ಕ್ರೈಸ್ತ ಧರ್ಮದ ಫಾದರ್ ಒಬ್ಬರನ್ನು ಕರೆಸಿಕೊಂಡು ಅಧಿಕಾರ ಸ್ವೀಕಾರ
ಸರ್ಕಾರಿ ಶಾಲೆಯಲ್ಲಿ ಧರ್ಮ ಭೋಧನೆ ಮಾಡಲಾಯಿತೇ ?
ಸೂಕ್ತ ಅರ್ಹತೆ ಇಲ್ಲದಿದ್ದರೂ ಮುಖ್ಯ ಶಿಕ್ಷಕಿ ಹುದ್ದೆಗೆ ಮುಂಬಡ್ತಿ ದೂರು
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ನ.26): ರಾಜ್ಯದಲ್ಲಿ ಧರ್ಮ ದಂಗಲ್ ಕತೆಯು ಮುಗಿಯೋ ಲಕ್ಷಣಗಳು ಕಾಣುತ್ತಲೇ ಇಲ್ಲ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಧರ್ಮದ ವಿಚಾರವಾಗಿ ಪರಸ್ಪರ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದೆ. ಈ ಮಧ್ಯೆ ಬಳ್ಳಾರಿಯಲ್ಲೊಬ್ಬ ಮುಖ್ಯ ಶಿಕ್ಷಕಿ ಮುಖ್ಯ ಗುರುಗಳ ಸ್ಥಾನಕ್ಕೆ ಅಧಿಕಾರ ವಹಿಸಿಕೊಳ್ಳೊವಾಗ ಫಾಸ್ಟರ್ (ಚರ್ಚ್ ಫಾದರ್) ಅವರನ್ನು ಕರೆಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಅಧಿಕಾರ ಸ್ವೀಕಾರ ಮಾಡೋ ವೇಳೆ ಧರ್ಮ ಬೋಧನೆ ಮಾಡಿದ ಫಾಸ್ಟರ್ ಮುಖ್ಯಗುರುಗಳ ಚೇರ್ ನಲ್ಲಿ ಕುಳಿತುಕೊಂಡಿರೋದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ಧರ್ಮ ದಂಗಲ್ ಜೋರಾಗಿದೆ. ಮತಾಂತರ ವಿಚಾರ, ಟಿಪ್ಪು ಪಠ್ಯ, ವ್ಯಾಪಾರದಲ್ಲಿನ ಧರ್ಮ ದಂಗಲ್, ಗುಲ್ಗುಂಬಸ್ ಮಾದರಿಯ ಬಸ್ ನಿಲ್ದಾಣ ವಿಚಾರ, ಸೇರಿದಂತೆ ಅದೆಷ್ಟೋ ವಿಚಾರಗಳಲ್ಲಿ ದಿನನಿತ್ಯ ಗೊಂದಲಗಳು ಸೃಷ್ಟಿಯಾಗುತ್ತಲೇ ಇದೆ. ಇನ್ನೂ ಇದರ ಜೊತೆ ರಾಜಕೀಯ ಮುಖಂಡರು ಸಹ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳದಕ್ಕಾಗಿ ಧರ್ಮದ ವಿಚಾರವಾಗಿ ಹೇಳಿಕೆಗಳು ನೀಡಿ ಜನರಿಗೆ ಸಾಕಷ್ಟು ಗೊಂದಲ ಮಾಡ್ತಿದ್ದಾರೆ. ಇದರ ಮಧ್ಯೆ ಮುಖ್ಯಶಿಕ್ಷಕಿ ಶಾಲೆಯಲ್ಲಿ ಅಧಿಕಾರ ವಹಿಸಿಕೊಳ್ಳುವಾಗ ಚರ್ಚ್ ಫಾದರ್ ಅವರನ್ನು ಕರೆಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ನೈಜವಾಗಿ ಹಾಜರಿ ಮಾತ್ರ ಇತ್ತೇ ಅಥವಾ ಧರ್ಮ ಬೋಧನೆಯನ್ನೂ ಮಾಡಲಾಯಿತೇ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ.
