ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ, ಅಪೆಕ್ಸ್ ಬ್ಯಾಂಕ್ ನಲ್ಲಿ ನೇಮಕಾತಿ

By Suvarna News  |  First Published Apr 3, 2024, 2:03 PM IST

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು, ಇಲ್ಲಿ ಖಾಲಿ ಇರುವ 93 ಬ್ಯಾಂಕ್ ಸಹಾಯಕ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.


ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು, ಇಲ್ಲಿ ಖಾಲಿ ಇರುವ 93 ಬ್ಯಾಂಕ್ ಸಹಾಯಕ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ : ಬ್ಯಾಂಕ್ ಸಹಾಯಕ : 93 ಹುದ್ದೆ

Tap to resize

Latest Videos

undefined

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-04-2024

ವಯಸ್ಸಿನ ಮಿತಿ (06-04-2024):

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

ಕರ್ನಾಟಕ ಲೆಕ್ಕ ಪರಿಶೋಧನೆ, ಲೆಕ್ಕ ಪತ್ರ ಇಲಾಖೆಯಲ್ಲಿ ನೇಮಕಾತಿ, 1 ಲಕ್ ...

ಅರ್ಜಿ ಶುಲ್ಕ:

ಸಾಮಾನ್ಯ , ಪ್ರವರ್ಗ-2 ಎ, 2 ಬಿ, 3 ಎ, 3 ಬಿ, ಅಭ್ಯರ್ಥಿಗಳಿಗೆ: ರೂ.1000

ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500

ವೇತನ ಶ್ರೇಣಿ: ರೂ. 28425 – ರೂ. 87125

ಶೈಕ್ಷಣಿಕ ವಿದ್ಯಾರ್ಹತೆ :

1. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಸಾಮಾನ್ಯ ವರ್ಗದವರು ಶೇಕಡಾ 55 ಅಂಕಗಳನ್ನು ಮತ್ತು ಎಸ್‌ ಸಿ/ಎಸ್‌ ಟಿ ವರ್ಗದವರು ಶೇಕಡಾ 50 ಅಂಕಗಳೊಂದಿಗೆ ಪದವಿಯನ್ನು ಪಡೆದಿರಬೇಕು.

2. ಅಭ್ಯರ್ಥಿಗಳು ಕನ್ನಡವನ್ನು ಓದುವ, ಬರೆಯುವ, ಮಾತನಾಡುವ ಮತ್ತು ಅರ್ಥ ಮಾಡಿಕೊಳ್ಳುವ ಜ್ಞಾನವನ್ನು ಹೊಂದಿರಬೇಕು.

3. ಕಂಪ್ಯೂಟರ್‌ ಅಪರೇಷನ್‌ ಮತ್ತು ಅಪ್ಲಿಕೇಷನ್ ನಲ್ಲಿ ‌ಉತ್ತಮ ಜ್ಞಾನವನ್ನು ಹೊಂದಿರಬೇಕು.

4. ಸಹಕಾರ ಕ್ಷೇತ್ರದಲ್ಲಿ ವಿದ್ಯಾರ್ಹತೆ ಮತ್ತು ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

ಆಯ್ಕೆ ವಿಧಾನ: 200 ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ 1:5 ಅನುಪಾತದಲ್ಲಿ ಹೆಚ್ಚು ಅಂಕ ಪಡೆದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅಂತಿಮವಾಗಿ ಶೇಕಡಾ 85 ಲಿಖಿತ ಪರೀಕ್ಷೆಯ ಅಂಕ ಮತ್ತು ಶೇಕಡಾ 15 ಸಂದರ್ಶನದ ಅಂಕವನ್ನು ಆಧರಿಸಿ ಅಂತಿಮ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: https://karnatakaapex.com/new/index.php/en/

click me!