ಸಾರ್ವಜನಿಕ ವಲಯದ ಪ್ರಮುಖ ಹಾಗೂ ಬೃಹತ್ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ(State Bank of India- SBI) ಪ್ರೊಬೆಷನರಿ ಆಫೀಸರ್ (Probationary Officers) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಒಟ್ಟು 2056 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ
ಸರ್ಕಾರಿ ಸ್ವಾಮ್ಯದ ದೇಶದ ಅತ್ಯುನ್ನತ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India- SBI), ಪ್ರೊಬೆಷನರಿ ಆಫೀಸರ್ (Probationary Officers) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಎಸ್‌ಬಿಐ ಒಟ್ಟು 2,056 ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನಾಂಕವಾಗಿದೆ. ಅಧಿಸೂಚನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
SBI PO ಅಧಿಸೂಚನೆಯ ಪ್ರಕಾರ, ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ -1 ಕ್ಕೆ ಅನ್ವಯಿಸುವಂತೆ ಪ್ರೊಬೇಷನರಿ ಆಫೀಸರ್ (PO) ನ ಆರಂಭಿಕ ಮೂಲ ವೇತನ ರೂ .41,960/- ಇರುತ್ತದೆ. ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮಗಳ ಪ್ರಕಾರ D.A, H.R.A/ ಲೀಸ್ ಬಾಡಿಗೆ, C.C.A, ವೈದ್ಯಕೀಯ ಮತ್ತು ಇತರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಎಸ್‌ಬಿಐ(SBI) ಪ್ರೊಬೆಷನರಿ ಆಫೀಸರ್ (PO) 2,056 ಹುದ್ದೆಗಳ ಪೈಕಿ 324 ಪರಿಶಿಷ್ಟ ಜಾತಿ (SC), 162 ಪರಿಶಿಷ್ಟ ಪಂಗಡ (ST), 560 ಇತರೆ ಹಿಂದುಳಿದ ವರ್ಗಗಳಿಗೆ (OBC), 200 ಹುದ್ದೆಗಳು ಆರ್ಥಿಕ ದುರ್ಬಲ ವಿಭಾಗ (Economically Weaken Section) ಮತ್ತು 810 ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಅಥವಾ ಕೇಂದ್ರ ಸರ್ಕಾರದಿಂದ (Central Government) ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಸಂದರ್ಶನಕ್ಕೆ ಕರೆದರೆ, ಅವರು ಡಿಸೆಂಬರ್ 31, 2021 ಅಥವಾ ಅದಕ್ಕಿಂತ ಮೊದಲಿನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಸಲ್ಲಿಸಬೇಕು.
ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (Integrated Dual Degree - IDD) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು, ಡಿಸೆಂಬರ್ 31, 2021ಕ್ಕೂ ಮೊದಲು ಐಡಿಡಿ ಉತ್ತೀರ್ಣರಾಗಿರಬೇಕು. ಚಾರ್ಟರ್ಡ್ ಅಕೌಂಟೆಂಟ್(CA) ಅಥವಾ ಕಾಸ್ಟ್ ಅಕೌಂಟೆಂಟ್ ಅಭ್ಯರ್ಥಿಗಳು ಸಹ ಎಸ್ ಬಿಐ ಪಿಒ (SBI PO) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಎಸ್‌ಬಿಐ ಎಸ್‌ಸಿಒ ನೇಮಕಾತಿ: 606 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಯು ಏಪ್ರಿಲ್ 1, 2021ಕ್ಕೆ ಅನ್ವಯಿಸುವಂತೆ 21 ರಿಂದ 30 ವರ್ಷದ ಒಳಗಿನವರಾಗಿರಬೇಕು.. ಎಸ್‌ಸಿ (SC), ಎಸ್‌ಟಿ (ST), ಒಬಿಸಿ (OBC), ಪಿಡಬ್ಲ್ಯೂಡಿ (PWD), ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಗರಿಷ್ಠ ವಯಸ್ಸಿನ ಮಿತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ 5 ವರ್ಷಗಳು, ಇತರೆ ಹಿಂದುಳಿದ ವರ್ಗಗಳಿಗೆ 3 ವರ್ಷಗಳು (ಕೆನೆರಹಿತ ಲೇಯರ್), ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳಿಗೆ 15 ವರ್ಷಗಳು (PWD) - PWD (SC/ ST) ಸಡಿಲಿಕೆ ನೀಡಲಾಗುತ್ತದೆ.
ಅಭ್ಯರ್ಥಿಗಳು ಆನ್ ಲೈನ್ (Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.https://bank.sbi/careers ಅಥವಾ https://www.sbi.co.in/careers ನಲ್ಲಿ ಅರ್ಜಿ (Application) ಸಲ್ಲಿಸಬೇಕು. ಬೇರೆ ಯಾವುದೇ ರೀತಿಯ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಸಾಮಾನ್ಯ/ EWS/ OBC ಅಭ್ಯರ್ಥಿಗಳಿಗೆ 750ರೂ.ಅರ್ಜಿ ಶುಲ್ಕ ಇರುತ್ತದೆ. ಇನ್ನು SC/ ST/ PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಮೂರು ಹಂತಗಳಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ಅಭ್ಯರ್ಥಿಗಳು 2021ರ ಎಸ್‌ಬಿಐ ಪಿಒ ಪ್ರಿಲಿಮ್ಸ್ ಪರೀಕ್ಷೆಯಲ್ಲಿ (Prilimanary Examination) ಉತ್ತೀರ್ಣರಾಗಬೇಕು. ಬಳಿಕ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎಸ್‌ಬಿಐ ಪಿಒ ಮುಖ್ಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆನಂತರ ಸಂದರ್ಶನ (ineterview) ಸುತ್ತಿನಲ್ಲಿಯೂ ಉತ್ತೀರ್ಣರಾಗಬೇಕು. ಸಂದರ್ಶನದ ಸುತ್ತಿನ ನಂತರ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ನವೆಂಬರ್/ಡಿಸೆಂಬರ್ ನಲ್ಲಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುವುದು.
ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