ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ

Suvarna News   | Asianet News
Published : Oct 03, 2021, 12:50 PM ISTUpdated : Oct 03, 2021, 02:10 PM IST
ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ

ಸಾರಾಂಶ

ಕನ್ನಡಿಗರ ಬಹು ದಿನಗಳ ಬೇಡಿಕೆ ಈಡೇರುವ ಸಮಯ ಎದುರಾಗಿದೆ. ಕೇಂದ್ರ ವಿತ್ತ ಸಚಿವಾಲಯ(Financial Affairs ministry)ವು ಕನ್ನಡ(Kannada)ವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸಾರ್ವಜನಿಕ ಬ್ಯಾಂಕ್‌ಗಳಿಗೆ ನೇಮಕಾತಿಯನ್ನು ನಡೆಸಲು ಶಿಫಾರಸು ಮಾಡಿದೆ. ಅಂದರೆ, ಕನ್ನಡಿಗ ಅಭ್ಯರ್ಥಿಗಳು ಇನ್ನು ಮುಂದೆ ಕನ್ನಡದಲ್ಲೇ  ಬ್ಯಾಂಕಿಂಗ್ ಪರೀಕ್ಷೆಯಬಹುದಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅನುಮತಿ ನೀಡಬೇಕೆಂದು ಬಹಳ ದಿನಗಳಿಂದಲೂ ಬೇಡಿಕೆ ಇತ್ತು.

ಬ್ಯಾಂಕ್(Bank) ಕ್ಲೆರಿಕಲ್(Clerical) ಕೇಡರ್(Cadre) ಪರೀಕ್ಷೆಗಳನ್ನು ಇನ್ಮುಂದೆ ನಿಮ್ಮ ಭಾಷೆಯಲ್ಲೇ ಎದುರಿಸಬಹುದು. ಕೇಂದ್ರದ ಹಣಕಾಸು ಸಚಿವಾಲಯವು, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection-IBPS ) ನಡೆಸುವ ಕ್ಲೆರಿಕಲ್ ನೇಮಕಾತಿ ಪರೀಕ್ಷೆಗೆ ಸದ್ಯ ತಾತ್ಕಾಲಿಕ ತಡೆಯೊಡ್ಡಿತ್ತು.

ಹಣಕಾಸು ಸಚಿವಾಲಯ(Financial Affairs ministry)ವು 12 ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕ್ಲೆರಿಕಲ್ ನೇಮಕಾತಿಗೆ ಶಿಫಾರಸು ಮಾಡಿದ್ದು, ಇನ್ಮುಂದೆ ಹುದ್ದೆಗಳನ್ನು ಕನ್ನಡ(Kannada)ವೂ ಸೇರಿದಂತೆ 13 ಪ್ರಾದೇಶಿಕ ಭಾಷೆ(Regional Languages), ಇಂಗ್ಲಿಷ್(English) ಮತ್ತು ಹಿಂದಿ(Hindi)ಯಲ್ಲಿ ನಡೆಸಲು ಸೂಚಿಸಿದೆ. ಅದರರ್ಥ, ಇನ್ನು ಮುಂದೆ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳ ಕನ್ನಡದಲ್ಲಿ ಪರೀಕ್ಷೆಯನ್ನು ಬರೆದು ಉತ್ತೀರ್ಣವಾಗಬಹುದು. ಈ ಹಿಂದೆ, ಗ್ರಾಮೀಣ ಬ್ಯಾಂಕುಗಳ ಪರೀಕ್ಷೆಯನ್ನು ಮಾತ್ರ ಕನ್ನಡದಲ್ಲಿ ಬರೆಯಲು ಅವಕಾಶವಿತ್ತು. ಪ್ರಾದೇಶಿಕ  ಭಾಷೆಗಳೂ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ(Karnataka)ವೂ ಸೇರಿದಂತೆ ಅನೇಕ ರಾಜ್ಯಗಳು ಒತ್ತಾಯಿಸಿದ್ದವು.

