Karnataka Gramin Bank Jobs IBPS 28 ಗ್ರಾಮೀಣ ಬ್ಯಾಂಕ್‌ಗಳಲ್ಲಿ 13,217 ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಕರ್ನಾಟಕದಲ್ಲಿ 1,425 ಹುದ್ದೆಗಳಿದ್ದು, ಪದವೀಧರರಿಗೆ ಉತ್ತಮ ಅವಕಾಶ.
ದೇಶದಾದ್ಯಂತ ಒಟ್ಟು 28 ಗ್ರಾಮೀಣ ಬ್ಯಾಂಕುಗಳಲ್ಲಿ (Regional Rural Banks - RRBs) 13,217 ಹುದ್ದೆಗಳ ನೇಮಕಾತಿಗಾಗಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನಡುವೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿ ರಾಜ್ಯದಾದ್ಯಂತ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ, ಪದವೀಧರರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿ ದೇಶದಾದ್ಯಂತ 13,217 ಹುದ್ದೆಗಳ ಭರ್ಜರಿ ನೇಮಕಾತಿ
ದೇಶದಾದ್ಯಂತ ಒಟ್ಟು 28 ಗ್ರಾಮೀಣ ಬ್ಯಾಂಕುಗಳಲ್ಲಿ (Regional Rural Banks - RRBs) 13,217 ಹುದ್ದೆಗಳ ನೇಮಕಾತಿಗಾಗಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನಡುವೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿ ರಾಜ್ಯದಾದ್ಯಂತ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ, ಪದವೀಧರರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ.
ರಾಜ್ಯದಲ್ಲಿ 1,425 ಹುದ್ದೆಗಳ ನೇಮಕಾತಿ
ದೇಶದ ಮಟ್ಟದಲ್ಲಿ 13,217 ಹುದ್ದೆಗಳಿದ್ದು, ಅದರಲ್ಲಿ 1,425 ಹುದ್ದೆಗಳು ಕರ್ನಾಟಕಕ್ಕೆ ಮೀಸಲಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಂಡು, ಈಗ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಮುಖ್ಯ ಕಚೇರಿ ಬಳ್ಳಾರಿಯಲ್ಲಿ ಇದೆ.
ರಾಜ್ಯದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ:
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್): 800 ಹುದ್ದೆಗಳು
ಆಫೀಸರ್ ಸ್ಕೆಲ್ – 1: 500 ಹುದ್ದೆಗಳು
ಆಫೀಸರ್ ಸ್ಕೆಲ್ – 2: 75 ಹುದ್ದೆಗಳು
ಆಫೀಸರ್ ಸ್ಕೆಲ್ – 3: 10 ಹುದ್ದೆಗಳು
ಆಫೀಸರ್ (IT): 01 ಹುದ್ದೆ
ಆಫೀಸರ್ (ಕಾನೂನು): 05 ಹುದ್ದೆಗಳು
ಆಫೀಸರ್ (ಕೃಷಿ): 34 ಹುದ್ದೆಗಳು
ಒಟ್ಟು ಹುದ್ದೆಗಳು: 1,425
ವಯೋಮಿತಿ ವಿವರ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್): 18–28 ವರ್ಷ (2-9-1997 ರಿಂದ 2-9-2007ರೊಳಗೆ ಜನಿಸಿದವರು ಅರ್ಹ).
ಅಸಿಸ್ಟೆಂಟ್ ಮ್ಯಾನೇಜರ್ (ಸ್ಕೇಲ್-1): 18–30 ವರ್ಷ (2-9-1995 ರಿಂದ 2-9-2007ರೊಳಗೆ ಜನಿಸಿದವರು ಅರ್ಹ).
ಆಫೀಸರ್ ಸ್ಕೆಲ್-2: 21–32 ವರ್ಷ.
ಆಫೀಸರ್ ಸ್ಕೆಲ್-3 (ಸೀನಿಯರ್ ಮ್ಯಾನೇಜರ್): 21–40 ವರ್ಷ.
ಮೀಸಲಾತಿ ಪ್ರಕಾರ 3 ರಿಂದ 10 ವರ್ಷಗಳ ವಯೋಮಿತಿಯಲ್ಲಿ ವಿನಾಯಿತಿ ಅನ್ವಯವಾಗುತ್ತದೆ.
