'10ರೊಳಗೆ ಬೆಂಗಳೂರಿನ ಶೇ.90 ರಸ್ತೆಗಳು ಗುಂಡಿ ಮುಕ್ತ'...!

By Kannadaprabha NewsFirst Published Nov 6, 2019, 8:10 AM IST
Highlights

ನಗರದಲ್ಲಿ ಉಂಟಾಗಿದ್ದ ರಸ್ತೆ ಗುಂಡಿಗಳಲ್ಲಿ ಶೇ.50ರಷ್ಟುಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ ಗುಂಡಿಗಳನ್ನು ನ.10ರೊಳಗೆ ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ. ಈಗಾಗಲೇ ಗುರುತಿಸಲಾದ 6,520 ರಸ್ತೆ ಗುಂಡಿಗಳ ಪೈಕಿ 2,871 ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 3,649 ಗುಂಡಿ ಮುಚ್ಚಬೇಕಿದೆ ಎಂದಿದ್ದಾರೆ.

ಬೆಂಗಳೂರು(ನ.06): ನಗರದಲ್ಲಿ ಉಂಟಾಗಿದ್ದ ರಸ್ತೆ ಗುಂಡಿಗಳಲ್ಲಿ ಶೇ.50ರಷ್ಟುಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ ಗುಂಡಿಗಳನ್ನು ನ.10ರೊಳಗೆ ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಗುಂಡಿ ಮುಚ್ಚುವ ಸಂಬಂಧ ಸೋಮವಾರ ಆಯುಕ್ತರೊಂದಿಗೆ ಸಭೆ ನಡೆಸಲಾಗಿದೆ. ಈಗಾಗಲೇ ಗುರುತಿಸಲಾದ 6,520 ರಸ್ತೆ ಗುಂಡಿಗಳ ಪೈಕಿ 2,871 ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 3,649 ಗುಂಡಿ ಮುಚ್ಚಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪರಿಚಿತನ ಮನೆಗೆ ಕರೆದೊಯ್ದು ಚಾಕು ಇರಿದು ರಸ್ತೆಗೆ ಬಿಸಾಕಿದ!

ನ.10ರೊಳಗೆ ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತವಾಗಬೇಕು ಎಂದು ಸೂಚನೆ ನೀಡಲಾಗಿದೆ. ನೀಡಲಾದ ಗಡುವಿನ ಒಳಗೆ ಶೇ.90ರಷ್ಟುರಸ್ತೆಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕೆಲವು ಕಡೆ ಜಲಮಂಡಳಿ ಹಾಗೂ ಬೆಸ್ಕಾಂ ಕಾಮಗಾರಿಗಳಿಗಾಗಿ ರಸ್ತೆಯನ್ನು ಅಗೆಯುತ್ತಿದೆ. ಆ ಸಂಸ್ಥೆಗಳ ಕಾಮಗಾರಿ ಮುಗಿದ ಕೂಡಲೇ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ಟಿಪ್ಪು ಜಯಂತಿ ರದ್ದುಗೊಳಿಸಲು ಕಾರಣ ಹೇಳಿದ ಹೈ ಕೋರ್ಟ್

click me!