ಐಡಿಬಿಐ ಬ್ಯಾಂಕ್ ನಲ್ಲಿ ಖಾಲಿ ಇರುವ 500 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಅಪ್ಲಿಕೇಷನ್ ಸಲ್ಲಿಸಲು ಫ್ರಬ್ರವರಿ 26 ಕೊನೆಯ ದಿನವಾಗಿದೆ.
ಬೆಂಗಳೂರು ಮತ್ತು ನಿಟ್ಟೆ ಎಜುಕೇಶನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಗ್ರೇಟರ್ ನೋಯ್ಡಾ ವಿಭಾಗದಲ್ಲಿ ಐಡಿಬಿಐ ಬ್ಯಾಂಕ್ ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಫೈನಾನ್ಸ್ ತರಬೇತಿ ಒದಗಿಸುತ್ತದೆ. ಐಡಿಬಿಐ ಬ್ಯಾಂಕ್ ನಲ್ಲಿ ಖಾಲಿ ಇರುವ 500 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಹುದ್ದೆಯಲ್ಲಿ ಪಶ್ಚಿಮ ಮತ್ತು ದಕ್ಷಿಣ ವಲಯಗಳ ಅಭ್ಯರ್ಥಿಗಳನ್ನು ಮಣಿಪಾಲ ವಿಭಾಗಕ್ಕೆ ಹಾಗೂ ಬೆಂಗಳೂರು ಮತ್ತು ಪೂರ್ವ ಮತ್ತು ಉತ್ತರ ವಲಯಗಳ ಅಭ್ಯರ್ಥಿಗಳನ್ನು ನಿಟ್ಟೆ ಗ್ರೇಟರ್ ವಿಭಾಗಕ್ಕೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅಪ್ಲಿಕೇಷನ್ ಸಲ್ಲಿಸಲು ಫ್ರಬ್ರವರಿ 26 ಕೊನೆಯ ದಿನವಾಗಿದೆ. ಐಡಿಬಿಐ ಬ್ಯಾಂಕ್ ಮಣಿಪಾಲ್ ಗ್ಲೋಬಲ್ ಎಜುಕೇಶನ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಹೊಂದಿದೆ.
ಹುದ್ದೆಯ ವಿವರ
undefined
ಜೂನಿಯರ್ ಅಸಿಸ್ಟೆಂಟ್ ಗ್ರೇಡ್ 500 ಹುದ್ದೆ
ಐಡಿಬಿಐ ಬ್ಯಾಂಕ್ ವಲಯಗಳ ವಿವರ
1. ದಕ್ಷಿಣ ಮತ್ತು ಪಶ್ಚಿಮ ವಲಯಗಳು: ಅಹಮದಾಬಾದ್, ಭೋಪಾಲ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪುಣೆ
2. ಉತ್ತರ ಮತ್ತು ಪೂರ್ವ ವಲಯಗಳು: ಭುವನೇಶ್ವರ, ಪಾಟ್ನಾ, ಚಂಡೀಗಢ, ದೆಹಲಿ, ಕೋಲ್ಕತ್ತಾ, ಲಕ್ನೋ
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಷನ್ ಪ್ರಾರಂಭ ದಿನಾಂಕ: 12-02-2024
ಆನ್‌ಲೈನ್ ಅಪ್ಲಿಕೇಷನ್ ಕೊನೆಯ ದಿನಾಂಕ: 26-02-2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 26-02-2024
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ:17-03-2024
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರು. 1000
ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರು. 200
ವಯಸ್ಸಿನ ಮಿತಿ (31-01-2024):
ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು
ಶೈಕ್ಷಣಿಕ ಅರ್ಹತೆ:
1.ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಿಂದ ಪದವಿಯನ್ನು ಪಡೆದಿರಬೇಕು. ಆದರೆ, ಕೇವಲ ಡಿಪ್ಲೊಮಾ ಕೋರ್ಸ್‌ನಲ್ಲಿ
ಉತ್ತೀರ್ಣರಾಗಿದ್ದರೆ ಅದನ್ನುಅರ್ಹತೆಗೆ ಪರಿಗಣಿಸಲಾಗುವುದಿಲ್ಲ.
2. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು
3. ಪ್ರಾದೇಶಿಕ ಭಾಷೆಯಲ್ಲಿ ಪ್ರಾವೀಣ್ಯತೆಗೆ ಆದ್ಯತೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
1.ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನುಒಳಗೊಂಡಿರುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ಲಾಜಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಮತ್ತು ವ್ಯಾಖ್ಯಾನ,
ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ಆಪ್ಟಿಟ್ಯೂಡ್, ಸಾಮಾನ್ಯ ಜ್ಞಾನ / ಆರ್ಥಿಕತೆ/ ಬ್ಯಾಂಕಿಂಗ್ ವಿಷಯಕ್ಕೆಸಂಬಂಧಿಸಿದಂತೆ 200 ಪ್ರಶ್ನೆಗಳ ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಯಾಗಿರುತ್ತದೆ. ಈ ಪರೀಕ್ಷೆಯು 2 ಗಂಟೆಗಳ ಅವಧಿಯಲ್ಲಿ ನಡೆಸಲಾಗುತ್ತದೆ.
ಸೂಚನೆ: ಪತ್ರಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
2.ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನವು 100 ಅಂಕಗಳನ್ನು ಒಳಗೊಂಡಿರುತ್ತದೆ. ಸಂದರ್ಶನದಲ್ಲಿ ಸಾಮಾನ್ಯ ವರ್ಗದವರು ಕನಿಷ್ಠ ಶೇಕಡಾ 50ರಷ್ಟು ಹಾಗೂ ಎಸ್ ಸಿ, ಎಸ್ ಟಿ, ಒಬಿಸಿ, ಪಿಡಬ್ಲ್ಯೂಡಿ ವರ್ಗದವರು ಶೇಕಡಾ 45ರಷ್ಟು ಅರ್ಹತಾ ಅಂಕಗಳನ್ನು ಗಳಿಸಬೇಕು.
3.ಆನ್‌ಲೈನ್ ಪರೀಕ್ಷೆಯ 90ರಷ್ಟು ಹಾಗೂ ಸಂದರ್ಶನದ 10 ರಷ್ಟು ಅಂಕಗಳನ್ನು ಅಂತಿಮ ಆಯ್ಕೆಗಾಗಿ ಪರಿಗಣಿಸಲಾಗುತ್ತದೆ.
ವೇತನ ವಿವರ: ರು. 6.14 -6.50 ಲಕ್ಷ ( ವಾರ್ಷಿಕ)
ಹೆಚ್ಚಿನ ಮಾಹಿತಿಗಾಗಿ:https://www.idbibank.in/idbi-bankcareers-current-openings.aspx