
ಬೆಂಗಳೂರು (ಡಿ.03) ಬೆಂಗಳೂರು ಐಟಿ ನಗರವಾಗಿ, ಉದ್ಯಾನ ನಗರವಾಗಿ, ಕೂಲ್ ಸಿಟಿ ಸೇರಿದಂತೆ ಹಲವು ವಿಶೇಷತೆಗಳಿಂದ ಗುರುತಿಸಿಕೊಂಡಿದೆ. ಇನ್ನು ಬೆಂಗಳೂರಿನ ಸಂಸ್ಕೃತಿ, ಪರಂಪರೆ, ಆಚರಣೆ, ಆಹಾರ ಸೇರಿದಂತೆ ಹಲವು ವಿಚಾರದಲ್ಲೂ ಭಿನ್ನವಾಗಿದೆ. ಇದೀಗ ಬೆಂಗಳೂರಿಗೆ ಮತ್ತೊಂದು ಬಿರುದು ಸಿಕ್ಕಿದೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತಾ ಸೇರಿದಂತೆ ಭಾರತದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಫುಡ್ ಸಿಟಿ ಎಂದು ಸ್ಕಾಟಿಶ್ ಪ್ರವಾಸಿಗ ಹೇಳಿದ್ದಾನೆ. ಬೆಂಗಳೂರಿನ ಬ್ರೇಕ್‌ಫಾಸ್ಟ್ ಸೂಪರ್ ಎಂದಿದ್ದಾರೆ.
ಸ್ಕಾಟಿಶ್ ಪ್ರವಾಸಿಗ ಹಗ್ ಅಬ್ರಾಡ್ ಭಾರತದ ಪ್ರಮುಖ ನಗರಗಳನ್ನು ಸುತ್ತಾಡಿದ್ದಾನೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಹೈದರಾಬಾದ್ ಹಾಗೂ ಚೆನ್ನೈ ನಗರ ಸುತ್ತಾಡಿದ್ದಾನೆ. ಎಲ್ಲಾ ಕಡೆ ಅಲ್ಲಿನ ಆಹಾರ ಖಾದ್ಯಗಳನ್ನು ಸವಿದಿದ್ದಾನೆ. ಭಾರತ ಪ್ರವಾಸ ಮುಗಿಸಿದ ಹಗ್ ಅಬ್ರಾಡ್ ಬಳಿಕ ಪಾಕಿಸ್ತಾನ ಪ್ರವಾಸ ಆರಂಭಿಸಿದ್ದಾನೆ. ಇದರ ನಡುವೆ ಅಭಿಮಾನಿಯೊಬ್ಬರು, ಯಾವ ನಗರವನ್ನು ಉತ್ತಮ ಆಹಾರ ನದರ ಎಂದು ಕರೆಯಬಹುದು ಎಂದು ಪ್ರಶ್ನಸಿದ್ದಾರೆ. ಈ ವೇಳೆ ಅದು ಬೆಂಗಳೂರು ಎಂದಿದ್ದಾನೆ.
