ಮುಸ್ಲಿಂ ಅಂಗಡಿ ಧ್ವಂಸ ಮಾಡಿದವರ ವಿರುದ್ಧ ಕ್ರಮ Minister Madhuswamy

Published : Apr 10, 2022, 09:07 PM IST
 ಮುಸ್ಲಿಂ ಅಂಗಡಿ ಧ್ವಂಸ ಮಾಡಿದವರ ವಿರುದ್ಧ ಕ್ರಮ  Minister Madhuswamy

ಸಾರಾಂಶ

  ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಎಲ್ಲರ ಹಿತರಕ್ಷಣೆಗೆ ನಾವು ಕೆಲಸ ಮಾಡ್ತೀವಿ ಪ್ರಮೋದ್ ಮುತಾಲಿಕ್ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದ ಮಾಧುಸ್ವಾಮಿ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಳಗಾವಿ(ಎ.10): ಧಾರವಾಡದಲ್ಲಿ (Dharwad ) ಮುಸ್ಲಿಂ (muslim) ಕಲ್ಲಂಗಡಿ ವ್ಯಾಪಾರಿ ಅಂಗಡಿ ಮೇಲೆ ದಾಳಿ ಪ್ರಕರಣವಾಗಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ (Minister Madhuswamy), 'ಸರ್ಕಾರದವರು ದಾಳಿಗಳನ್ನು ತಡೆಯೋಕಾಗಲ್ವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ 'ಹೇಗೆ ನಿರೀಕ್ಷೆ ಮಾಡ್ತೀರಿ? ಒಂದು ದಿವಸ ಮಾವಿನ ಹಣ್ಣಿಂದು ಇನ್ನೊಂದು ದಿವಸ ಯಾರದೋ ಚಂದ್ರುಂದು, ರಾಜ್ಯದಲ್ಲಿ ಎಲ್ಲೆಲ್ಲೋ ಒಂದು ಘಟನೆ ನಡೆಯೋದಕ್ಕೆಲ್ಲಾ ಈ ರೀತಿ ಬಣ್ಣ ಕಟ್ಟೋದನ್ನು ಯಾರು ಸರ್ಕಾರ ನಡೆಸುವವರು ನಿರೀಕ್ಷೆ ಮಾಡೋಕಾಗಿರುತ್ತೆ? ಗಲಾಟೆ ಮಾಡಿದವರ ಮೇಲೆ ಕ್ರಮ ಆಗುತ್ತೆ, ಕ್ರಮ ಆಗೋದಿಲ್ಲ ಅಂತಾ ಹೇಳೋಕಾಗೋದಿಲ್ಲ‌. ಸಿಎಂ ಬಸವರಾಜ ಬೊಮ್ಮಾಯಿ ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾನೂ ಸಹ ಇವತ್ತು ಹೇಳಿದ್ದೇನೆ ತನಿಖೆ ಆಗಬೇಕಾಗುತ್ತೆ. ಯಾರು ವಾತಾವರಣ ಹಾಳು ಮಾಡ್ತಿದ್ದಾರೆ ಯಾರೇ ಆದ್ರೂ ನಾವು ಕ್ರಮ ಜರುಗಿಸುತ್ತೇವೆ‌. ಯಾವ ಸರ್ಕಾರವೂ ಇದನ್ನೆಲ್ಲಾ ಸಹಿಸಲು ಆಗಲ್ಲ' ಎಂದರು. 

ಇನ್ನು ಪೊಲೀಸರು ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಬಹುದಿತ್ತಲ್ವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ, 'ನಮಗೂ ಯಾರೂ ಏನೂ ಅಂತಾ ಗೊತ್ತಾಗದೇನೆ ಹೇಗೆ ಕೇಸ್ ಹಾಕೋದು? ದೂರುದಾರ ಇಲ್ಲ ಹೇಳಿರೋರು ಇಲ್ಲ, ಇಂತವರು ಮಾಡಿದಾರೆ ಅಂತಾ ಕಂಪ್ಲೆಂಟ್ ಕೊಟ್ರೆ ಕೇಸ್ ಮಾಡಬಹುದು. ಗೊತ್ತಿಲ್ಲ ಅಂದ್ಮೇಲೆ ತನಿಖೆ ಮಾಡಿಯೇ ಯಾರು ಅಂತಾ ಪತ್ತೆ ಮಾಡಿ ಕೇಸ್ ಹಾಕಬೇಕಾಗುತ್ತೆ, ಅದಕ್ಕೆ ಸ್ವಲ್ಪ ಕಾಲ ಬೇಕಾಗುತ್ತೆ. 

ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಪಾರ್ಸಿ ಜೈನ್ ಈ ದೇಶದಲ್ಲಿ ಇರೋರು ಎಲ್ಲರೂ ಭಾರತೀಯರು ಅಂತಾ ಒಪ್ಪಿಕೊಂಡು ಬಿಟ್ಟಿದೀವಿ ನಾವು. ಯಾರೋ ಮಾಡೋ ಕಿಡಿಗೇಡಿತನಕ್ಕೆ ಧರ್ಮಗಳನ್ನು ನಾವು ಒಂದರ ಮೇಲೆ ಒಂದು ಘರ್ಷಣೆಗೆ ತರೋದು ಸರಿಯಲ್ಲ ಅನ್ನೋದು ನನ್ನ ಭಾವನೆ' ಎಂದರು. 

BELAGAVI ಶ್ರೀರಾಮನವಮಿ ಶೋಭಾಯಾತ್ರೆಯಲ್ಲಿ ಪುನೀತ್ ರಾಜ್‍ಕುಮಾರ್ ನೆನಪು!

ಇನ್ನು ಮುಸ್ಲಿಂ ವರ್ತಕರಿಗೆ ಆರ್ಥಿಕ ಬಹಿಷ್ಕಾರ ವಿಚಾರವಾಗಿ ಪ್ರತಿಕ್ರಿಯಿಸಿ, 'ಯಾರು ಆರ್ಥಿಕ ಬಹಿಷ್ಕಾರ ಹಾಕಿದಾರೆ? ಯಾರೋ ಒಬ್ಬ ಮಾತನಾಡೋದು ಆರ್ಥಿಕ  ಬಹಿಷ್ಕಾರ ಆಗುತ್ತಾ? ಆರ್ಥಿಕ ಬಹಿಷ್ಕಾರ ಹಾಕೋಕೆ ಸಾಧ್ಯನಾ? ಆ ಸಂಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಏನು ಆಗಿದೆ ವಾಸ್ತವ ಮಾಹಿತಿ ತಗೆದುಕೊಂಡ ಮೇಲೆ ನಿಜವಾದ ಕ್ರಮ ಜರುಗಿಸುತ್ತೇವೆ. ಕ್ರಮ ಕೈಗೊಳ್ಳಬೇಕಾಗುತ್ತೆ ಇಲ್ಲವಾದ್ರೆ ಸರ್ಕಾರ ನಡೆಸೊದು ಹೇಗೆ? ಯಾರಾದರೂ ಸುಮ್ಮಸುಮ್ಮನೇ ಪ್ರಚೋದನೆ ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಕಾನೂನು ಸುವ್ಯವಸ್ಥೆ ಮೆಂಟೇನ್ ಹೇಗೆ ಮಾಡಕ್ಕಾಗುತ್ತೆ?' ಅಂತಾ ಪರೋಕ್ಷವಾಗಿ ಹಿಂದೂಪರ ಸಂಘಟನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಭಿಯಾನ ಮಾಡ್ತೀನಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 'ನಾನು ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಆಗೋದಿಲ್ಲ. ಪ್ರಮೋದ್ ಮುತಾಲಿಕ್ ವೈಯಕ್ತಿಕವಾಗಿ ಏನ್ ಮಾತನಾಡ್ತಾರೋ ಅವರಿಗೆ ಬಿಟ್ಟಿದ್ದು. ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಕಾನೂನು ಯಾರೇ ಕೈಗೆ ತಗೆದುಕೊಂಡರೂ ಅವರ ವಿರುದ್ಧ ಕ್ರಮ ಆಗುತ್ತೆ' ಅಂತಾ ಎಚ್ಚರಿಕೆ ನೀಡಿದರು.

Chitradurga ಜಮೀನು ಮಾಲೀಕನ ಬೆದರಿಕೆಯೇ ಕುರಿಗಾಹಿಯನ್ನು ಬಲಿ ಪಡೆಯಿತೇ?

