
ಬೆಂಗಳೂರು (ಆ.15) ನಗರದ ವಿಲ್ಸನ್ ಗಾರ್ಡನ್ ಸಮೀಪ ಸಂಭವಿಸಿದ ಸ್ಫೋಟದಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪ್ರಮುಖವಾಗಿ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಮನೆ ಗೋಡೆಗಳು ಧರೆಗುರುಳಿದೆ. ಗೋಡೆ ಬಿದ್ದು ಹಲವರು ಗಾಯಗೊಂಡಿದ್ದರೆ, ಸ್ಫೋಟದ ತೀವ್ರತೆಗೆ ಸುಟ್ಟಗಾಯಗಳು ಆಗಿವೆ. ನಿಗೂಢ ಸ್ಫೋಟದ ಕುರಿತು ತನಿಖೆ ನಡೆಯುತ್ತಿದೆ. ಇತ್ತ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಇದರ ನಡುವೆ ಸ್ಫೋಟದ ಪ್ರಮುಖ ಕಾರಣ ಬಹಿರಂಗವಾಗಿದೆ. ವಿಲ್ಸನ್ ಗಾರ್ಡನ್‌ನ ಚಿನ್ನಯ್ಯನಪಾಳ್ಯದಲ್ಲಿ ಫ್ರಿಡ್ಜ್ ಸ್ಫೋಟದಿಂದ ಘಟನೆ ನಡೆದಿದೆ ಅನ್ನೋದು ಬಯಲಾಗಿದೆ.
ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಹೇಳಲಾಗಿತ್ತು. ಆದರೆ ಮನೆಯ ಸಿಲಿಂಡರ್‌ಗೆ ಯಾವುದೇ ಹಾನಿಯಾಗಿಲ್ಲ. ಈ ಸಿಲಿಂಡರ್ ಸ್ಫೋಟಗೊಂಡಿಲ್ಲ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಸ್ಫೋಟದ ತೀವ್ರತೆ ಹೆಚ್ಚಾಗಿದ್ದ ಕಾರಣ ಪೊಲೀಸರು ತನಿಖೆ ಚುರಕುಗೊಳಿಸಿದ್ದರು. ಇತ್ತ ಎಸ್‌ಡಿಆರ್‌ಎಫ್ ಕಾರ್ಯಾಚರಣೆ ವೇಳೆ ಸ್ಫೋಟದ ಕಾರಣ ಬಹಿರಂಗವಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಅನ್ನೋದು ಬಯಲಾಗಿದೆ.
ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ. ಈ ಮಾಹಿತಿ ಬಯಲಾಗುತ್ತಿದ್ದಂತೆ ಎಸ್‌ಡಿಆರ್‌ಎಫ್ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಮಾಹಿತಿ ಖಚಿತವಾಗುತ್ತಿದ್ದಂತೆ SDRF ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಸಿಲಿಂಡರ್ ಸ್ಫೋಟವಾಗಿಲ್ಲ ಅನ್ನೋ ಮಾಹಿತಿ ಬಯಲಾಗುತ್ತಿದ್ದಂತೆ ಡಾಗ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಆದರೆ ಫ್ರಿಡ್ಜ್ ಸ್ಫೋಟ ಖಚಿತವಾಗುತ್ತಿದ್ದಂತೆ ಡಾಗ್ ಸ್ಕ್ವಾಡ್ ತಂಡ ಮರಳಿದೆ. ಇದೀಗ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದೆ. ಇತ್ತ ಕಾರ್ಮಿಕರು ಮುರಿದು ಬಿದ್ದ, ಧ್ವಂಸಗೊಂಡಿರುವ ಮನೆ ಭಾಗಗಳನ್ನು ತೆರುವು ಮಾಡುವ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ.
ಕಸ್ತೂರಿ ಹಾಗೂ ಅಯ್ಯಪ್ಪನ್ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮೊದಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಇಡೀ ಕಟ್ಟಡ ಹಾಗೂ ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಸ್ತೂರಿ ಕುಟುಂಬ ಇಲ್ಲಿ ವಾಸವಿದೆ.
ವಿಲ್ಸನ್ ಗಾರ್ಡನ್ ಪ್ರಕರಣದಲ್ಲಿ ಯಾವುದೇ ಸ್ಫೋಟಕ ಬಳಕೆಯಾಗಿಲ್ಲ ಅನ್ನೋದು ಪೊಲೀಸರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಯಾವುದೇ ಐಇಡಿ ಬಳಕೆ ಆಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪೊಲೀಸರು, ಸೋಕೋ ಟೀಂ ಹಾಗೂ ಎಫ್ಎಸ್ಎಲ್ ಸಿಬ್ಬಂದಿಗಳ ಅಭಿಪ್ರಾಯದ ಮೇಲೆ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಘಟನೆ ನಡೆದಾಗ ಅಕ್ಕ ಪಕ್ಕದ ಮನೆಯಲ್ಲಿ ಒಟ್ಟು 9 ಸಿಲಿಂಡರ್ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಹಿಂದೆ ಸ್ಫೋಟಕದ ಷಡ್ಯಂತ್ರ ಇಲ್ಲ. ಫ್ರಿಡ್ಜ್, ಸಿಲಿಂಡರ್ ಸ್ಫೋಟಗಳಿಂದ ತೀವ್ರತೆಗೆ ಹೆಚ್ಚಾಗಿರುವ ಸಾಧ್ಯತೆಯನ್ನು ಪೊಲೀಸರು ಹೇಳಿದ್ದಾರೆ. ಹೀಗಾಗಿ ಪೊಲೀಸರು, ಸೋಕೋ ಟೀಂ ಹಾಗೂ ಎಫ್ಎಸ್ಎಲ್ ತಂಡ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.