ಸಾರ್ವಜನಿಕ ವಲಯ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State bank of India-SBI) ಎಸ್‌ಸಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 6006 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸರ್ಕಾರಿ ಸ್ವಾಮ್ಯದ ಪ್ರತಿಷ್ಟಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India-SBI), ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ವಿಶೇಷ ಕೇಡರ್ ಅಧಿಕಾರಿಗಳ (SCO) ನೇಮಕಾತಿಗಾಗಿ ತನ್ನ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಕಾಂಕ್ಷಿಗಳು ಅಕ್ಟೋಬರ್ 18 ರವರೆಗೆ sbi.co.in/web/careers ವೆಬ್ ಸೈಟ್ ಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಕಾಂಟ್ರಾಕ್ಟ್ ಅಥವಾ ನಿಯಮಿತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ನೇಮಕಾತಿ ಡ್ರೈವ್(Recruitment Drive) ಮೂಲಕ ಎಸ್ ಬಿ ಐ ಬ್ಯಾಂಕ್(SBI Bank), ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 606 SCO ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅದರಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ - 314 ಹುದ್ದೆಗಳು, ಕಸ್ಟಮರ್ ರಿಲೇಶನ್ಶಿಪ್ ಎಕ್ಸಿಕ್ಯೂಟಿವ್- 217 ಹುದ್ದೆಗಳು, ಡೆಪ್ಯುಟಿ ಮ್ಯಾನೇಜರ್(ಮಾರ್ಕೆಂಟಿಂಗ್)-26 ಹುದ್ದೆಗಳು, ರಿಲೇಶನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್)- 20 ಹುದ್ದೆಗಳು, ಇನ್ವೆಸ್ಟ್ಮೆಂಟ್ ಆಫೀಸರ್- 12 ಹುದ್ದೆಗಳು, ಮ್ಯಾನೇಜರ್ (ಮಾರ್ಕೆಂಟಿಂಗ್)- 12 ಹುದ್ದೆಗಳು, ಸೆಂಟ್ರಲ್ ರಿಸರ್ಚ್ ಟೀಮ್ (ಪ್ರೊಡಕ್ಟ್ ಟೀಮ್)- 2 ಹುದ್ದೆಗಳು, ಸೆಂಟ್ರಲ್ ರಿಸರ್ಚ್ ಟೀಮ್ (ಸಪೋರ್ಟ್)-2 ಹುದ್ದೆಗಳು, ಎಕ್ಸಿಕ್ಯೂಟಿವ್(ಡಾಕ್ಯುಮೆಂಟ್ ಪ್ರಿಸರ್ವೇಷನ್-ಆರ್ಕೈವ್ಸ್) - 1 ಹುದ್ದೆ ಸೇರಿ ಒಟ್ಟು 600 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ.
undefined
ಆಯಿಲ್ ಇಂಡಿಯಾ ನೇಮಕಾತಿ: ಅಧಿಕಾರಿ ಹುದ್ದೆಗಳಿಗೆ ಸೂಪರ್ ಸಂಬಳ
ಸಾಮಾನ್ಯ(General)/ ಇಡಬ್ಲ್ಯೂಎಸ್(EWS)/ ಒಬಿಸಿ(OBC) ವರ್ಗಗಳ ಅಭ್ಯರ್ಥಿಗಳು ಎಲ್ಲಾ ಹುದ್ದೆಗಳಿಗೆ ನೋಂದಣಿ ಶುಲ್ಕ 750 ರೂ. ಪಾವತಿಸಬೇಕು. ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಇತರವುಗಳನ್ನು ಬಳಸಿಕೊಂಡು ಶುಲ್ಕವನ್ನು ಪಾವತಿಸಬಹುದು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ವ್ಯವಸ್ಥಾಪಕರು, ಉಪ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ ಅಥವಾ ಪಿಜಿಡಿಎಂಎ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಮಾರ್ಕೆಟಿಂಗ್ ಅಥವಾ ಫೈನಾನ್ಸ್‌ನಲ್ಲಿ ಯಾವುದೇ ಸಮಾನವಾದ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.
ಇನ್ನು ಮ್ಯಾನೇಜರ್ ಹುದ್ದೆ(Manager Post)ಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಜುಲೈ 1, 2021 ರಂತೆ ಕನಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು. ಹಾಗೆ ಡೆಪ್ಯೂಟಿ ಮ್ಯಾನೇಜರ್(Deputy Manger post) ಹುದ್ದೆಗೆ, ಅಭ್ಯರ್ಥಿಗಳ ವಯೋಮಿತಿ ಜುಲೈ 1, 2021ಕ್ಕೆ ಅನ್ವಯಿಸುವಂತೆ ಕನಿಷ್ಠ 35 ವರ್ಷಗಳಾಗಿರಬೇಕು.
ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಕಾರ್ಯನಿರ್ವಾಹಕ ಹುದ್ದೆಗೆ, ಅಭ್ಯರ್ಥಿಗಳು MA ಅಥವಾ MSc ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸಮಾನ ಪದವಿ(Degree)ಯನ್ನು ಗಳಿಸಿರಬೇಕು. ಅಕ್ಟೋಬರ್ 1, 2021 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.
ರಿಲೇಷನ್ ಶಿಪ್ ಮ್ಯಾನೇಜರ್(Relationship Manger), ಕಸ್ಟಮರ್ ರಿಲೇಶನ್ ಶಿಪ್ ಎಕ್ಸಿಕ್ಯುಟಿವ್(Customer Relationship Executive) ನಂತಹ ಇತರ ಹುದ್ದೆಗಳಿಗೆ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಮುಗಿಸಿರಬೇಕು. ಇದಲ್ಲದೆ, ಅಭ್ಯರ್ಥಿಗಳು ಅರ್ಹತಾ ನಂತರದ ಕೆಲಸದ ಅನುಭವವನ್ನು ಹೊಂದಿರಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಲು, ಅಭ್ಯರ್ಥಿಗಳು ಆಗಸ್ಟ್ 1, 2021 ರಂತೆ ಕನಿಷ್ಠ 23 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಹೂಡಿಕೆ ಅಧಿಕಾರಿ, ಕೇಂದ್ರ ಸಂಶೋಧನಾ ತಂಡದ ಪ್ರಾಡೆಕ್ಟ್ ಲೀಡ್‌ನಂತಹ ಹಲವಾರು ಇತರ ಹುದ್ದೆಗಳಿಗೆ, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು. ಅಂದಹಾಗೇ ಈ ಹುದ್ದೆಗಳೆಲ್ಲ ಗುತ್ತಿಗೆ ಅಥವಾ ಕಾಂಟ್ರಾಕ್ಟ್ ಆಧಾರಿತ ಅನ್ನೋದು ಗಮನಾರ್ಹ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-sbi.co.in ಗೆ ಭೇಟಿ ನೀಡಬೇಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಆಯಾ ಹುದ್ದೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಹಾಗೇ ತಮ್ಮ ಮುಂದಿನ ಪ್ರಕ್ರಿಯೆ ದೃಷ್ಟಿಯಿಂದ ಅಭ್ಯರ್ಥಿಗಳು ಅರ್ಜಿಯ ಪ್ರತಿ ಇಟ್ಟುಕೊಳ್ಳುವುದು ಸೂಕ್ತ.
513 ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಂಪನಿ ನೇಮಕಾತಿ, 1.05 ಲಕ್ಷ ರೂ.ವರೆಗೆ ಸಂಬಳ