ಶುಲ್ಕ ಕಟ್ಟಲು ಅಮ್ಮನ ಮಂಗಳಸೂತ್ರ ಮಾರಿದ ಯುವಕ: ಮಾನವೀಯತೆ ಮೆರೆದ ಆರ್‌ಟಿಒ ಅಧಿಕಾರಿ

By Suvarna NewsFirst Published Jun 18, 2022, 11:19 AM IST
Highlights

ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಆರ್‌ಟಿವೋ ಕಚೇರಿಗೆ ಯುವಕನೋರ್ವ ತನ್ನ ತಾಯಿಯ ಮಂಗಳಸೂತ್ರವನ್ನು ಮಾರಿ ಆರ್‌ಟಿಒದಲ್ಲಿ ಚಲನ್ ಕಟ್ಟಲು ಬಂದಿದ್ದ ಈತನ ಕಷ್ಟ ಕೇಳಿ ಮನ ಕರಗಿದ ಆರ್‌ಟಿಒ ಅಧಿಕಾರಿ ತಾವೇ ಶುಲ್ಕವನ್ನು ಕಟ್ಟಿ ಮಾನವೀಯತೆ ಮೆರೆದಿದ್ದಾರೆ. 

ಮಹಾರಾಜ್‌ಗಂಜ್: ಆರ್‌ಟಿಒ ಅಧಿಕಾರಿಗಳೆಂದರೆ ದುಡ್ಡು ಮಾಡುವವರು ಲಂಚಬಾಕರು ಎಂಬ ಮಾತು ಜನರ ನಡುವೆ ಹೆಚ್ಚು ಚಾಲ್ತಿಯಲ್ಲಿದೆ. ತಾನು ಆರ್‌ಟಿಒ ಆಫೀಸರ್ ಎಂದರೆ ಹೋ ಇನ್ನೇನ್‌ ಲೈಫ್ ಸೆಟಲ್ ಆಯ್ತಲ್ಲಾ ಅಂತ ಯೋಚಿಸುವವರೇ ಹೆಚ್ಚು ಅಷ್ಟರ ಮಟ್ಟಿಗೆ ಆರ್‌ಟಿಒ ಅಧಿಕಾರಿಗಳೆಂದರೆ ಹೇಗೆ ಎಂಬ ಭಾವನೆ ಜನರಲ್ಲಿದೆ. ಆದರೆ ಎಲ್ಲೆಡೆಯೂ ಒಳ್ಳೆಯವರು ಇರುತ್ತಾರೆ. ಕೆಟ್ಟವರು ಇರುತ್ತಾರೆ ಎಂಬ ಮಾತು ಕೂಡ ಸತ್ಯವೇ. ಅದೇ ರೀತಿ ಉತ್ತರಪ್ರದೇಶದ ಮಹಾರಾಜ್‌ ಗಂಜ್‌ನ ಆರ್‌ಟಿಒ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಆ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ. 

ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಆರ್‌ಟಿವೋ ಕಚೇರಿಗೆ ಯುವಕನೋರ್ವ ತನ್ನ ತಾಯಿಯ ಮಂಗಳಸೂತ್ರವನ್ನು ಮಾರಿ ಆರ್‌ಟಿಒದಲ್ಲಿ ಚಲನ್ ಕಟ್ಟಲು ಬಂದಿದ್ದ. ಸಿಂಗ್ಪುರ್ ತಾಲ್ಹಿ ಗ್ರಾಮದ ವಿಜಯ್ (Vijay) ಎಂಬುವವರೇ ಹೀಗೆ ಅಮ್ಮನ ಮಂಗಳಸೂತ್ರ ಮಾರಿ ಆಟೋ ಶುಲ್ಕ ಕಟ್ಟಲು ಬಂದವರು. ಅಮ್ಮನ ತಾಳಿ ಮಾರಿದರೂ ಶುಲ್ಕ ಪಾವತಿ ಮಾಡಲು ಪರದಾಡುವಂತಾದ ಅವರ ಸ್ಥಿತಿಯನ್ನು ಕೇಳಿ ಆರ್‌ಟಿಒ ಆರ್‌ಸಿ ಅಧಿಕಾರಿ ಭಾರತಿ ಅವರು ಆತ ಕಟ್ಟಬೇಕಿದ್ದ ನಗದನ್ನು ತಮ್ಮ ಹಣದಲ್ಲಿಯೇ ಕಟ್ಟಿ ಮಾನವೀಯತೆ ಮೆರೆದಿದ್ದಾರೆ. ಯುವಕ ಬರೋಬರಿ  24,500 ರೂಪಾಯಿ ಶುಲ್ಕವನ್ನು ಕಟ್ಟಬೇಕಿತ್ತು. ಆದರೆ ಇಷ್ಟೊಂದು ಹಣವನ್ನು ಭಾರತಿ ಅವರೇ ಕಟ್ಟಿದ್ದಾರೆ.

