Union Bank Recruitment 2023: ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ

By Gowthami K  |  First Published Jan 27, 2023, 4:23 PM IST

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಫೆಬ್ರವರಿ 12 ಕೊನೆಯ ದಿನಾಂಕವಾಗಿದೆ.


ನವದೆಹಲಿ (ಜ.27): ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಮ್ಯಾನೇಜರ್ (ಕ್ರೆಡಿಟ್ ಆಫೀಸರ್) ಮತ್ತು ಇತರ ವಿಶೇಷ ವಿಭಾಗಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಯ ಅಡಿಯಲ್ಲಿ ಕಾಯ್ದಿರಿಸಿದ ವರ್ಗಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ Unionbankofindia.co.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 42 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಫೆಬ್ರವರಿ 12 ಕೊನೆಯ ದಿನಾಂಕವಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳ ವಿವರ:
ಮುಖ್ಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್): 3 ಹುದ್ದೆಗಳು
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 34 ಹುದ್ದೆಗಳು
ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 5 ಹುದ್ದೆಗಳು

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಮುಖ್ಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್): ಅಭ್ಯರ್ಥಿಯು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಯ ಸಹಾಯಕ ಸದಸ್ಯರಾಗಿರಬೇಕು (ACA).
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಮ್ಯಾನೇಜರ್ (ಕ್ರೆಡಿಟ್ ಆಫೀಸರ್): ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವೇತನ ವಿವರ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ.
ಚಾರ್ಟರ್ಡ್ ಅಕೌಂಟೆಂಟ್): 76010 ರೂ ನಿಂದ   89890 ರೂ
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 63840 ರೂ ನಿಂದ  78230 ರೂ  
ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 48170 ರೂ ನಿಂದ  69810 ರೂ 

ಬೀದರ್‌ನ ಚೀನಾ ಡಾಕ್ಟರ್‌ಗೆ ಸರ್ಕಾರಿ ಹುದ್ದೆ ಇಲ್ಲ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಯೋಮಿತಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯೋಮಿತಿ 22 ವರ್ಷದಿಂದ 35 ವರ್ಷದ ಒಳಗಿರಬೇಕು.

ZOMATO RECRUITMENT : ವಿವಿಧ 800 ಹುದ್ದೆಗಳ ನೇಮಕಾತಿಗೆ ಮುಂದಾದ ಝೊಮ್ಯಾಟೋ

ಅರ್ಜಿ ಶುಲ್ಕ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ   SC/ST/PWBD ಅಭ್ಯರ್ಥಿಗಳು ರೂ. 150 ಮತ್ತು OBC ರೂ.850  ಅರ್ಜಿ ಶುಲ್ಕ ಪಾವತಿಸಬೇಕು.

click me!