
ರಾಜ್ಯದ ಪ್ರಮುಖ 11 ಬ್ಯಾಂಕುಗಳಲ್ಲಿ ಒಟ್ಟು 1,170 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ, ಹಾಗೂ ದೇಶದಾದ್ಯಂತ ಒಟ್ಟು 10,277 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಆಯೋಗ (IBPS) ತನ್ನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (CRP) ಅಧಿಸೂಚನೆಯನ್ನು ಪ್ರಕಟಿಸಿದೆ.
ಕರ್ನಾಟಕದಲ್ಲಿ, ಕೆನರಾ ಬ್ಯಾಂಕ್ ಅತಿ ಹೆಚ್ಚು 675 ಹುದ್ದೆಗಳನ್ನು ಹೊಂದಿದ್ದು, ಬ್ಯಾಂಕ್ ಆಫ್ ಬರೋಡಾ 253 ಹುದ್ದೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ರಾಜ್ಯಕ್ಕೆ ಕೇವಲ 457 ಹುದ್ದೆಗಳಿದ್ದರೆ, ಈ ಬಾರಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕೆನರಾ ಬ್ಯಾಂಕ್: 675
ಬ್ಯಾಂಕ್ ಆಫ್ ಬರೋಡಾ: 253
ಬ್ಯಾಂಕ್ ಆಫ್ ಇಂಡಿಯಾ: 45
ಬ್ಯಾಂಕ್ ಆಫ್ ಮಹಾರಾಷ್ಟ್ರ: 20
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 47
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 44
ಪಂಜಾಬ್ ನ್ಯಾಷನಲ್ ಬ್ಯಾಂಕ್: 06
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: 30
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 50
ಒಟ್ಟು: 1,170 ಹುದ್ದೆಗಳು
ಕರ್ನಾಟಕದ ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ. ಅಭ್ಯರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಬಹುದು. ಇತರ ರಾಜ್ಯದ ಅಭ್ಯರ್ಥಿಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ.
ಮಾಸಿಕ ಸಂಬಳ ₹24,050 – ₹54,480. ಜೊತೆಗೆ ಬ್ಯಾಂಕ್ ನಿಯಮಾನುಸಾರ ಇತರ ಭತ್ಯೆಗಳು ದೊರೆಯುತ್ತವೆ.
ತಪ್ಪು ಉತ್ತರಕ್ಕೆ 0.25 ಅಂಕ ಕಡಿತ. ಮೆರಿಟ್ ಪಟ್ಟಿ ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮಾತ್ರ ತಯಾರಿಸಲಾಗುತ್ತದೆ.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
ಅಭ್ಯರ್ಥಿಗಳಿಗೆ ಉತ್ತಮ ಕ್ರೆಡಿಟ್ ಇತಿಹಾಸ ಕಡ್ಡಾಯ. ಸಿಬಿಲ್ ಸ್ಕೋರ್‌ನಲ್ಲಿ ವ್ಯತ್ಯಾಸ ಇದ್ದರೆ ಮರುಪಾವತಿ ಪ್ರಮಾಣಪತ್ರ ನೀಡಬೇಕು. ಇಲ್ಲದಿದ್ದರೆ ನೇಮಕಾತಿ ರದ್ದುಪಡಿಸಲಾಗುತ್ತದೆ.