
ತಿರುಪತಿ (ಆ.15) ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಪ್ರತಿ ದಿನ ಸಾವಿರಾರೂ ಭಕ್ತರು ತೆರಳಿ ದರ್ಶನ ಪಡೆಯುತ್ತಾರೆ. ವಿಶೇಷವಾಗಿ ಉದ್ಯಮಿಗಳು, ಸೆಲೆಬ್ರೆಟಿಗಳು, ಮುಕೇಶ್ ಅಂಬಾನಿ ಸೇರಿದಂತೆ ಹಲವು ಶ್ರೀಮಂತರು ತಿರುಪತಿ ದೇಗುಲಕ್ಕೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ನೀಡಿದ್ದಾರೆ. ಇದೀಗ ಬೆಂಗಳೂರಿನ ಭಕ್ತ ತಿರುಪತಿ ವಂಕಟೇಶ್ವರ ದೇಗುಲಕ್ಕೆ ದುಬಾರಿ ಕಾಣಿಕೆ ನೀಡಿ ಸುದ್ದಿಯಾಗಿದ್ದಾರೆ. ಬೆಂಗಳೂರಿನ ಭಕ್ತ 1 ಕೋಟಿ ರೂಪಾಯಿ ಕಾಣಿಕೆ ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಕಿವಿಯೋಲೆಯನ್ನು ಕಾಣಿಕೆಯಾಗಿ ನೀಡಿದ್ದಾರೆ.
ಬೆಂಗಳೂರಿನ ತಿರುಪತಿ ಭಕ್ತ ಕಲ್ಯಾಣ್ ರಾಮನ್ ಕೃಷ್ಣಮೂರ್ತಿ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ಕಾಣಿಕೆ ನೀಡಿದ್ಾದರೆ. ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್‌ಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ದೇಗುಲ ಪ್ರತಿ ದಿನ ಅನ್ನ ಪ್ರಸಾದ ವ್ಯವಸ್ಥೆ ಮಾಡಿದೆ. ದರ್ಶನದ ಬಳಿಕ ಭಕ್ತರಿಗೆ ಅನ್ನ ಪ್ರಸಾದ ಸುವ್ಯವಸ್ಥಿತವಾಗಿ ನಡೆಯಲು 1 ಕೋಟಿ ರೂಪಾಯಿಗೆ ದೇಣಿಗೆ ನೀಡಿದ್ದಾರೆ. ಕೃಷ್ಣಮೂರ್ತಿ ದೇಣಿಗೆ ಡಿಮಾಂಡ್ ಡ್ರಾಫ್ಟ್‌ನ್ನು ಟಿಟಿಡಿ ಅಧಿಕಾರಿ ಸಿಹೆಚ್ ವೆಂಕಯ್ಯ ಚೌಧರಿಗೆ ನೀಡಿದ್ದಾರೆ.
ತಿರುಪತಿ ವೆಂಕಟೇಶ್ವರನಿಗೆ 1 ಕೋಟಿ ರೂಪಾಯಿ ನಗದು ದೇಣಿಗೆ ಜೊತೆಗೆ 25 ಲಕ್ಷ ರೂಪಾಯಿ ಮೌಲ್ಯದ ಕಿವಿಯೋಲೆಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಚಿನ್ನ ಹಾಗೂ ಡೈಮಂಡ್‌ನ ಕಿವಿಯೋಲೆ ಇದಾಗಿದೆ. ಲಕ್ಷ್ಮಿ ಪೆಂಡೆಂಟ್ ಇರುವ 148 ಗ್ರಾಂ ತೂಕದ ಕಿವಿಯೋಲೆ ಬೆಲೆ 25 ಲಕ್ಷ ರೂಪಾಯಿ.
ತಿರುಪತಿ ತಿಮ್ಮಪ್ಪ ಭಾರತದ ಅತೀ ಶ್ರೀಮಂತ ದೇಗುಲ ಎಂದೇ ಗುರುತಿಸಿಕೊಂಡಿದೆ. ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರತಿ ದಿನ ಕೋಟಿ ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ.
ಇತ್ತೀಚೆಗೆ ಚೆನ್ನೈನ ಉದ್ಯಮವೊಂದು ಬರೋಬ್ಬರಿ 2.5 ಕೋಟಿ ರೂಪಾಯಿ ಚಿನ್ನ ಹಾಗೂ 2.4 ಕೋಟಿ ರೂಪಾಯಿ ನಗದು ದೇಣಿಗೆ ರೂಪದಲ್ಲಿ ತಿರುಪತಿ ದೇಗುಲಕ್ಕೆ ನೀಡಿತ್ತು. ಚೆನ್ನೈ ಮೂಲದ ಸುದರ್ಶನ್ ಎಂಟರ್ಪ್ರೈಸಸ್ ಈ ದೇಣಿಗೆ ನೀಡಿತ್ತು. ಚಿನ್ನ ಶಂಖ ಸೇರಿದಂತೆ ಒಟ್ಟು 2.5 ಕೆಜಿ ತೂಕದ ಚಿನ್ನಾಭರಣವನ್ನು ತಿರುಪತಿ ದೇಗುಲಕ್ಕೆ ನೀಡಲಾಗಿತ್ತು. ಇದರ ಜೊತೆಗೆ 2.4 ಕೋಟಿ ರೂಪಾಯಿ ನಗದು ಹಣವನ್ನ ದೇಣಿಗೆ ರೂಪದಲ್ಲಿ ನೀಡಲಾಗಿತ್ತು.