ವಿದ್ಯಾರ್ಹತೆ ಮತ್ತು ಅನುಭವ
ಕನಿಷ್ಠ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಸ್ಕೆಲ್-2 ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅಗತ್ಯ.
ಕೆಲವು ಹುದ್ದೆಗಳಿಗೆ ಅನುಭವ ಕಡ್ಡಾಯ.
ರಾಜ್ಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯನ್ನು (ಕನ್ನಡ) ಬಲ್ಲವರಾಗಿರಬೇಕು.
ಪರೀಕ್ಷೆಯ ಮಾದರಿ
ಆಫೀಸ್ ಅಸಿಸ್ಟೆಂಟ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಇದೆ.
ಇತರ ರಾಜ್ಯಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕು.
ಆಫೀಸರ್ ಸ್ಕೆಲ್-1, 2 ಹಾಗೂ 3 ಹುದ್ದೆಗಳಿಗೆ ಎರಡು ಹಂತದ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದೆ.
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಒಂದೇ ಹಂತದ ಆನ್‌ಲೈನ್ ಪರೀಕ್ಷೆ ಇರುತ್ತದೆ.
ಆಫೀಸರ್ ಸ್ಕೆಲ್-1, 2 ಮತ್ತು 3 ಹುದ್ದೆಗಳಿಗೆ 100 ಅಂಕಗಳ ಸಂದರ್ಶನ ನಡೆಯಲಿದೆ.
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ಬೆಂಗಳೂರು
ಬೆಳಗಾವಿ
ದಾವಣಗೆರೆ
ಧಾರವಾಡ
ಹುಬ್ಬಳ್ಳಿ
ಕಲಬುರಗಿ
ಮಂಗಳೂರು
ಮೈಸೂರು
ಶಿವಮೊಗ್ಗ
ಉಡುಪಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21 ಸೆಪ್ಟೆಂಬರ್ 2025
ಶುಲ್ಕ ಪಾವತಿ ಕೊನೆಯ ದಿನ: 21 ಸೆಪ್ಟೆಂಬರ್ 2025
ಪರೀಕ್ಷಾ ಪೂರ್ವ ತರಬೇತಿ: ನವೆಂಬರ್ 2025
ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ: ನವೆಂಬರ್/ಡಿಸೆಂಬರ್ 2025
ಪೂರ್ವಭಾವಿ ಪರೀಕ್ಷೆ ಸಂಭಾವ್ಯ ಅವಧಿ: ನವೆಂಬರ್/ಡಿಸೆಂಬರ್ 2025
ಆನ್‌ಲೈನ್ ಪರೀಕ್ಷೆ ಫಲಿತಾಂಶ: ಡಿಸೆಂಬರ್ 2025 – ಜನವರಿ 2026
ಮುಖ್ಯ ಪರೀಕ್ಷೆ ಸಂಭಾವ್ಯ ಅವಧಿ: ಡಿಸೆಂಬರ್ 2025 – ಜನವರಿ 2026
ಮುಖ್ಯ ಪರೀಕ್ಷೆ ಫಲಿತಾಂಶ: ಜನವರಿ 2026
ಸಂದರ್ಶನ ಪ್ರವೇಶ ಪತ್ರ: ಜನವರಿ 2026
ತಾತ್ಕಾಲಿಕ ನೇಮಕಾತಿ ಪತ್ರ ವಿತರಣೆ: ಫೆಬ್ರವರಿ/ಮಾರ್ಚ್ 2026
ಈ ನೇಮಕಾತಿ ಪ್ರಕ್ರಿಯೆ ರಾಜ್ಯದ ಪದವೀಧರ ಯುವಕರಿಗೆ ದೊಡ್ಡ ಉದ್ಯೋಗಾವಕಾಶ. ವಿವಿಧ ಶಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿದ್ದರಿಂದ, ಇದು ಸರ್ಕಾರಿ ಬ್ಯಾಂಕ್ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶವಾಗಿದೆ. ಅರ್ಜಿದಾರರು ನಿರ್ದಿಷ್ಟ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳೊಂದಿಗೆ ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ.