
ಬೆಂಗಳೂರು (ಡಿ.02) ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 22 ವಿಮಾನ ಹಾರಾಟ ಸ್ಥಗಿತಗೊಂಡ ಘಟನೆ ನಡೆದಿದೆ. ಪರಿಣಾಮ ಪ್ರಯಾಣಕರು ಪರದಾಡುವಂತಾಗಿದೆ. ಏರ್ ಬಸ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಪ್ರಯಾಣಕ್ಕೆ ಅಡಚಣೆಯಾಗಿದೆ. ಇಷ್ಟೇ ಅಲ್ಲ 50ಕ್ಕೂ ಹೆಚ್ಚು ವಿಮಾನಗಳ ಹಾರಟ ಸಮಯ ಬದಲಾವಣೆಯಾಗಿದೆ. ಹಲವು ವಿಮಾನಗಳು ವಿಳಂಬಗೊಂಡಿದೆ.
ಬೆಂಗಳೂರಿನಿಂದ ದೇಶದ ವಿವಿಧಡೆ ತೆರಳಬೇಕಿದ್ದ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಏರ್ ಬಸ್‌ನ ಎ320 ವಿಮಾನಗಳಲ್ಲಿ ಸಾಫ್ಟ್ವೇರ್ ಹಾಗೂ ಹಾರ್ಡ್‌ವೇರ್ ಅಪ್‌ಗ್ರೇಡ್ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆಗಳ ಕಾರಣ ಏರ್‌ಬಸ್ ವಿಮಾನ ಹಾರಾಟ ಸ್ಥಗಿತಗೊಂಡಿದೆ.ದೆಹಲಿ,ಮುಂಬೈ ,ಡೆಹ್ರಾಡೂನ್ , ಕೊಲ್ಕತ್ತಾ , ವಾರಣಾಸಿ , ಅಹಮದಾಬಾದ್ , ಪುಣೆ , ಚೆನ್ನೈ , ಸೇರಿದಂತೆ ಹಲವೆಡೆ ತೆರಳಬೇಕಿದ್ದ ವಿಮಾನಗಳಲ್ಲಿ ವಿಳಂಬವಾಗಿದೆ.
ಭಾರತದ ಹಲೆವೆಡೆ ಏರ್‌ಬಸ್ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. ಏರ್‌ಬಸ್ ತಾಂತ್ರಿಕ ಅಪ್‌ಗ್ರಡೇಶನ್ ನಡೆಯುತ್ತಿರುವ ಕಾರಣ ದೇಶದ ಹಲವೆಡೆ ಏರ್‌ಬಸ್ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ವಿಳಂಬವಾಗುತ್ತಿರುವ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಕೇಂಪೇಗೌಡ ವಿಮಾನ ನಿಲ್ದಾಣಧಲ್ಲಿ ಪ್ರಯಾಣಕರು ಅಸಮಾಧಾನ ಹೊರಹಾಕಿದ್ದಾರೆ. ಪ್ರಯಾಣಿಕರ ಜನಜಂಗುಳಿ ಹೆಚ್ಚಾಗಿದೆ. ವಿಮಾನ ನಿಲ್ದಾಣದ ಹೊರಗೂ ಟ್ರಾಫಿಕ್ ಸಮಸ್ಯೆಗಳು ಉದ್ಭವಿಸಿದೆ.