
ಹೊಸಕೋಟೆ (ಸೆ.14) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಕಲುಕುವ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಬದುಕು ಅಂತ್ಯಗೊಳಿಸಲು ಯತ್ನಿಸಿದ ಘಟನೆಯಲ್ಲಿ ಮೂವರು ಮೃತಪಟ್ಟು ಮಹಿಳೆ ಬದುಕುಳಿದ ಘಟನೆ ನಡೆದಿದೆ. ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದ ದಂಪತಿ ಶಿವು ಹಾಗೂ ಮಂಜುಳಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ಪತ್ನಿ ಬದುಕುಳಿದ್ದಾರೆ.
32 ವರ್ಷದ ಶಿವು ಅಪಘಾತದಲ್ಲಿ ಗಾಯಗೊಂಡಿದ್ದ. ಹೀಗಾಗಿ ಚಿಕಿತ್ಸೆ ಪಡೆಯಲು ಸಾಲ ಮಾಡಿದ್ದರು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಇದು ಅತೀವ ಹೊರೆಯಾಗಿತ್ತು. ಜೊತೆಗೆ ಗಂಡ ಚೇತರಿಸಿಕೊಳ್ಳಲು ಸುದೀರ್ಘ ದಿನಗಳು ಬೇಕಾಗಿತ್ತು. ಅಲ್ಲೀವರೆಗೆ ಬದುಕು ಸಾಗಿಸಲು, ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪ್ರತಿ ದಿನ ಸಾಲದ ಹೊರೆ ಹೆಚ್ಚಾಗಿತ್ತು. ಜೊತೆಗೆ ಮಕ್ಕಳನ್ನು ಆರೈಕೆ ಮಾಡಲು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಶಿವು ಹಾಗೂ ಮಂಜುಳಾ ದಂಪತಿ ಬದುಕು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ಆಫೀಸ್ ಮೀಟಿಂಗ್‌ನಿಂದ ಅರ್ಧಕ್ಕೇ ಹೊರಬಂದು ಕಟ್ಟಡದಿಂದ ಜಿಗಿದ 23ರ ಹರೆಯದ ಟೆಕ್ಕಿ
ನಾವಿಬ್ಬರು ಮೃತಪಟ್ಟರೆ ಮಕ್ಕಳು ತಬ್ಬಳಿಗಳಾಗುತ್ತಾರೆ. ಹೀಗಾಗಿ ಮಕ್ಕಳನ್ನು ಸಾಯಿಸಿ ತಾವು ಸಾಯುವ ನಿರ್ಧಾರ ಮಾಡಿದ್ದಾರೆ. ಮೊದಲಿಗೆ ಪತಿ ಹಾಗೂ ಇಬ್ಬರು ಮಕ್ಕಳನ್ನು ವೇಲ್‌ನಿಂದ ಬಿಗಿದು ಹತ್ಯೆ ಮಾಡಿದ ಪತ್ನಿ ಮಂಜುಳಾ ಬಳಿಕ ತಾನು ವೇಲ್ ಬಿಗಿದು ಬದುಕು ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಬಳಿಕ ಪತ್ನಿ ಹಗ್ಗದ ಮೂಲಕ ಬದುಕು ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಆದರೆ ಹಗ್ಗ ಮುರಿದ ಕಾರಣ ಪತ್ನಿ ಬದುಕುಳಿದ್ದಾರೆ. ಗಂಡ ಶಿವು ( 32 ) ಮಗಳು ಚಂದ್ರಕಲಾ ( 11 ) ಮಗ ಉದಯ್ ಸೂರ್ಯ ( 07 ) ಮೃತಪಟ್ಟಿದ್ದಾರೆ.
ಮಹಿಳೆ ಬದುಕು ಅಂತ್ಯಗೊಳಿಸುವ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ. ಹಗ್ಗ ಬಿಗಿದಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ರೈತ ಬದುಕು ಅಂತ್ಯಗೊಳಿಸಿದ ಘಟನೆ ನಡೆದಿತ್ತು. ಸಾಲಬಾಧೆ ಮತ್ತು ಬೆಳೆ ಹಾನಿಯಿಂದ ರೈತ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರು. ವಿವಿಧ ಬ್ಯಾಂಕ್ ನಲ್ಲಿ ಎಂಟು ಲಕ್ಷ ಸಾಲ ಮಾಡಿದ್ದ. ಇತ್ತ ಫಸಲು ಬರದೆ ಅತ್ತ ಸಾಲು ಮರುಪಾವತಿಸಲು ಸಾಧ್ಯವಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ. ನಿರಂತರ ಮಳೆಯಿಂದ ಬೆಳೆ ಹಾಳಾಗಿ ಹೋಗಿತ್ತು. ಇನ್ನೊಂದಡೆ ಸಾಲ ಕಟ್ಟುವಂತೆ ಬ್ಯಾಂಕ್ ನಿಂದ ಸೂಚನೆ ಹಿನ್ನೆಲೆಯಲ್ಲಿ ರೈತ ರುದ್ರಗೌಡ ರಾಮನಗೌಡ್ರ ಬದುಕು ಅಂತ್ಯಗೊಳಿಸಿದ್ದಾರೆ.
ಅಪ್ಪಾ ಎಂದು ಕರೆದಿದ್ದಕ್ಕೆ 4 ವರ್ಷದ ಮಗಳನ್ನ ಕೊಂದು ಸಮುದ್ರಕ್ಕೆ ಎಸೆದ ತಂದೆ