ಬೆಳಗಾವಿ: ಇಟಗಿಯಲ್ಲಿ ಗೋವಾ ಕದಂಬರ ಕಾಲದ ಕ್ರಿ.ಶ.1062ರ ಯುಗದ ಅಪರೂಪದ ಶಿಲಾಶಾಸನ ಪತ್ತೆ,!

Published : Sep 22, 2026, 08:51 AM IST
Goa Kadamba Era Inscription

ಸಾರಾಂಶ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಕಮಲನಾರಾಯಣ ದೇವಾಲಯದಲ್ಲಿ ಗೋವಾ ಕದಂಬರ ಕಾಲದ ಪ್ರಾಚೀನ ಶಿಲಾಶಾಸನವೊಂದು ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರು ಇದನ್ನು ಪರಿಶೀಲಿಸಿದ್ದು, ಇದು ಕ್ರಿ.ಶ. 1062ರ ದೊರೆ ಜಯಕೇಶಿಯ ಕಾಲದ ಹಳಗನ್ನಡ ಶಾಸನವಾಗಿದೆ.

ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಶ್ರೀ ಕಮಲನಾರಾಯಣ ದೇವಾಲಯದಲ್ಲಿ ಗೋವಾ ಕದಂಬರ ಕಾಲದ ಶಾಸನ ಪತ್ತೆಯಾಗಿದೆ. ಗ್ರಾಮದ ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೋಮವಾರ ಇಟಗಿಯ ಕಮಲನಾರಾಯಣ ದೇವಾಲಯದ ಪ್ರಾಚೀನ ಕಲ್ಲುಗಳ ಪೈಕಿ ಒಂದು ಕಲ್ಲಿನ ತುಂಡಿನಲ್ಲಿ ಅದರ ಮೇಲೆ ಪತ್ತೆಯಾದ ಶಾಸನವನ್ನು ಪರಿಶೀಲಿಸಿ ಮಾತನಾಡಿದ ಅವರು, ಕ್ರಿ.ಶ.4ನೇ ಶತಮಾನದಿಂದ 13ನೇ ಶತಮಾನದವರೆಗೆ ಕದಂಬರು ಹಲಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದರು. ಈ ಕಾಲದಲ್ಲಿ ಕದಂಬರು ಇಟಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದರು. ತಮ್ಮ ವಿಜಯದ ದ್ಯೋತಕವಾಗಿ ಇಟಗಿ ಹಾಗೂ ಸುತ್ತಲಿನ ಭಾಗದಲ್ಲಿ ಹಲವಾರು ದೇವಾಲಯಗಳನ್ನು ಕಟ್ಟಿಸಿದ್ದರು ಎಂದು ಇತಿಹಾಸದ ಬಗ್ಗೆ ವಿವರಿಸಿದರು.

ಕ್ರಿ.ಶ.1062ರ ಜಯಕೇಶಿಯ ಕಾಲದ್ದು

ಕದಂಬ ಅರಸರು ತಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಶಿಲಾ ಶಾಸನಗಳನ್ನು ನಿಲ್ಲಿಸಿದ್ದಾರೆ. ಈಗ ಪತ್ತೆಯಾಗಿರುವ ಶಿಲಾ ಶಾಸನವನ್ನು ಗಮನಿಸಿದಾಗ ಅದರಲ್ಲಿ ಸುಮಾರು 56 ಸಾಲುಗಳಿರುವ ಸಾಧ್ಯತೆ ಇದೆ. ಮೇಲಿನ ಭಾಗವು ಒಡೆದು ಹೋಗಿದೆ. ಶಾಸನದ ಕೆಳಭಾಗ ಮಾತ್ರ ಸಿಕ್ಕಿದೆ. ಇದರಲ್ಲಿ 21 ಸಾಲುಗಳಿವೆ. ಇದು ಕ್ರಿ.ಶ.1062ರಲ್ಲಿ ಈ ಭಾಗವನ್ನಾಳಿದ ಗೋವಾ ಕದಂಬರ ದೊರೆ ಜಯಕೇಶಿಯ ಕಾಲದ್ದಾಗಿದೆ. ಈ ಕಾಲದ ಸಂಸ್ಕೃತ ತಾಮ್ರ ಶಾಸನಗಳು ಇಟಗಿ ಗ್ರಾಮದ ಆಂಜನೇಯ ದೇವಾಲಯದಲ್ಲಿ ಈ ಹಿಂದೆ ದೊರೆತಿದ್ದು, ಈಗ ದೊರೆತಿರುವ ಶಾಸನ ಹಳಗನ್ನಡದಲ್ಲಿದೆ. ತಾಮ್ರ ಶಾಸನದಲ್ಲಿ ಹೇಳಿದ ವಿಷಯವನ್ನೇ ಇಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಖಾನಾಪುರ ತಾಲೂಕಿನ ಇಟಗಿಯ ಕಮಲನಾರಾಯಣ ದೇವಾಲಯದಲ್ಲಿ ಪತ್ತೆಯಾದ ಗೋವಾ ಕದಂಬರ ಕಾಲದ ಶಿಲಾಶಾಸನವನ್ನು ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ, ನಿವೃತ್ತ ಪ್ರಾಚಾರ್ಯ ವಿಜಯ ಬಡಿಗೇರ ಹಾಗೂ ಇತರರು ಪರಿಶೀಲಿಸಿದರು.

PREV
Read more Articles on
click me!

Recommended Stories

ಬೆಳಗಾವಿ ದಮೋನೆ ಫ್ಯಾಮಿಲಿ ದುರಂತದ ಟ್ವಿಸ್ಟ್: 6 ಜನರ ಸಾವಿಗೆ ಫ್ರಿಡ್ಜ್ ಬ್ಲಾಸ್ಟ್ ಕಾರಣವಲ್ಲ, CCTV ವಿಡಿಯೋ ಸಂದೇಹ!
ಸಚಿವ ಸತೀಶ್ ಜಾರಕಿಹೊಳಿ ಇಡಿ ದಾಳಿ ಪ್ರಕರಣ: 3000 ಕೋಟಿಯ ಮೂರು PWD ಟೆಂಡರ್‌ನಿಂದ ಕಿಕ್‌ಬ್ಯಾಕ್ ಆರೋಪ