11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ

By Suvarna NewsFirst Published Oct 15, 2021, 2:06 PM IST
Highlights

ರಾಜ್ಯದ ಕೆನರಾ ಬ್ಯಾಂಕ್ (Canara bank) ಸೇರಿದಂತೆ ದೇಶದ 11 ಬ್ಯಾಂಕುಗಳಲ್ಲಿ ಖಾಲಿ ಇರುವ ಒಟ್ಟು 7855 ಹುದ್ದೆಗಳಿಗೆ IBPS ನೇಮಕಾತಿ ಮಾಡಿಕೊಳ್ಳುತ್ತಿದೆ. ಇಂಗ್ಲಿಷ್, ಹಿಂದಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ನೌಕರಿಗಾಗಿಯೇ ಕಾಯುತ್ತಿರೋರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳು, ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿವೆ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection – IBPS) ಈ ಬ್ಯಾಂಕುಗಳ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಡಲಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಭಾರತದಾದ್ಯಂತ ಬರೋಬ್ಬರೀ 7855 ಗುಮಾಸ್ತ (Clerk) ಹುದ್ದೆಗಳ ನೇಮಕಾತಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅರ್ಜಿಗಳನ್ನು ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು IBPSನ ಅಧಿಕೃತ ವೆಬ್ ಸೈಟ್ ibps.in ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು,  ಅಕ್ಟೋಬರ್ 27 ರವರೆಗೆ ಕಾಲಾವಕಾಶವಿದೆ. 

ದಕ್ಷಿಣ ಮಧ್ಯೆ ರೈಲ್ವೆಯಲ್ಲಿ 4,103 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ 

ಈ ನೇಮಕಾತಿಯಲ್ಲಿ ಒಟ್ಟು 11 ಬ್ಯಾಂಕ್‌ಗಳು ಭಾಗವಹಿಸಲಿವೆ. ಬ್ಯಾಂಕ್ ಆಫ್ ಬರೋಡಾ (Bank of Baroda), ಬ್ಯಾಂಕ್ ಆಫ್ ಇಂಡಿಯಾ (Bank of India), ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra), ಕೆನರಾ ಬ್ಯಾಂಕ್ (Canara Bank), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India), ಇಂಡಿಯನ್ ಬ್ಯಾಂಕ್ ( Indian Bank), ಇಂಡಿಯನ್ ಓವರ್ ಸೀಸ್ ಬ್ಯಾಂಕ್ (Indian Overseas Bank), ಪಂಜಾಬ್  ನ್ಯಾಷನಲ್ ಬ್ಯಾಂಕ್ (Punjab National Bank), ಪಂಕಾಬ್ ಆ್ಯಂಡ್  ಸಿಂಧ್ ಬ್ಯಾಂಕ್ (Punjab and Sindh Bank), ಯುಸಿಒ ಬ್ಯಾಂಕ್ (UCO Bank), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಪಾಲ್ಗೊಳ್ಳಲಿವೆ.

ಆಯ್ಕೆಯಾದ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಮೂಲ ಹಾಗೂ ತಮ್ಮ ಗುರುತನ್ನು ಬೆಂಬಲಿಸುವ ಫೋಟೊಕಾಪಿಯನ್ನು ಒದಗಿಸಬೇಕಾಗುತ್ತದೆ. ಇನ್ನು ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು. ಆದಾಗ್ಯೂ, ಗರಿಷ್ಠ ವಯಸ್ಸು 28 ವರ್ಷಗಳ ಒಳಗಿರಬೇಕು.

ಅಭ್ಯರ್ಥಿಗಳು ಯಾವುದೇ  ವಿಭಾಗದಲ್ಲಿ  ಪದವೀಧರರಾಗಿರಬೇಕು. ಕಂಪ್ಯೂಟರ್ ನಾಲೆಡ್ಜ್ ಇರಬೇಕು. ಕಂಪ್ಯೂಟರ್ ಅನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿರಬೇಕು. ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಬಯಸುವ ರಾಜ್ಯ/ಯುಟಿಯ ಅಧಿಕೃತ ಭಾಷೆಯಲ್ಲಿನ ಪ್ರಾವೀಣ್ಯತೆಯೇ ಅವರಿಗೆ ಬೋನಸ್ ಆಗಲಿದೆ.

ಆಯ್ಕೆಯಾದ ಅಭ್ಯರ್ಥಿಯು ಛಾಯಾಚಿತ್ರದ ಸ್ಕ್ಯಾನ್ (Scan), ಸಹಿ ಸ್ಕ್ಯಾನ್, ಎಡ ಹೆಬ್ಬೆರಳು ಇಂಪ್ರೆಷನ್ ಸ್ಕ್ಯಾನ್, ಕೈಬರಹದ ಘೋಷಣೆಯ ಸ್ಕ್ಯಾನ್ ಹಾಗೂ ಸಹಿ ಮಾಡಿರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ 

ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಯು ನಿಗದಿತ ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 850 ರೂ. ಶುಲ್ಕವಿದ್ದರೆ, ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 175 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.
 

ಈ ಹುದ್ದೆಗಳಿಗೆ ಆಯ್ಕೆಯಾಗಲು ಅಭ್ಯರ್ಥಿಯು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪರೀಕ್ಷೆಯ ದಿನಾಂಕಗಳನ್ನು IBPS ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಪ್ರಿಲಿಮ್ಸ್ (Prelims) ಪರೀಕ್ಷೆ ಡಿಸೆಂಬರ್‌ (December)ನಲ್ಲಿ ನಡೆಯುವುದು ಖಚಿತ ಎನ್ನಲಾಗ್ತಿದೆ. ಹಾಗೇ ಮುಖ್ಯ ಪರೀಕ್ಷೆ (Main Examination) ಜನವರಿಯಲ್ಲಿ ನಡೆಯಲಿದೆ. ಪ್ರಿಲಿಮ್ಸ್ ಹಾಗೂ ಮುಖ್ಯ ಎರಡೂ ಪರೀಕ್ಷೆಗಳು ಇಂಗ್ಲಿಷ್ (English) ಮತ್ತು ಹಿಂದಿ (Hindi) ಸೇರಿದಂತೆ 13 ವಿವಿಧ ಭಾಷೆಗಳಲ್ಲಿ ನಡೆಸಲಾಗುವುದು. 

ಇತ್ತೀಚೆಗಷ್ಟೇ ಐಬಿಪಿಎಸ್ (IBPS) ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಸೂಚನೆ ನೀಡಿತ್ತು. IBPS ಕ್ಲರ್ಕ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಮೂಲಕ, ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. 

ನೈರುತ್ಯ ರೈಲ್ವೆಯಲ್ಲಿ 904 ಅಪ್ರೆಂಟಿಸ್‌‌ಗೆ ಅರ್ಜಿ ಆಹ್ವಾನ : ರಾಜ್ಯದಲ್ಲೇ ಕೆಲಸ ಮಾಡುವ ಅವಕಾಶ 

ಅದರಂತೆ ಇದೀಗ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್), ಒಟ್ಟು 7855 ಗುಮಾಸ್ತ ಹುದ್ದೆಗಳ ನೇಮಕಾತಿ ಮಾಡಿಕೊಳ್ತಿದೆ.. ಹಾಗಿದ್ಮೇಲೆ ಮತ್ಯಾಕೆ ತಡ..ಪದವೀಧರರಾಗಿದ್ರೆ ಕೂಡಲೇ ಅರ್ಜಿ ಹಾಕಿ, ಬ್ಯಾಂಕ್ ನೌಕರಿ ಪಡೆಯಿರಿ.

click me!