ಐಡಿಬಿಐ ಬ್ಯಾಂಕ್‌ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!

Published : Apr 07, 2025, 08:34 PM ISTUpdated : Apr 07, 2025, 08:49 PM IST
ಐಡಿಬಿಐ ಬ್ಯಾಂಕ್‌ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!

ಸಾರಾಂಶ

ಐಡಿಬಿಐ ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 119 ಹುದ್ದೆಗಳಿದ್ದು, ಪದವಿ/ಸ್ನಾತಕೋತ್ತರ ಪದವಿ/BE/B.Tech ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಏಪ್ರಿಲ್ 20, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕನಿಷ್ಠ 25 ರಿಂದ ಗರಿಷ್ಠ 45 ವರ್ಷ ವಯೋಮಿತಿಯಿದ್ದು, ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ಇದೆ. ಆಯ್ಕೆಯು ಸ್ಕ್ರೀನಿಂಗ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ತಪಾಸಣೆ ಮಾಡಿ.

ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI Bank) ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹಾಗೂ ನೇಮಕಾತಿಗೆ ಬೇಕಾದ ಅರ್ಹತೆ ಹೊಂದಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. 

ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್
ಒಟ್ಟು ಹುದ್ದೆಗಳು: 119

ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, BE/ B.Tech, CA/ ICWA, BCA, B.Sc, LLB, MCA, M.Sc, ME/ M.Tech, MBA, ಪೂರ್ಣಗೊಳಿಸಿರಬೇಕು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಭರ್ಜರಿ ಅವಕಾಶ, ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ನೇಮಕಾತಿ

ವಯೋಮಿತಿ: ಅಭ್ಯರ್ಥಿಯು ಏಪ್ರಿಲ್ 01, 2025 ರಂತೆ ಕನಿಷ್ಠ 25 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ: 
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ,ಎಸ್‌ಟಿ, ಮಾಜಿ ಸೇವಾ ಅಭ್ಯರ್ಥಿಗಳಿಗೆ: 5 ವರ್ಷ

ಅರ್ಜಿಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: 1050 ರು.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 250 ರು.
ಪಾವತಿ ವಿಧಾನ: ಆನ್‌ಲೈನ್ ಮೂಲಕ\B

ವೇತನ ಶ್ರೇಣಿ:
ಮಾಸಿಕ 1,24,000 ದಿಂದ 1,97,000 ವೇತನವನ್ನು ನಿಗದಿಪಡಿಸಲಾಗಿದೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸೆಯೇ, BOI ನಲ್ಲಿ 400 ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ!

ಆಯ್ಕೆ ವಿಧಾನ:
ಪೂರ್ವಭಾವಿ ಸ್ಕ್ರೀನಿಂಗ್ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IDBI ಬ್ಯಾಂಕ್ ನೇಮಕಾತಿ ಅಧಿಕೃತ ವೆಬ್‌ಸೈಟ್ https://www.idbibank.in ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಏಪ್ರಿಲ್‌ 07, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್‌ 20, 2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಏಪ್ರಿಲ್ 20, 2025

ಹೈ ಸ್ಪೀಡ್ ರೈಲು ಕಾರ್ಪೊರೇಷನ್‌ನಲ್ಲಿ ಭರ್ಜರಿ ಉದ್ಯೋಗವಕಾಶ, ಆಯ್ಕೆಯಾದವರಿಗೆ 2.40 ಲಕ್ಷ ವೇತನ! 

BHEL ನೇಮಕಾತಿ 2025: 33 ಇಂಜಿನಿಯರ್, ಸೂಪರ್‌ವೈಸರ್ ಹುದ್ದೆಗಳು, ಪರೀಕ್ಷೆ ಇಲ್ಲ!

PREV
Read more Articles on
click me!

Recommended Stories

Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ
Bank of Baroda ಗ್ರಾಹಕರಿಗೆ ಬಿಗ್ ಶಾಕ್.. ಟೆನ್ಷನ್ ಬೇಡ, ಈಗಲೇ ನೀವು ಈ ಕೆಲಸ ಮಾಡಲೇಬೇಕು!