RTO ಅಧಿಕಾರಿಗಳ ಬೃಹತ್ ಕಾರ್ಯಾಚರಣೆ; ಅಮಿತಾಬ್ ಬಚ್ಚನ್ ಸೇರಿ ಗಣ್ಯರ ಕಾರು ಸೀಝ್!

ಬುಧವಾರ ಮಹಾರಾಜ್‌ಗಂಜ್ (Maharajganj) ಜಿಲ್ಲೆಯ ARTO ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಅದನ್ನು ಕೇಳಿದ ನಂತರ ಆರ್‌ಟಿಒ ಆರ್‌ಸಿ ಭಾರತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ಅವರನ್ನು ಅವರ ಕಾರ್ಯಕ್ಕಾಗಿ ಕೊಂಡಾಡಲು ಆರಂಭಿಸಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಯುವಕನ ತಂದೆಯ ಆಟೋಗೆ 24500 ರೂ. ಶುಲ್ಕ ಹೇರಲಾಗಿತ್ತು. ಅಮ್ಮನ ಮಂಗಳಸೂತ್ರವನ್ನು ಮಾರಿದ ನಂತರವೂ ಯುವಕನಿಗೆ ಈ ಶುಲ್ಕವನ್ನು ಪೂರೈಸಲು ಮತ್ತಷ್ಟು ಹಣದ ಅಗತ್ಯವಿತ್ತು. ಆದರೆ ಈ ವಿಷಯ ಅರಿತ ಅಧಿಕಾರಿ ಭಾರತಿ ಅವರು ಅಷ್ಟು ಹಣವನ್ನು ತಮ್ಮ ಕೈಯಿಂದ ನೀಡಿ ಚಲನ್‌ ತುಂಬಲು ಯುವಕನಿಗೆ ಹೇಳಿದರು. 

ದೀಪಿಕಾ ಪಡುಕೋಣೆ -ಅನುಷ್ಕಾ ಶರ್ಮ: ಬಾಲಿವುಡ್‌ ನಟಿಯರ ದುಬಾರಿ ಮಂಗಳಸೂತ್ರಗಳು!

ವಿಜಯ್ ಅವರ ತಂದೆ ರಾಜ್‌ಕುಮಾರ್ (Rajkumar) ಅವರು ಆಟೋ ಓಡಿಸುತ್ತಾರೆ. ಆದರೆ ಅವರಿಗೆ ಒಂದು ಕಣ್ಣು ಕಾಣಿಸುವುದಿಲ್ಲ ಎಂದು ವಿಜಯ್ ಹೇಳಿದರು. ಅಲ್ಲದೇ ಇವರ ಮನೆಯಲ್ಲಿ ಆರು ಜನ ಹೆಣ್ಣು ಮಕ್ಕಳಿದ್ದು ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಆಟೋ ಚಲನ್ ಸಲ್ಲಿಸಲು 24,500 ರೂ. ಆಗಿದ್ದು, ಮಂಗಳಸೂತ್ರವನ್ನು ಮಾರಿದ ನಂತರವೂ ಕೇವಲ  13 ಸಾವಿರ ರೂಪಾಯಿ ಗಳಿಸಲಷ್ಟೇ ಅವರಿಗೆ ಸಾಧ್ಯವಾಯಿತು. ಇವರ ಕಷ್ಟನ್ನು ಕೇಳಿ ಮನ ಕರಗಿದ ಆರ್‌ಟಿಒ ಅಧಿಕಾರಿ ತಮ್ಮ ಕೈಯಿಂದಲೇ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. 
 

click me!