆ ಹೋದ ಟೆಕ್ಕಿ!

ಕಳೆದ ಐದು ವರ್ಷಗಳಲ್ಲಿ ಸಲೀಂ ಅವರು ₹30 ಲಕ್ಷಕ್ಕಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷವಷ್ಟೇ ₹11.22 ಲಕ್ಷ ತೆರಿಗೆ ಪಾವತಿಸಿದ್ದಾರಂತೆ. ಈಗ ಉದ್ಯೋಗವಿಲ್ಲದೆ, ಮನೆ ಸಾಲವಿಲ್ಲದೆ, ಮಕ್ಕಳ ಶಿಕ್ಷಣಕ್ಕಾಗಿ, ಪ್ರತಿ ಮಗುವಿಗೆ ವರ್ಷಕ್ಕೆ ₹1.95 ಲಕ್ಷ ಖರ್ಚು ಮಾಡಲು ಜಾಬ್‌ ಮೇಲೆ ಅವಲಂಬಿತರಾಗಿದ್ದರು. ಹೀಗಾಗಿ ಅವರು ಎಮೋಶನಲೀ ಡೌನ್‌ ಆಗಿದ್ದು, ಡಿಪ್ರೆಶನ್‌ಗೆ ಜಾರಿದ್ದಾರಂತೆ.

ಸರ್ಕಾರ ಕೈಬಿಟ್ಟಿತು!

ಸಲೀಂ ಅವರು “ನಾನು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ತೆರಿಗೆಯನ್ನು ಪಾವತಿಸಿದ್ದೆ. ಆದರೆ ಈ ಸರ್ಕಾರವೇ ನನ್ನನ್ನು ಅಗತ್ಯವಾದ ಸಮಯದಲ್ಲಿ ಕೈಬಿಟ್ಟಿತು” ಎಂದು ಸಲೀಂ ಭಾವಿಸಿದ್ದಾರಂತೆ. ಆದರೆ ಸಲೀಂ ನಿಜವಾದ ಹೆಸರು ಇನ್ನೂ ಬಹಿರಂಗ ಆಗಿಲ್ಲ. ದೇಶದಲ್ಲಿ ಈ ವ್ಯವಸ್ಥೆಯು ಬದಲಾಗಬೇಕು, ಇಲ್ಲದಿದ್ದರೆ ದೇಶ ಮುಂದುವರೆಯೋದು ಕಷ್ಟ ಎನ್ನಲಾಗಿದೆ.

ನಿಜಕ್ಕೂ ಸರ್ಕಾರದಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸಬೇಕೇ? ಇಲ್ಲವೇ ಎಂಬ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆದಿದೆ.

  • ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡ ಎಷ್ಟು ಜನರಿಗೆ ಸರ್ಕಾರ ನೇರವಾಗಿ ಬೆಂಬಲ ಕೊಡುತ್ತದೆ ಎಂದು ಹೇಳಿ?
  • ಪ್ರಪಂಚದಾದ್ಯಂತ ಎಲ್ಲರೂ ತೆರಿಗೆ ಪಾವತಿಸುತ್ತಾರೆ, ಆದರೆ ಜಾಬ್‌ ಕಳೆದುಕೊಂಡರೆ, ಅದಕ್ಕೆ ಸರ್ಕಾರ ಹಸ್ತಕ್ಷೇಪ ಮಾಡುತ್ತದೆ ಎನ್ನೋದು ಅರ್ಥವಲ್ಲ.
  • ಸರ್ಕಾರ ಒದಗಿಸಿದ ಮೂಲಸೌಕರ್ಯ, ಸ್ಥಿರತೆಯಿಂದ ಉನ್ನತ ವೇತನ ಸಿಗೋದು ಸಾಧ್ಯವಾಗಿದೆ.
  • ವೇತನವನ್ನು ಗಳಿಸುವ ವ್ಯವಸ್ಥೆಗಾಗಿ ನಾವು ತೆರಿಗೆಯನ್ನು ಪಾವತಿಸುತ್ತೇವೆ.
  • ₹45 ಲಕ್ಷ ಆದಾಯದಲ್ಲಿ ₹90 ಲಕ್ಷ ರೂಪಾಯಿಯ ಜೀವನಶೈಲಿಯನ್ನು ನಡೆಸಲು ಸಾಧ್ಯವಿಲ್ಲ, ಆಮೇಲೆ ತಪ್ಪಾಯ್ತು ಎಂದಾಗ ರಾಜ್ಯವನ್ನು ದೂಷಿಸಲಾಗದು.
  • ಪ್ರಪಂಚದಾದ್ಯಂತ ಹೀಗೆ ಆಗಿದೆ. ತೆರಿಗೆ ಎನ್ನೋದು ಸಮಸ್ಯೆ ಅಲ್ಲ, ದೀರ್ಘಕಾಲೀನ ಆರ್ಥಿಕ ಯೋಜನೆಯ ಕೊರತೆಯಲ್ಲಿದೆ.
  • ತೆರಿಗೆ ಆಧಾರವನ್ನು ವಿಸ್ತರಿಸುವುದು ಏಕೈಕ ಪರಿಹಾರ.

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!