Central Bank of India Recruitment 2023: ವಿವಿಧ 250 ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami KFirst Published Feb 2, 2023, 3:48 PM IST
Highlights

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ  ತನ್ನಲ್ಲಿ ಖಾಲಿ ಇರುವ ವಿವಿಧ 250 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು  ಫೆಬ್ರವರಿ 11 ಕೊನೆಯ ದಿನವಾಗಿದೆ.

ನವದೆಹಲಿ (ಫೆ.2): ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ  ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಚೀಫ್ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 250 ಖಾಲಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಅರ್ಜಿ ಆನ್‌ಲೈನ್ ವಿಂಡೋ 11 ಫೆಬ್ರವರಿ 2023 ರವರೆಗೆ ತೆರೆದಿರುತ್ತದೆ. ಆಕಾಂಕ್ಷಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 ಗೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ವಿವರಗಳಿಗಾಗಿ ಅಧಿಕೃತ ವೆಬ್ ತಾಣ  https://www.centralbankofindia.co.in ಗೆ ಭೇಟಿ ನೀಡಲು ಕೋರಲಾಗಿದೆ. 

ವಯೋಮಿತಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 ರ ಅಧಿಸೂಚನೆಯ ಪ್ರಕಾರ, ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ವಯಸ್ಸಿನ ಮಿತಿಯು 35 ವರ್ಷಗಳಿಗಿಂತ ಹೆಚ್ಚಿರಬಾರದು ಮತ್ತು ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ, ವಯಸ್ಸಿನ ಮಿತಿಯು 40 ವರ್ಷಗಳಿಗಿಂತ ಹೆಚ್ಚಿರಬಾರದು. ವಯೋಮಿತಿಯನ್ನು 31 ಡಿಸೆಂಬರ್ 2022 ರಿಂದ ಲೆಕ್ಕಹಾಕಲಾಗುತ್ತದೆ. 

ಆಯ್ಕೆ ಪ್ರಕ್ರಿಯೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ  ಆಯ್ಕೆ ಮಾಡಲಾಗುತ್ತದೆ. 

ಅನುಭವ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಪ್ರಕಾರ ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಮತ್ತು PSV, ಖಾಸಗಿ ಬ್ಯಾಂಕ್‌ಗಳು, NBFC ಇತ್ಯಾದಿಗಳ ಅಡಿಯಲ್ಲಿ ಕನಿಷ್ಠ 7 ವರ್ಷಗಳ ಅನುಭವವನ್ನು ಹೊಂದಿರಬೇಕು.

Karnataka Post Office Recruitment 2023: ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿಗೆ

ಅರ್ಜಿ ಶುಲ್ಕ:  ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕೆಳಗೆ ನೀಡಲಾದ  ವರ್ಗವಾರು ಅರ್ಜಿ ಶುಲ್ಕ ಪಾವತಿಸಬೇಕು.

ST/SC/PWBD/ಮಹಿಳೆಯರು: ಯಾವುದೇ ಅರ್ಜಿ ಶುಲ್ಕವಿಲ್ಲ
ಇತರ ಎಲ್ಲಾ  ವರ್ಗಗಳಿಗೆ : ರೂ. 850/- ಅರ್ಜಿ ಶುಲ್ಕವಿದೆ.

UNION BANK RECRUITMENT 2023: ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಮುಖ್ಯ ವ್ಯವಸ್ಥಾಪಕರು: ಅಭ್ಯರ್ಥಿಗಳು ಪದವೀಧರರಾಗಿರಬೇಕು (ಯಾವುದೇ ವಿಭಾಗದಲ್ಲಿ). ಪಿಎಸ್‌ಬಿ/ಖಾಸಗಿ ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 7 ವರ್ಷಗಳ ಅನುಭವ. ಶಾಖೆಯ ವ್ಯವಸ್ಥಾಪಕ/ ಕ್ರೆಡಿಟ್/ ವಿದೇಶಿ ವಿನಿಮಯದಂತಹ ಯಾವುದೇ ಅನುಭವಕ್ಕೆ ಆದ್ಯತೆ ನೀಡಲಾಗುವುದು.

ಹಿರಿಯ ವ್ಯವಸ್ಥಾಪಕರು: ಅಭ್ಯರ್ಥಿಗಳು ಪದವೀಧರರಾಗಿರಬೇಕು (ಯಾವುದೇ ವಿಭಾಗದಲ್ಲಿ) ಪಿಎಸ್‌ಬಿ/ಖಾಸಗಿ ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 5 ವರ್ಷಗಳ ಅನುಭವ. ಶಾಖಾ ವ್ಯವಸ್ಥಾಪಕ/ ಕ್ರೆಡಿಟ್/ ವಿದೇಶಿ ವಿನಿಮಯದಂತಹ ಯಾವುದೇ ಅನುಭವಕ್ಕೆ ಆದ್ಯತೆ ನೀಡಲಾಗುವುದು.
 

click me!