SBI Recruitment 2022; ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami K  |  First Published Sep 13, 2022, 3:41 PM IST

ಭಾರತೀಯ ಸ್ಟೇಟ್ ಬ್ಯಾಂಕ್  ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 5 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು , ಸೆಪ್ಟೆಂಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ನವದೆಹಲಿ (ಸೆ.13): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು  5000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಸೆಪ್ಟೆಂಬರ್ 27, 2022 ರವರೆಗೆ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ  ಅರ್ಜಿ ಸಲ್ಲಿಸಬಹುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಶುಲ್ಕ ,ಆಯ್ಕೆ ಪ್ರಕ್ರಿಯೆ ಮತ್ತು ರಾಜ್ಯವಾರು ಹುದ್ದೆಗಳು ಈ ಎಲ್ಲಾ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಈ ಕೆಳಗಿನಂತಿದೆ.

ವಯೋಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆಗಸ್ಟ್ 1, 2022 ರಂತೆ 20 ರಿಂದ 28 ವರ್ಷ ವಯಸ್ಸಿನೊಳಗಿರಬೇಕು. 

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಪ್ರಮಾಣಪತ್ರವನ್ನು ಹೊಂದಿರಬೇಕು. 

ಅರ್ಜಿ ಶುಲ್ಕ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಮತ್ತು OBC ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ರೂ 750 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಆದರೆ SC/ ST/ PWD/ XS ವರ್ಗಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಶಿಕ್ಷಕ, ಪೊಲೀಸ್ ನೇಮಕಾತಿಗೆ ಅಧಿಸೂಚನೆ ಪ್ರಕಟ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಗಳ ಪರೀಕ್ಷೆಗಳನ್ನು ಒಳಗೊಂಡಿರುವ ಆನ್‌ಲೈನ್ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. 

PROFESSOR RECRUITMENT SCAM ತನಿಖೆ ಮಧ್ಯೆಯೇ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ

SBI ಕ್ಲರ್ಕ್ ನೇಮಕಾತಿ 2022: ರಾಜ್ಯವಾರು ಹುದ್ದೆಯ ವಿವರಗಳು
ಗುಜರಾತ್ - 353 ಹುದ್ದೆಗಳು
ದಮನ್ ಮತ್ತು ದಿಯು - 4 ಹುದ್ದೆಗಳು
ಕರ್ನಾಟಕ - 316 ಹುದ್ದೆಗಳು
ಮಧ್ಯಪ್ರದೇಶ - 389 ಹುದ್ದೆಗಳು
ಛತ್ತೀಸ್‌ಗಢ - 92 ಹುದ್ದೆಗಳು
ಪಶ್ಚಿಮ ಬಂಗಾಳ - 340 ಹುದ್ದೆಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - 10 ಹುದ್ದೆಗಳು
ಸಿಕ್ಕಿಂ - 26 ಹುದ್ದೆಗಳು
ಒಡಿಶಾ - 170 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ - 35 ಹುದ್ದೆಗಳು
ಹರಿಯಾಣ - 5 ಹುದ್ದೆಗಳು
ಹಿಮಾಚಲ ಪ್ರದೇಶ - 55 ಹುದ್ದೆಗಳು
ಪಂಜಾಬ್ - 130 ಹುದ್ದೆಗಳು
ತಮಿಳುನಾಡು - 355 ಹುದ್ದೆಗಳು
ಪಾಂಡಿಚೇರಿ - 7 ಹುದ್ದೆಗಳು
ದೆಹಲಿ - 32 ಹುದ್ದೆಗಳು
ಉತ್ತರಾಖಂಡ - 120 ಹುದ್ದೆಗಳು
ತೆಲಂಗಾಣ - 225 ಹುದ್ದೆಗಳು
ರಾಜಸ್ಥಾನ - 284 ಹುದ್ದೆಗಳು
ಕೇರಳ - 270 ಹುದ್ದೆಗಳು
ಲಕ್ಷದ್ವೀಪ - 3 ಹುದ್ದೆಗಳು
ಉತ್ತರ ಪ್ರದೇಶ - 631 ಹುದ್ದೆಗಳು
ಮಹಾರಾಷ್ಟ್ರ - 747 ಹುದ್ದೆಗಳು
ಗೋವಾ - 50 ಹುದ್ದೆಗಳು
ಅಸ್ಸಾಂ - 258 ಹುದ್ದೆಗಳು
ಆಂಧ್ರ ಪ್ರದೇಶ - 15 ಹುದ್ದೆಗಳು
ಮಣಿಪುರ - 28 ಹುದ್ದೆಗಳು
ಮೇಘಾಲಯ - 23 ಹುದ್ದೆಗಳು
ಮಿಜೋರಾಂ - 10 ಹುದ್ದೆಗಳು
ನಾಗಾಲ್ಯಾಂಡ್ - 15 ಹುದ್ದೆಗಳು
ತ್ರಿಪುರ - 10 ಹುದ್ದೆಗಳು
ಒಟ್ಟು - 5008 ಹುದ್ದೆಗಳು

click me!