undefined
ಹಿಂದೂಗಳು ಸಂಘಟನೆಯಾಗದಿದ್ದರೆ ಧರ್ಮಕ್ಕೇ ಅಪಾಯ: ಪ್ರಮೋದ್ ಮುತಾಲಿಕ್
ಎಡವಟ್ಟು ಮಾಡಿದ ಮುಖ್ಯಶಿಕ್ಷಕಿ : ಬಳ್ಳಾರಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಈ ಘಟನೆ ಇದೀಗ ಸಾಕಷ್ಟು ಚರ್ಚೆಯಾಗ್ತಿದೆ. ಶಿಕ್ಷಕಿಯಾಗಿದ್ದ ಜಯಾ ( ಜಾಯ್ ) ಅವರನ್ನು ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ, ಅಧಿಕಾರ ಸ್ವೀಕರಿಸುವ ವೇಳೆ ಚರ್ಚ್ ಪಾಸ್ಟರ್ ಕರೆಸಿದ್ದ ಶಿಕ್ಷಕಿ ಜಾಯ್, ಫಾದರ್ ಅವರಿಂದ ಧರ್ಮ ಭೋಧನೆ ಮಾಡಿಸಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಗುರುಗಳ ಚೇರ್ ನಲ್ಲಿ ಕುಳಿತ ಪಾಸ್ಟರ್ ಕುಮಾರ್ ಅವರು, ಪುಸ್ತಕವೊಂದನ್ನು ಹಿಡಿದುಕೊಂಡು ಸ್ಥಳದಲ್ಲಿದ್ದವರಿಗೆ ಧರ್ಮದ ಪಾಠವನ್ನು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಕುರಿತು ಪ್ರಭಾರಿ ಮುಖ್ಯ ಶಿಕ್ಷಕಿ ಜಾಯ್ ವಿರುದ್ದ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಿ.ಸಿ. ಮತ್ತು ಡಿಡಿಪಿಐಗೆ ದೂರು ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಪಾಸ್ಟರ್ ಬೋಧನೆ ಮಾಡಿದಕ್ಕೆ ಕ್ರಮ ಕೈಗೊಳ್ಳುವಂತೆ ಕೆಲ ಶಿಕ್ಷಕರು ಹಾಗೂ ಅನಾಮಧೇಯ ಹೆಸರಿನಲ್ಲಿ ದೂರು ಸಲ್ಲಿಸಿದ್ದಾರೆ.
ಧರ್ಮಭೋಧನೆ ಮಾಡಿಸಿಲ್ಲ: ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕಿ ಜಾಯ್ ಅವರು ಅಧಿಕಾರ ಸ್ವೀಕಾರದ ನಂತರ ಪಾಸ್ಟರ್ ಶಾಲೆಗೆ ಬಂದಿದ್ದು ನಿಜ. ಆದರೆ, ಪಾಸ್ಟರ್ ಅಭಿನಂದನೆ ಸಲ್ಲಿಸಲು ಬಂದಿದ್ದರು. ಯಾರಿಗೂ ಧರ್ಮಭೋಧನೆ ಮಾಡಿಲ್ಲ. ಪಾಸ್ಟರ್ ಕುಮಾರ್ ಅವರು ನಮ್ಮ ಸಹೋದರ. ಹೀಗಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರೆಯಲಾಗಿತ್ತು. ಇಲ್ಲಿ ಕೇವಲ ಅಭಿನಂದನೆ ಮಾತ್ರ ಸಲ್ಲಿಸಿದ್ದಾರೆ. ನನ್ನ ಕೆಲ ವಿರೋದಿಗಳು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕಿ ಜಾಯ್ ಸ್ಪಷ್ಟನೆ ನೀಡಿದ್ದಾರೆ.
Pancha Maha Paapa: ಅರಿವಿಲ್ಲದೆ ಮಾಡಿದ ಈ ತಪ್ಪು ಪಾಪದ ಸಾಲಿಗೆ ಸೇರುತ್ತೆ
ದೂರು ಕೊಟ್ಟವರಾರು ಯಾರು? : ಮುಖ್ಯಶಿಕ್ಷಕಿಯಾಗಿ ಅಧಿಕಾರ ತೆಗೆದುಕೊಂಡು ವಾರ ಕಳೆದಿಲ್ಲ. ಅಷ್ಟರಲ್ಲಿ ಇಷ್ಟೆಲ್ಲ ರಾದ್ದಾಂತವಾಗಲು ಕಾರಣವೇನು? ಅನ್ನೋದೇ ಸದ್ಯ ನಿಗೂಢವಾಗಿದೆ. ಯಾಕೆಂದರೆ ಕೆಲವು ದೂರಿನಲ್ಲಿ ಅವರಿಗೆ ಮುಖ್ಯಶಿಕ್ಷಕರಾಗೋ ಅರ್ಹತೆ ಇಲ್ಲದಿದ್ದರೂ ಮುಂಬಡ್ತಿ ನೀಡಿ ಮುಖ್ಯಗುರುಗಳ ಹುದ್ದೆಗೆ ಕೂರಿಸಲಾಗಿದೆ ಎಂದು ಇದೆ. ಮತ್ತೊಂದಿಷ್ಟು ದೂರುಗಳಲ್ಲಿ ಚರ್ಚ್ ಫಾದರ್ ಕರೆದು ಶಾಲೆಯಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದರು ಎಂದು ಬರೆಯಲಾಗಿದೆ. ಈ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಎಲ್ಲಿ ತಪ್ಪು ನಡೆದಿದೆ. ಶಾಲೆಯಲ್ಲಿ ಧರ್ಮ ಬೋಧನೆ ಮಾಡಿದರೇ ಅಥವಾ ಇದೆಲ್ಲವೂ ಕುತಂತ್ರವೇ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದೆ.