Central Bank of India Recruitment: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Oct 6, 2022, 3:55 PM IST
Highlights

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್‌ 17ರಂದು ಕೊನೆಯ ದಿನವಾಗಿದೆ.

ನವದೆಹಲಿ (ಅ.6): ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ವಿವಿಧ ಹುದ್ದೆಗಳು ಇದ್ದು, ಇವುಗಳಿಗೆ ಶೀಘ್ರವೇ ನೇಮಕಾತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ಬೇಕಾದ ದಾಖಲೆಗಳು, ವೇತನ ವಿವರಗಳು, ಅರ್ಜಿ ಸಲ್ಲಿಕೆ, ವಿದ್ರ್ಯಾಹತೆ ಹಾಗೂ ವಯೋಮಿತಿ ಕುರಿತು ಇಲ್ಲಿ ತಿಳಿಸಲಾಗಿದೆ.ಅಭ್ಯರ್ಥಿಗಳು ಇಲ್ಲಿ ನೀಡಿರುವ ಮಾಹಿತಿಗಳ ಅನ್ವಯ ಅರ್ಜಿ ಸಲ್ಲಿಸಬಹುದು. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೇಮಕಾತಿ ವಿಭಾಗವು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಬೇರೆ ಬೇರೆ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿದೆ. ಹುದ್ದೆಗಳ ಸಂಖ್ಯೆಗಳ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇಮಕಾತಿಯು ಭಾರತಾದ್ಯಂತ ವಿವಿಧ ಶಾಖೆಗಳಿಗೆ ನಡೆಯಲಿದೆ. ಐಟಿ ವಿಭಾಗದಲ್ಲಿ 33 ಹುದ್ದೆಗಳು, ಅಪಾಯ ನಿರ್ವಾಹಕ 21 ಹುದ್ದೆಗಳು, ತಾಂತ್ರಿಕ ಅಧಿಕಾರಿ (ಕ್ರೆಡಿಟ್‌) 15 ಹುದ್ದೆಗಳು, ಡೇಟಾ ಇಂಜಿನಿಯರ್‌, ಕಾನೂನು ಅಧಿಕಾರಿ, ಹಣಕಾಸು ವಿಶ್ಲೇಷಕ ಅಧಿಕಾರಿ ಹುದ್ದೆಗಳು ಸಹಿತ ಹಲವು ವಿಭಾಗಗಳಿಗೆ ನೇಮಕಾತಿ ನಡೆಯಲಿದೆ. ಸಾಮಾನ್ಯ ಅಭ್ಯರ್ಥಿಗೆ ಅರ್ಜಿ ಶುಲ್ಕವು 175 ರು. ಆಗಿದ್ದು, ಎಸ್ಸಿ/ಎಸ್ಟಿ/ಇತರೆ ಅಭ್ಯರ್ಥಿಗಳಿಗೆ 175 ರು. ಆಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ ವಿದ್ಯಾರ್ಹತೆ ಏನು?: ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ನಿಗದಿತ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸದರಿ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಂತೆಯೆ, ವಾಣೀಜ್ಯ/ಅರ್ಥಶಾಸ್ತ್ರ/ಗಣಿತ/ಬಿಎಸ್ಸಿ ಇನ್‌ಸ್ಟಾಟಿಕ್ಸ್‌/ಎಂಬಿಎ/ಎಂಎಸ್ಸಿ/ಎಂಸಿಎ/ಸಿಎಸ್‌ಇ/ಎಎಲ್‌ಬಿ/ಸಿಎ ಹಾಗೂ ನಿರ್ದಿಷ್ಠ ಯಾವುದೇ ಪದವಿ (ಭದ್ರತಾ ವಿಭಾಗಕ್ಕೆ ಮಾತ್ರ) ವಿದ್ಯಾರ್ಹತೆಯನ್ನು ಹೊಂದಿರಬೇಕಿದೆ. ಇನ್ನು ವಯೋಮಾನದ ಕುರಿತು ತಿಳಿಸಲಾಗಿದ್ದು, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇಮಕಾತಿ ಅಧಿಸೂಚನೆಯಲ್ಲಿನ ಪ್ರಕಾರ ಕನಿಷ್ಠ 20 ವರ್ಷವಾದರೂ ಪೂರೈಸಿರಬೇಕು. ಹಾಗೂ ಗರಿಷ್ಠ ಎಂದರೆ 50 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗೆ 3 ವರ್ಷ, ಎಸ್ಸಿ/ಎಸ್ಟಿಅಭ್ಯರ್ಥಿಗೆ 5 ವರ್ಷ ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗೆ 10 ವರ್ಷ ಸಡಿಲಿಕೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

