ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

By Suvarna NewsFirst Published Aug 23, 2021, 4:27 PM IST
Highlights

ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ ಸಹಾಯಕ ಸಿಬ್ಬಂದಿಗಳ ಹುದ್ದೆಗೆ ನೇಮಕಾತಿಯನ್ನು ಆರಂಭಿಸಿದೆ. ಪದವೀಧರರು ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 31 ಕೊನೆಯ ದಿನವಾಗಿದೆ.

ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರುವ ಆಕಾಂಕ್ಷೆ ನಿಮಗಿದ್ದರೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಪದವಿ ಮುಗಿಸಿದ್ದು ಬ್ಯಾಂಕ್ಗಳಲ್ಲಿ ನೌಕರಿಗಾಗಿ  ಪ್ರತಿ ದಿನ ಉದ್ಯೋಗ ನ್ಯೂಸ್ ಹುಡುಕಾಡುತ್ತಿರೋರಿಗೆ ನಿಜಕ್ಕೂ ಇದು ಸುವರ್ಣಾವಕಾಶ. ಹೌದು.. ಬ್ಯಾಂಕ್ ಆಫ್ ಇಂಡಿಯಾ, ಖಾಲಿ ಇರುವ ವಿವಿಧ ಹುದ್ದೆಗಳನ್ನ ಭರ್ತಿ ಮಾಡಿಕೊಳ್ತಾ ಇದೆ. ನೀವು ಡಿಗ್ರಿ ಮುಗಿಸಿದ್ದವರಾಗಿದ್ರೆ, ಕೂಡಲೇ ಬಿಒಐ ಬ್ಯಾಂಕ್ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. 

ಬ್ಯಾಂಕ್ ಆಫ್ ಇಂಡಿಯಾ, ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅರ್ಹ ಹಾಗೂ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ತಾಣವಾದ bankofindia.co.in ನಲ್ಲಿ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಡ್ರೈವ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ವಿವರವಾದ ಅಧಿಸೂಚನೆಯೊಂದಿಗೆ ಅರ್ಜಿ ನಮೂನೆಯು - www.bankofindia.co.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ  

ಕ್ರೀಡಾಪಟುಗಳಿಗೆ ರೇಲ್ವೆಯಲ್ಲಿ ಉದ್ಯೋಗ, 92,300 ರೂ.ವರೆಗೂ ಮಾಸಿಕ ವೇತನ

ಆರ್‌ಎಸ್‌ಇಟಿಐ ಮೈನ್‌ಪುರಿ, ಆರ್‌ಸೆಟಿ ಕನೌಜ್ ಮತ್ತು ಆರ್‌ಎಸ್‌ಇಟಿಐ ಫರುಖಾಬಾದ್‌ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಸಹಾಯಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ.  ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಪೂರೈಸಿರುವುದು ಕಡ್ಡಾಯವಾಗಿದೆ. ಕಂಪ್ಯೂಟರ್ ಜ್ಞಾನದೊಂದಿಗೆ ಬಿಎಸ್‌ಡಬ್ಲೂ, ಬಿಎ, ಬಿಕಾಂ ಪದವಿ ಹೊಂದಿರಬೇಕು. ಇನ್ನು ಅಭ್ಯರ್ಥಿಯ ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಟ 45 ವರ್ಷಗಳಾಗಿರಬೇಕು. ಜೊತೆಗೆ ದೈಹಿಕ ಸಾಮರ್ಥ್ಯಕ್ಕೆ ಒಳಪಟ್ಟಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ಪ್ರೆಸೆಂಟೇಷನ್ ಮೂಲಕ ಬ್ಯಾಂಕ್ ಆಫ್ ಇಂಡಿಯಾ, ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಿದೆ. ಲಿಖಿತ ಪರೀಕ್ಷೆಯು ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಸಂವಹನ ಕೌಶಲ್ಯ, ನಾಯಕತ್ವದ ಗುಣಮಟ್ಟ, ವರ್ತನೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ಪ್ರಶಿಕ್ಷಣಾರ್ಥಿಗಳ ಅಭಿವೃದ್ಧಿ ವಿಧಾನದೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ನಿರ್ಣಯಿಸಲು ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.  ಪ್ರೆಸೆಂಟೇಷನ್ ಮೂಲಕ ಬೋಧನಾ ಕೌಶಲ್ಯ ಮತ್ತು ಸಂವಹನ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಬಿಎಸ್‌ಎಫ್‌ನಲ್ಲಿ 269 ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಶುರು

ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ನಿರ್ಧಾರವೇ ಅಂತಿಮವಾಗಿರುತ್ತದೆ. ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಗುವುದು ಎಂಬುದನ್ನೂ ಅಭ್ಯರ್ಥಿಗಳು ಗಮನಿಸಬೇಕು.

ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕು.  ಅಸ್ತಿತ್ವದಲ್ಲಿರುವ ಬ್ಯಾಂಕ್ ನೀತಿಗಳು ಮತ್ತು ನಿಯಮಗಳ ಪ್ರಕಾರ ಹುದ್ದೆಯ ಅವಧಿಯನ್ನು ರಿನೀವಲ್ ಮಾಡಲಾಗುತ್ತದೆ.  ಅರ್ಹತೆ ಮತ್ತು ವೇತನದ ಬಗ್ಗೆ ವಿವರಗಳಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bankofindia.co.in ನಲ್ಲಿ ಹಾಕಿರುವ ವಿವರವಾದ ಉದ್ಯೋಗ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಲಯ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಇಂಡಿಯಾ, ಆಗ್ರಾ ವಲಯ ಕಚೇರಿ, 1 ನೇ ಮಹಡಿ ಎಲ್ಐಸಿ ಕಟ್ಟಡ, ಸಂಜಯ್ ಪ್ಯಾಲೇಸ್,  ಆಗ್ರಾ -282002 - ಈ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿಗಳನ್ನು ಕಳುಹಿಸಬೇಕು. ಉದ್ಯೋಗ ಅಧಿಸೂಚನೆಯ ಪ್ರಕಾರ, ಭರ್ತಿ ಮಾಡಿದ ಅರ್ಜಿ ನಮೂನೆಯು 2021 ರ ಆಗಸ್ಟ್ 31 ರಂದು ಸಂಜೆ 4 ಗಂಟೆಗೆ ಮುಚ್ಚಿದ ಕವರ್‌ನಲ್ಲಿ ಈ ವಿಳಾಸವನ್ನು ತಲುಪಬೇಕು.

ಎಸ್‌ಬಿಐನಲ್ಲಿ 69 ಅಧಿಕಾರಿಗಳ ಹುದ್ದೆಗೆ ನೇಮಕಾತಿ

click me!