ಬ್ಯಾಂಕ್‌ ಉದ್ಯೋಗ ಹುಡುಕುತ್ತಿದ್ದೀರಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ನೇಮಕಾತಿ

By Suvarna NewsFirst Published Feb 18, 2024, 10:57 AM IST
Highlights

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ನಲ್ಲಿ ಚೀಫ್ ಮ್ಯಾನೇಜರ್‌, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು. ಅರ್ಜಿ ಸಲ್ಲಿಸಲು ಫೆಬ್ರವರಿ 24 ಕೊನೆ ದಿನ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ನಲ್ಲಿ ಖಾಲಿ ಇರುವ 606 ಆಫೀಸರ್ (ಚೀಫ್ ಮ್ಯಾನೇಜ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 24 ಕೊನೆ ದಿನ.

ಒಟ್ಟು ಹುದ್ದೆ: 606

Latest Videos

1. ಮುಖ್ಯ ವ್ಯವಸ್ಥಾಪಕರು ಐಟಿ - 05 ಹುದ್ದೆ

2. ಹಿರಿಯ ವ್ಯವಸ್ಥಾಪಕರು – 42 ಹುದ್ದೆ

3. ಮ್ಯಾನೇಜರ್ – 451 ಹುದ್ದೆ

4. ಸಹಾಯಕ ವ್ಯವಸ್ಥಾಪಕ - 108 ಹುದ್ದೆ

ಪ್ರಮುಖ ದಿನಾಂಕಗಳು

ಶುಲ್ಕಗಳ ಪಾವತಿ ಮತ್ತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: 03-02-2024

ಶುಲ್ಕ ಪಾವತಿಸಲು ಮತ್ತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 23-02-2024

ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯೂಎಸ್‌ /‌ ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರು. 850 (ಜಿಎಸ್‌ಟಿ ಒಳಗೊಂಡಂತೆ)

ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ: ರು. 175 (ಜಿಎಸ್‌ಟಿ ಒಳಗೊಂಡಂತೆ)

ವಯಸ್ಸಿನ ಮಿತಿ

ಕನಿಷ್ಠ ವಯಸ್ಸು : 30 ವರ್ಷ

ಗರಿಷ್ಠ ವಯಸ್ಸು : 45 ವರ್ಷ

ಶೈಕ್ಷಣಿಕ ವಿದ್ಯಾರ್ಹತೆ

1. ಮುಖ್ಯ ವ್ಯವಸ್ಥಾಪಕರ - ಐಟಿ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್‌/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್, ಸಂವಹನ ಎಂಜಿನಿಯರಿಂಗ್ ನಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಡ್ಡಾಯವಾಗಿ ಶೇಕಡಾ 60 ಹಾಗೂ ಎಸ್ ಸಿ /ಎಸ್‌ ಟಿ/ ಒಬಿಸಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡ 55 ಅಂಕಗಳೊಂದಿಗೆ ಬಿ.ಎಸ್ಸಿ/ಬಿ.ಇ /ಬಿ ಟೆಕ್‌ ಪದವಿಯನ್ನು ಪಡೆದಿರಬೇಕು.

ಕೆಲಸದ ಅನುಭವ

1. ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ಅದರಲ್ಲಿ 6 ವರ್ಷಗಳ ಸೆಕ್ಯುರಿಟಿ ಆರ್ಕಿಟೆಕ್ಚರ್‌, ಬ್ಯಾಕಪ್ ಆರ್ಕಿಟೆಕ್ಚರ್‌, ಆರ್ಕಿಟೆಕ್ಚರ್, ಸ್ಟೋರೇಜ್ ಆರ್ಕಿಟೆಕ್ಟರ್‌, ಅಪ್ಲಿಕೇಶನ್ ಆರ್ಕಿಟೆಕ್ಚರ್‌, ಸೆಕ್ಯುರಿಟಿ ಆರ್ಕಿಟೆಕ್ಚರ್‌, ನೆಟ್‌ವರ್ಕ್ ಆರ್ಕಿಟೆಕ್ಚರ್‌, ಇನ್‌ಫ್ರಾಸ್ಟ್ರಕ್ಚರ್‌ ನಂತಹ ಡೊಮೇನ್‌ನಲ್ಲಿ ಕಡ್ಡಾಯ ಅನುಭವ ಹೊಂದಿರಬೇಕು.

2. ಹಿರಿಯ ವ್ಯವಸ್ಥಾಪಕ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್‌/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ನಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಡ್ಡಾಯವಾಗಿ ಶೇಕಡಾ 60 ಹಾಗೂ ಎಸ್ ಸಿ /ಎಸ್‌ ಟಿ/ ಒಬಿಸಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಬಿ.ಎಸ್ಸಿ/ಬಿ.ಇ /ಬಿ ಟೆಕ್‌ ಪದವಿಯನ್ನು ಪಡೆದಿರಬೇಕು.

ಕೆಲಸದ ಅನುಭವ

ಕನಿಷ್ಠ 7 ವರ್ಷಗಳ ಅನುಭವ ಹೊಂದಿರಬೇಕು. ಅದರಲ್ಲಿ 3 ವರ್ಷಗಳು ಮೈಕ್ರೋ ಸರ್ವೀಸ್‌ ಫ್ರೇಮ್‌ ವರ್ಕ್‌ ಕೋರ್ ಜಾವಾ, ಸ್ಪ್ರಿಂಗ್‌ಬೂಟ್ ಮತ್ತು ಕ್ವಾರ್ಕಸ್‌ ನಲ್ಲಿ ಅಪ್ಲಿಕೇಶನ್ ಮಾಡ್ಯೂಲ್‌ಗಳನ್ನುವಿನ್ಯಾಸಗೊಳಿಸುವುದು ಮತ್ತು ನಿರ್ಮಿಸುವ ಡೊಮೇನ್‌ನಲ್ಲಿ ಕಡ್ಡಾಯ ಅನುಭವ ಹೊಂದಿರಬೇಕು.

3.ಮ್ಯಾನೇಜರ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್‌/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಸಂವಹನ ಮತ್ತು ಎಂಜಿನಿಯರಿಂಗ್ ನಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಡ್ಡಾಯವಾಗಿ ಶೇಕಡಾ 60 ಹಾಗೂ ಎಸ್ ಸಿ /ಎಸ್‌ ಟಿ/ ಒಬಿಸಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಬಿ.ಎಸ್ಸಿ/ಬಿ.ಇ /ಬಿಟೆಕ್‌ ಪದವಿಯನ್ನು ಪಡೆದಿರಬೇಕು.

ಕೆಲಸದ ಅನುಭವ

ಕನಿಷ್ಠ 7 ವರ್ಷಗಳ ಅನುಭವ ಹೊಂದಿರಬೇಕು ಅದರಲ್ಲಿ 4 ವರ್ಷಗಳ ಎಪಿಐ ಗೇಟ್ವೆಗಳು ಜೊತೆಗೆ ಎಪಿಐ ಫೈರ್‌ವಾಲಿಂಗ್‌ ಡೊಮೇನ್‌ನಲ್ಲಿ ಕಡ್ಡಾಯ ಅನುಭವ ಹೊಂದಿರಬೇಕು.

4. ಸಹಾಯಕ ವ್ಯವಸ್ಥಾಪಕ ಹುದ್ದೆಗೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ / ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ನಲ್ಲಿ ಎಂಜಿನಿಯರಿಂಗ್‌/ ದೂರಸಂಪರ್ಕ / ಕಂಪ್ಯೂಟರ್ ವಿಜ್ಞಾನ / ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕಡ್ಡಾಯವಾಗಿ ಶೇಕಡಾ 60 ಹಾಗೂ ಎಸ್ ಸಿ /ಎಸ್‌ ಟಿ/ ಓಬಿಸಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಬಿ.ಎಸ್ಸಿ/ಬಿ.ಇ /ಬಿ ಟೆಕ್‌ ಪದವಿ ಪಡೆದಿರಬೇಕು.

ಪರೀಕ್ಷಣಾವಧಿ

ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿಗೆ ಸೇರಿದ ದಿನಾಂಕದಿಂದ 2 ವರ್ಷಗಳ ಕಾಲ ಪರೀಕ್ಷಣಾವಧಿಯಲ್ಲಿರುತ್ತಾರೆ.

ಆಯ್ಕೆ ಪ್ರಕ್ರಿಯೆ

1. ಆನ್‌ಲೈನ್ ಪರೀಕ್ಷೆ: ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್, ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳಿಗೆ 120 ನಿಮಿಷಗಳ ಅವಧಿಯಲ್ಲಿ 200 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

2. ಆನ್‌ಲೈನ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ, ಗುಂಪು ಚರ್ಚೆಗೆ ಕರೆಯಲಾಗುತ್ತದೆ. ನಂತರ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಪರೀಕ್ಷಾ ಕೇಂದ್ರ: ಕರ್ನಾಟಕದಲ್ಲಿ ಬೆಂಗಳೂರು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ https://www.unionbankofindia.co.in/english/home.aspx ವೀಕ್ಷಿಸಲು ಕೋರಲಾಗಿದೆ.

click me!