'ಆರ್‌ಎಸ್ಎಸ್ ರಾಷ್ಟ್ರಪ್ರೇಮಿ ಸಂಘಟನೆ': ಸಂಘ ಪರಿವಾರದವರು ರಣಹೇಡಿಗಳು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, 'ಆರ್‌ಎಸ್ಎಸ್ ರಾಷ್ಟ್ರೀಯ ಪ್ರೇಮಿ ಸಂಘಟನೆ. ದೇಶ ಕಟ್ಟಲಿಕ್ಕೆ ರಾಷ್ಟ್ರ ಗೌರವಿಸಲು ಅವರು ಪಡುತ್ತಿರುವ ಶ್ರಮಕ್ಕೆ ಬೆಲೆ ಕಟ್ಟೋಕೆ ಆಗೋದಿಲ್ಲ. ವಿರೋಧಿಗಳು ಏನ್ ಹೇಳ್ತಾರೆ ಹೇಳುತ್ತಿರುತ್ತಾರೆ‌. ಯಾವುದರಲ್ಲೂ ಆರ್‌ಎಸ್ಎಸ್ ವಿವಾದ ಸೃಷ್ಟಿ ಮಾಡಿದೆ ಅಂತಾ ಭಾವಿಸಕ್ಕಾಗಲ್ಲ. ಆರ್‌ಎಸ್ಎಸ್‌ಗೂ ಯಾವುದಕ್ಕೂ ಸಂಬಂಧ ಇಲ್ಲ. ಮಾತು ಮಾತಿಗೆ ಅವರನ್ನು ಎಳೆದು ತರುವಂತದ್ದು ಸರಿಯಲ್ಲ.

 ಬಿ.ಕೆ.ಹರಿಪ್ರಸಾದ್ ಆರ್‌ಎಸ್ಎಸ್ ಟೀಕೆ ಮಾಡೋದನ್ನ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದಾರೆ. ಏನೂ ಕಾಣದೇ ಕೇಳದೇ ಎಲ್ಲಕ್ಕೂ ಆರ್‌ಎಸ್ಎಸ್ ಕಾರಣ ಅಂತಾ ಮಾತನಾಡೋದು ಗೌರವ ತರಲ್ಲ. ಮಾತಿನಲ್ಲೇ ಅವರು ಧೀರರಾದ್ರೆ, ರಣಹೇಡಿಗಳು ಅಂದ್ರೆ ಒಂದು ದಿವಸ ಅವರೇ ಪಶ್ಚಾತ್ತಾಪ ಪಡಬೇಕಾಗುತ್ತೆ. ಮಾತನಾಡೋದೆ ಧೀರರ ಲಕ್ಷಣ ಅಲ್ಲ, ಒಳ್ಳೆಯದು ಮಾಡೋದೆ ಧೀರರ ಲಕ್ಷಣ. 

ಹರಿಪ್ರಸಾದ್ ಮಾತನಾಡುವ ಧೋರಣೆ ಸಮಾಜದ ದೃಷ್ಟಿಯಿಂದ ಒಳ್ಳೆಯದಾಗಲ್ಲ. ವಿನಾಕಾರಣ ಒಂದು ಸಂಘಟನೆ ಗುರುತಿಸಿ ಮಾತನಾಡೋದು, ವಿನಾಕಾರಣ ಸಂಘಟನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು ಸರಿಯಲ್ಲ. ನಾಗ್ಪುರ ನಾಗ್ಪುರ ಅಂತೀರಿ ಆ ನಾಗ್ಪುರದಲ್ಲೇ ಅಂಬೇಡ್ಕರ್ ದೀಕ್ಷೆ ಪಡೆದಿದ್ದು, ಅದೇ ಅವರಿಗೆ ದೀಕ್ಷಾ ಸ್ಥಾನ. ಊರು ಏನು ಕೆಟ್ಟ ಊರು ಅಲ್ಲ ಎಲ್ಲರಿಗೂ ಒಳ್ಳೆಯದೇ ಆಗಿದೆ. ಆರ್‌ಎಸ್ಎಸ್ ದೇಶದ್ರೋಹಿ ಕೆಲಸ ಮಾಡ್ತಿದೆ ಅಂತಾ ಏನಿಲ್ಲ‌. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಎಲ್ಲ ರೀತಿ ಕಾರ್ಯಕ್ರಮ ಮಾಡಿ ದೇಶದ ಘನತೆ ಗೌರವ ಹೆಚ್ಚಿಸುತ್ತಿದ್ದಾರೆ. ನಾವು ಅವರನ್ನು ಶ್ಲಾಘಿಸಬೇಕು ಹೊರತು ಈ ರೀತಿ ಟೀಕೆ ಮಾಡೋದು ಗೌರವ ತರೋದಿಲ್ಲ' ಅಂತಾ ಹೇಳಿದರು.

'ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ'
ಇನ್ನು ರಾಜ್ಯ ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, 'ನಾನು ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಭಾಗವಾಗಿ ನಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಯಾವತ್ತೂ ಉದ್ಭವವಾಗಿಲ್ಲ ಆ ರೀತಿ ನಾನು ಮಾತೂ ಆಡಿಲ್ಲ ಅಂತಾ ಸ್ಪಷ್ಟಪಡಿಸಿದರು‌. 

ಬೆಂಗಳೂರಿನಲ್ಲಿ ಚಂದ್ರು ಹತ್ಯೆ ವಿಚಾರವಾಗಿ ಆಕಸ್ಮಿಕವಾಗಿ ಗೃಹಸಚಿವರು ತಮಗೆ ಬಂದ ಮಾಹಿತಿ ಆಧಾರದ ಮೇಲೆ ಹೇಳಿದಾರೆ ಎಂದಿದ್ದೆ. ನಂತರ ಅವರೇ ತಿದ್ದುಕೊಂಡಿದ್ದಾರೆ ಅವರು ಮಾತನಾಡಿದ ಮೇಲೆ ಏನ್ ಮಾತಾಡೋದಿದೆ ಅಂತಾ ಸ್ಪಷ್ಟವಾಗಿ ಹೇಳಿದೀನಿ‌. ವಿವಾದ ಎಲ್ಲಾ ಸೃಷ್ಟಿ ಮಾಡೋದು ಸರಿಯಾ ಅಂತಾ ಮಾಧ್ಯಮದವರು ಕೇಳಿದ್ರು, ಆಗ ಸರ್ಕಾರ ಇದಕ್ಕೆಲ್ಲ ಜವಾಬ್ದಾರಿ ಅಲ್ಲಾ, ಯಾವ ಸರ್ಕಾರ ವಿವಾದ ಸೃಷ್ಟಿ ಮಾಡಲು ಇರೋದಿಲ್ಲ, ವಿವಾದ ಬಗೆಹರಿಸಲು ನಾವು ಸರ್ಕಾರ ನಡೆಸೋದು, ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮೊದಲ ಆದ್ಯತೆ ಅಂತಾ ಹೇಳಿದೀನಿ‌. ಅದನ್ನ ಹಾಳು ಮಾಡಲು ಯಾರಾದರೂ ಪ್ರಯತ್ನಿಸಿದ್ರೆ ನಿಲ್ಲಿಸಬೇಕಾಗುತ್ತೆ.‌ ನಿಲ್ಲಿಸದೇ ಹೋದ್ರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವ ಯೋಚನೆ ಮಾಡಲೇಬೇಕಾಗುತ್ತೆ. ಕಾನೂನು ಗೌರವಿಸಲೇಬೇಕು ಅಂತಾ ಹೇಳಿದ್ದೀನಿ.

ಇದೊಂದು ದೊಡ್ಡ ಸಮಾಜ ಯಾರು ಏನ್ ಮಾಡ್ತಾರೆ, ಏನ್ ಉದ್ದೇಶ ಇರುತ್ತೆ ಏಕಾಏಕಿ ಅರ್ಥ ಮಾಡಿಕೊಳ್ಳಲು ಆಗಲ್ಲ ಊಹೆ ಮಾಡಲು ಆಗಲ್ಲ. ಅದು ಆದ ನಂತರ ತನಿಖೆಗಳು ಆದ್ರೆ ಬೆಳಕಿಗೆ ಬರುತ್ತೆ. ಒಂದು ನೆಲೆಯಲ್ಲಿ ಇರುವಾಗ ಬದುಕನ್ನು ನಾವೇ ವಿವಾದ ಸೃಷ್ಟಿ ಮಾಡೋದು ಶಾಂತಿ ಕದಡೋದು ಕೆಲಸ ಮಾಡಬಾರದು ಅನ್ನೋದು ನನ್ನ ಭಾವನೆ. ಇವತ್ತು ಎಲ್ಲರಿಗೂ ಸರ್ಕಾರವೇ ನಾವು.ಎಲ್ಲರ ದೃಷ್ಟಿಯಲ್ಲಿ ಕೆಲಸ ಮಾಡಬೇಕಾಗುತ್ತೆ, ಎಲ್ಲರ ಹಿತರಕ್ಷಣೆಗೆ ನಾವು ಕೆಲಸ ಮಾಡ್ತೀವಿ' ಎಂದು ತಿಳಿಸಿದ್ದಾರೆ‌.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