ಇಷ್ಟಕ್ಕೆ ಹಗ್ ಅಬ್ರಾಡ್ ಮಾತು ಮುಗಿದಿಲ್ಲ, ಬೆಂಗಳೂರು ಭಾರತದ ಫುಡ್ ಸಿಟಿ ಎಂದು ಕರೆದಿದ್ದಾನೆ. ಇಷ್ಟೇ ಅಲ್ಲ ಬೆಂಗೂರಿನ ಬೆಳಗಿನ ತಿಂಡಿಗೆ ಮಾರು ಹೋಗಿದ್ದೇನೆ ಎಂದಿದ್ದಾರ. ಅದರಲ್ಲೂ ಬೆಂಗಳೂರಿನ ದೋಸೆ, ಇಡ್ಲಿ ಹಾಗೂ ಫಿಲ್ಟರ್ ಕಾಫಿ ಮನತಣಿಸಿದೆ ಎಂದಿದ್ದಾನೆ. ಈ ಖಾದ್ಯ ಔಟ್ ಆಪ್ ದಿ ವರ್ಲ್ಡ್ ಎಂದು ಪ್ರಶಂಸಿಸಿದ್ದಾನೆ. ಬೆಂಗಳೂರಿನ ದೋಸೆ ಗಾಜಿನ ರೀತಿ ಕ್ರಿಸ್ಪಿಯಾಗಿದೆ. ಇನ್ನು ಇಡ್ಲಿ ಬಾಯಲ್ಲಿಟ್ಟರೆ ಹಾಗೆ ಕರಗುತ್ತದೆ. ಈ ಆಹಾರ ತಿನ್ನುವಾಗ ನಾನು ಮತ್ತಷ್ಟು ಹಸಿವಾಗಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಲವು ವಿಶೇಷ ಖಾದ್ಯಗಳು ಜನರ ಮನಸು ತಣಿಸಿದೆ. ಬೆಂಗಳೂರಿನ ಮಸಾಲೆ ದೋಸೆ, ಇಡ್ಲಿ ಸೇರಿದಂತೆ ಹಲವು ವಿಶೇಷ ಖಾದ್ಯಗಳು ಜನರ ಮನಸ್ಸು ಗೆದ್ದಿದೆ. ಇನ್ನು ಬಾತ್‌ಗಳ ಪೈಕಿ ಬೆಂಗಳೂರಿನಲ್ಲಿ ಗರಿಷ್ಠ ವೈರಿಟಿ ಲಬ್ಯವಿದೆ. ಕೇಸರಿ ಬಾತ್, ಖಾರಾ ಬಾತ್, ವಾಂಗಿ ಬಾತ್ ಸೇರಿದಂತೆ ಹಲವು ವಿಧದ ಬಾತ್‌ಗಳು ಇಲ್ಲಿ ಲಭ್ಯವಿದೆ. ಹಗ್ ಅಬ್ರಾಡ್ ಬೆಂಗಳೂರಿನ ತಿಂಡಿಗೆ ಮಾರು ಹೋಗಿರುವುದಾಗಿ ಹೇಳಿದ್ದಾರೆ. ಆದರೆ ಸ್ಕಾಟಿಶ್ ಪ್ರಾವಸಿಗನ ಉತ್ತರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ನಿವಾಸಿಗಳು ನಗರದ ಖಾದ್ಯಗಳ ಕುರಿತು ವಿವರಣೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮತ್ತಷ್ಟು ಆಹಾರ ಖಾದ್ಯಗಳನ್ನು ಸವಿದರೆ ಸ್ಕಾಟಿಶ್ ಪ್ರಜೆ ಇಲ್ಲಿನ ನಾಗರೀಕತ್ವ ಸ್ವೀಕರಿಸತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಬ್ರೇಕ್‌ಫಾಸ್ಟ್ ವಿಚಾರದಲ್ಲಿ ಬೆಂಗಳೂರು ಸೂಪರ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವರು ಇದು ಕೆಲವೇ ಕೆಲವು ನಗರದಲ್ಲಿ ಆಹಾರ ಖಾದ್ಯ ಸವಿದಿದ್ದೀರಿ. ಭಾರತದಲ್ಲಿ ಸಾಕಷ್ಟು ಅತ್ಯಂತ ಜನಪ್ರಿಯ ಹಾಗೂ ಅಥೆಂಟಿಕ್ ಫುಡ್‌ಗಳಿವೆ. ಭಾರತದ ಎಲ್ಲಾ ನಗರದಲ್ಲಿ ಆಹಾರ ಸವಿದಿಲ್ಲ. ಇನ್ನು ಸವಿದಿರುವ ಕೆಲ ನಗರದಲ್ಲೂ ಸರಿಯಾದ ಜಾಗದಲ್ಲಿ ಆಹಾರ ಟೇಸ್ಟ್ ನೋಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.