NHAI Recruitment 2022; ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ

ಬೇಕಾದ ದಾಖಲೆಗಳು ಏನು?: ಬ್ಯಾಂಕ್‌ನ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ಅರ್ಜಿ ಜೊತೆಗೆ ಆಧಾರ್‌ಕಾರ್ಡ್‌/10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ, ಸದರಿ ಹುದ್ದೆಗಳಿಗೆ ಸಂಬಂಧಿಸಿದ ಅಂಕಪಟ್ಟಿಗಳು/ ಮೀಸಲಾತಿ/ಜಾತಿ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ದಾಖಲೆಗಳ ರೂಪದಲ್ಲಿ ಲಗತ್ತಿಸಬೇಕಿದೆ. ಜೊತೆಗೆ ಅಭ್ಯರ್ಥಿಯು ಸ್ವತಃ ಸಹಿ ಮಾಡಿರುವ ಭಾವಚಿತ್ರವನ್ನೂ ಲಗತ್ತಿಸಬೇಕಿದೆ. ಅಭ್ಯರ್ಥಿಯು ಮೊದಲು ಸೆಂಟ್ರಲ್‌ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ತೆರಳಬೇಕಿದ್ದು, ಅಲ್ಲಿ ದೊರೆಯುವ ಆನ್‌ಲೈನ್‌ ನಮೂನೆ ಅರ್ಜಿಯನ್ನು ಸರಿಯಾದ ಮಾಹಿತಿಗಳೊಂದಿಗೆ ಭರ್ತಿಗೊಳಿಸಬೇಕಿದೆ. ಅದಾದ ಬಳಿಕ ಶುಲ್ಕ ಪಾವತಿಸಬೇಕಿದ್ದು, ನಂತರ ಅರ್ಜಿಯನ್ನು ಕಳುಹಿಸಬೇಕಿದೆ.

ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಅ.6 ರಿಂದ ದಾಖಲಾತಿ ಪರಿಶೀಲನೆ ಆರಂಭ

ವೇತನ ಶ್ರೇಣಿ ಹೇಗಿದೆ?: ಅಭ್ಯರ್ಥಿಯನ್ನು ಮೊದಲು ಲಿಖಿತ ಪರೀಕ್ಷೆಗೆ ಒಳಪಡಿಸಲಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ನೇಮಕಾತಿ ವಿಭಾಗ ತಿಳಿಸಿದೆ. ಇನ್ನು ವೇತನ ಕುರಿತು ತಿಳಿಸಲಾಗಿದ್ದು, ಸೆಂಟ್ರಲ್‌ ಬ್ಯಾಂಕ್‌ ಇಂಡಿಯಾ ನಿಯಮಾನುಸಾರ ವೇತನ ನೀಡಲಾಗುತ್ತದೆ. ಐಟಿ ಅಭ್ಯರ್ಥಿಗೆ 89,890 ರು. ಇಂದ 1,00,350 ರು.ವರೆಗೆ ಡೇಟಾ ಸೈಂಟಿಸ್ಟ್‌ಗೆ 76,010 ರು. ಇಂದ 89,890 ರು. ವರೆಗೆ , ಅಪಾಯ ನಿವಾರ್ಹಕ ಹುದ್ದೆಗೆ 63,840 ರು. ಇಂದ 78,230 ರು. ವರೆಗೆ, ಕಾನೂನು ಅಧಿಕಾರಿ ಹುದ್ದೆಗೆ 48,170 ರು. ಇಂದ 69,810 ರು. ವರೆಗೆ, ಭದ್ರತಾ ವಿಭಾಗದವರಿಗೆ 36,000 ರು. ಇಂದ 69,810 ರು. ವರೆಗೆ ನೀಡಲಾಗುತ್ತದೆ ಎಂದು ನೇಮಕಾತಿ ವಿಭಾಗ ತಿಳಿಸಿದೆ.

*ಅರ್ಜಿ ಸಲ್ಲಿಸಲು ಅಕ್ಟೋಬರ್‌ 17ರಂದು ಕೊನೆಯ ದಿನ

* ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ

* ಹೆಚ್ಚಿನ ಮಾಹಿತಿಗಾಗಿ https://www.centralbankofindia.co.in/en

click me!