ವಿಶೇಷವಾಗಿ ದಕ್ಷಿಣ ರಾಜ್ಯ(South States)ಗಳಿಂದ ಬೇಡಿಕೆ ಬಂದಿದ್ರಿಂದ, ಬ್ಯಾಂಕ್ ಕ್ಲೆರಿಕಲ್ ಕೇಡರ್ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದೇಶದ ಸಂವಿಧಾನವು 22 ಭಾಷೆಗಳನ್ನು ಗುರುತಿಸಿದ್ದು, ಅವುಗಳ ಪೈಕಿ ಕನ್ನಡವೂ ಸೇರಿದಂತೆ 13 ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ.

ಎಸ್‌ಬಿಐ ಎಸ್‌ಸಿಒ ನೇಮಕಾತಿ: 606 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕನ್ನಡವೂ ಸೇರಿದಂತ ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕ್ಲೆರಿಕಲ್ ಕೇಡರ್‌ಗಳಿಗೆ ಪರೀಕ್ಷೆ(Examination)ಗಳನ್ನು ನಡೆಸುವ ವಿಚಾರವನ್ನು ಪರಿಶೀಲಿಸಲು ಸಚಿವಾಲಯವು ಸಮಿತಿಯನ್ನು ರಚಿಸಿದೆ. ಆ ಸಮಿತಿಯ ಶಿಫಾರಸುಗಳು ಲಭ್ಯವಾಗುವವರೆಗೆ ಪರೀಕ್ಷೆಯನ್ನು ತಡೆಹಿಡಿಯಲಾಯಿತು. ಇದೀಗ ಸಮಿತಿಯು ಶಿಫಾರಸುಗಳನ್ನು ನೀಡಿದ್ದು, ಪ್ರಾದೇಶಿಕ ಭಾಷೆಯಲ್ಲೂ ಪರೀಕ್ಷೆಗಳನ್ನು ನಡೆಸಲ ಸರಕಾರ ಮುಂದಾಗಿದೆ. 

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳಿಗಾಗಿ ಏಕರೂಪದ ಅವಕಾಶವನ್ನು ಒದಗಿಸುವ ಗುರಿಯೊಂದಿಗೆ ಸಮಿತಿಯು ಕೆಲಸ ಮಾಡುತ್ತಿದೆ.  ಸ್ಥಳೀಯ ಮತ್ತು ಪ್ರಾದೇಶಿಕ ಭಾಷೆಗಳ ಮೂಲಕ ಗ್ರಾಹಕರೊಂದಿಗೆ ಮೇಲುಗೈ ಸಾಧೊಸಲು ಪ್ರಾದೇಶಿಕ ಭಾಷೆ ಸಹಕಾರಿಯಾಗಲಿದೆ. ಪ್ರಾದೇಶಿಕ ಭಾಷೆಗಳಲ್ಲಿ ಕ್ಲೆರಿಕಲ್ ಪರೀಕ್ಷೆಗಳನ್ನು ನಡೆಸುವ ಈ ನಿರ್ಧಾರವು ಮುಂಬರುವ ಎಸ್‌ಬಿಐ(SBI) ಖಾಲಿ ಹುದ್ದೆ ಗಳಿಗೂ ಅನ್ವಯಿಸಲಿದೆ.

ಹಣಕಾಸು ಸಚಿವಾಲಯ ಜುಲೈನಲ್ಲಿ ಪಿಎಸ್‌ಬಿಗಳಲ್ಲಿ ಕ್ಲೆರಿಕಲ್ ಕೇಡರ್ ಪರೀಕ್ಷೆಯನ್ನು ತಡೆಹಿಡಿಯುವಂತೆ ಐಬಿಪಿಎಸ್‌(IBPS)ಗೆ ನಿರ್ದೇಶಿಸಿದೆ. ಪರೀಕ್ಷೆಗಳ ಜೊತೆಗೆ, ನೇಮಕಾತಿಗಳ ಜಾಹೀರಾತುಗಳು ಪ್ರಾದೇಶಿಕ ಭಾಷೆಯಲ್ಲಿಯೂ ಲಭ್ಯವಿರುತ್ತವೆ. ಇದಲ್ಲದೆ, ಪ್ರಾದೇಶಿಕ ಭಾಷೆಯಲ್ಲಿ ಮಾತನಾಡುವ ಗ್ರಾಹಕರೊಂದಿಗೆ ಬ್ಯಾಂಕುಗಳು ಮೇಲುಗೈ ಸಾಧಿಸಲು ಮತ್ತು ಉತ್ತಮ ಸಂವಹನವನ್ನು ಹೊಂದಲು ಪ್ರಾದೇಶಿಕ ಭಾಷೆ ಸಹಾಯ ಮಾಡುತ್ತದೆ.

ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ 

ಸ್ಥಳೀಯ ಯುವಕರಿಗೆ ಉದ್ಯೋಗ(Job) ಅವಕಾಶಗಳಿಗಾಗಿ ಏಕರೂಪದ ಅವಕಾಶವನ್ನು ಒದಗಿಸುವ ಗುರಿಯೊಂದಿಗೆ ಸಮಿತಿಯು ಕೆಲಸ ಮಾಡಿದೆ ಮತ್ತು ಸ್ಥಳೀಯ/ಪ್ರಾದೇಶಿಕ ಭಾಷೆಗಳ ಮೂಲಕ ಗ್ರಾಹಕರೊಂದಿಗೆ ಮೇಲುಗೈ ಸಾಧಿಸುತ್ತದೆ ಎಂದು ಅದು ಹೇಳಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಕ್ಲೆರಿಕಲ್ ಪರೀಕ್ಷೆಗಳನ್ನು ನಡೆಸುವ ಈ ನಿರ್ಧಾರವು ಭವಿಷ್ಯದ ಎಸ್‌ಬಿಐ(SBI) ಹುದ್ದೆಗಳಿಗೆ ಅನ್ವಯಿಸುತ್ತದೆ. ಈಗಾಗಲೇ ಜಾಹಿರಾತು ನೀಡಿರುವ ಮತ್ತು ಪೂರ್ವಭಾವಿ ಪರೀಕ್ಷೆಗಳು ನಡೆದಿರುವ ಖಾಲಿ ಹುದ್ದೆಗಳಿಗೆ ಎಸ್‌ಬಿಐನ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯು ಜಾಹೀರಾತಿನಂತೆ ಪೂರ್ಣಗೊಳ್ಳುತ್ತದೆ.

ಹಣಕಾಸು ಸಚಿವಾಲಯ ಜುಲೈನಲ್ಲಿ ಪಿಎಸ್‌ಬಿಗಳಲ್ಲಿ ಕ್ಲೆರಿಕಲ್ ಕೇಡರ್ ಪರೀಕ್ಷೆಯನ್ನು ತಡೆಹಿಡಿಯುವಂತೆ ಐಬಿಪಿಎಸ್‌(IBPS)ಗೆ ನಿರ್ದೇಶನ ನೀಡಿತು. ಜುಲೈ 2019 ರಲ್ಲಿ ಹಣಕಾಸು ಸಚಿವ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRB) ಉದ್ಯೋಗಕ್ಕಾಗಿ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್(English) ಮತ್ತು ಹಿಂದಿ(Hindi) ಹೊರತುಪಡಿಸಿ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು‌ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿದೆ.

513 ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಂಪನಿ ನೇಮಕಾತಿ, 1.05 ಲಕ್ಷ ರೂ.ವರೆಗೆ ಸಂಬಳ

ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರಿಂದ ಕರ್ನಾಟಕ(Karnataka)ವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಥಳೀಯರೇ ಆಯ್ಕೆಯಾಗಲು ಸಾಧ್ಯವಾಗಲಿದೆ. ಇದರಿಂದ ಬ್ಯಾಂಕು ವ್ಯವಹಾರಗಳಿಗೂ ಹೆಚ್ಚು ಲಾಭವಾಗಲಿದೆ.

PREV
click me!

Recommended Stories

ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 13,217 ಹುದ್ದೆಗಳಿಗೆ ಅರ್ಜಿ ಆಹ್ವಾನ
6589 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SBI: ಕೊನೆ ದಿನಾಂಕ, ಆಯ್ಕೆ ವಿಧಾನ ಹೀಗಿದೆ