ಆಡಿಯೋ ಮಾಡಿದ್ದು ಯಾರು ಎಂದು ಹೇಳಲು ನಾನೇನು ಅಂಜನ ಹಾಕಿಲ್ಲ ಎಂದ ಸಚಿವ ಸಿ.ಟಿ. ರವಿ| ಅಂಜನ ಹಾಕೋ ಸಾಮರ್ಥ್ಯ ಇರೋದು ಮೂಢನಂಬಿಕೆ ನಂಬಿರೋ ಕಾಂಗ್ರೆಸ್‌ನವರಿಗೆ. ಅವರಿಗೆ ಈ ಪ್ರಶ್ನೆಯನ್ನು ಕೇಳಿ|ಆಡಿಯೋ ಬಗ್ಗೆ ಹೇಳಲು ನಾನು ತನಿಖಾ ಪ್ರತಿನಿಧಿ ಅಲ್ಲ|ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದು ಸರಿಯಲ್ಲ|
ಬಳ್ಳಾರಿ[ನ.6]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಯ ಆಡಿಯೋ ಮಾಡಿದ್ದು ಯಾರು ಎಂದು ಹೇಳಲು ನಾನೇನು ಅಂಜನ ಹಾಕಿಲ್ಲ. ಅಂಜನ ಹಾಕೋ ಸಾಮರ್ಥ್ಯ ಇರೋದು ಮೂಢನಂಬಿಕೆ ನಂಬಿರೋ ಕಾಂಗ್ರೆಸ್‌ನವರಿಗೆ. ಅವರಿಗೆ ಈ ಪ್ರಶ್ನೆಯನ್ನು ಕೇಳಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಂಗಳವಾರ ಹಂಪಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
BSY ಆಡಿಯೋ ಬಹಿರಂಗಕ್ಕೆ ಜಾತಿ ಬಣ್ಣ ಬಳಿದ ಡಿಸಿಎಂ ಸವದಿ
ಆಡಿಯೋ ಬಗ್ಗೆ ಹೇಳಲು ನಾನು ತನಿಖಾ ಪ್ರತಿನಿಧಿ ಅಲ್ಲ. ನಾನು ಸರ್ಕಾರದ ಸಚಿವ. ಆಡಿಯೋ ಹೇಗೆ ಲೀಕ್ ಆಯ್ತು? ಯಾವ ಕಾರಣಕ್ಕೆ ಆಯ್ತು ಎಂಬುದು ಗೊತ್ತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದರು. ಯಡಿಯೂರಪ್ಪ ಅವರು ಬಹುಮತದಿಂದ ಹಾಗೂ ಸರ್ವಾನುಮತದಿಂದ ಆಯ್ಕೆಗೊಂಡು ಮುಖ್ಯಮಂತ್ರಿಯಾದವರು. ಪ್ರತಿಪಕ್ಷದಲ್ಲಿ ಕೂತಿರುವ ಸಿದ್ಧರಾಮಯ್ಯ ಅವರ ಆಯ್ಕೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಸಹ ವಿರೋಧಿಸಿದ್ದರು ಎಂದು ತಿರುಗೇಟು ನೀಡಿದ್ದಾರೆ.