Fire Mishap: ಮತ್ತೊಂದು ಪ್ಯೂರ್‌ ಇವಿ ಸ್ಕೂಟರ್‌ನಲ್ಲಿ ಬೆಂಕಿ ಅವಘಡ

Published : Jun 17, 2022, 02:21 PM IST
Fire Mishap: ಮತ್ತೊಂದು ಪ್ಯೂರ್‌ ಇವಿ ಸ್ಕೂಟರ್‌ನಲ್ಲಿ ಬೆಂಕಿ ಅವಘಡ

ಸಾರಾಂಶ

ಪ್ಯೂರ್ ಇವಿ(Pure EV) ಈ ಕಂಪನಿಯ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ.

ಕೆಲ ದಿನಗಳ ಹಿಂದೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿನ ಬೆಂಕಿ ಅವಘಡಗಳು ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಓಲಾ (Ola) ಸೇರಿದಂತೆ ಹಲವು ಪ್ರಮುಖ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಇದರಲ್ಲಿ ಪ್ರಮುಖವಾದ ಇವಿ ಕಂಪನಿಯೆಂದರೆ ಪ್ಯೂರ್ ಇವಿ (Pure EV). ಈ ಕಂಪನಿಯ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದೀಗ ಮತ್ತೊಂದು ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಗುಜರಾತಿನ ಪಟಾನ್ನಲ್ಲಿರುವ ಸುವಿಧಿನಾಥ್ ಸೊಸೈಟಿಯಲ್ಲಿ ಚಾರ್ಜ್‌ ಆಗುತ್ತಿದ್ದ ಸ್ಕೂಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವೀಡಿಯೊದಲ್ಲಿ ಸ್ಕೂಟರ್ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು. ಯಾರೋ ಸ್ಕೂಟರ್ಗೆ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ಸ್ಕೂಟರ್ ಇನ್ನೂ ಚಾರ್ಜರ್‌ಗೆ ಪ್ಲಗ್‌ ಆಗಿರುವುದನ್ನು ನೋಡಬಹುದು. 
ಪ್ಯೂರ್‌ ಇವಿ ಬೆಂಕಿ ಅವಘಡದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ಸ್ಕೂಟರ್‌ ಅನ್ನು ಬಿರುಬಿಸಿಲಿನಲ್ಲಿ ನಿಲ್ಲಿಸಿದ್ದರಿಂದ ಬೆಂಕಿ ತಗುಲಿರಬಹುದು ಎಂದು ಹೇಳಲಾಗುತ್ತಿದೆ. ಉತ್ತರ ಭಾರತದಲ್ಲಿ ಈಗ ತೀವ್ರ ಬಿಸಿಲು ಹಾಗೂ ಹೀಟ್‌ ವೇವ್ (heat wave) ಇರುವುದು ಕೂಡ ಇದು ಕಾರಣವಾಗಿರಬಹುದು.

ಮೂರು ತಿಂಗಳಿಗೇ ಮುರಿದು ಬಿತ್ತು ಓಲಾ ಸ್ಕೂಟರ್ ಸ್ಟ್ಯಾಂಡ್

ಸರ್ಕಾರವು ಈಗಾಗಲೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ-DRDO) ಗೆ ಆದೇಶಿಸಿದೆ. ಈಗಾಗಲೇ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಡಿಆರ್ಡಿಒದ ವಿಶೇಷ ವಿಭಾಗವಾದ ಸೆಂಟರ್ ಫಾರ್ ಫೈರ್, ಎಕ್ಸ್ಪ್ಲೋಸಿವ್ ಮತ್ತು ಎನ್ವಿರಾನ್ಮೆಂಟ್ ಸೇಫ್ಟಿ (ಸಿಎಫ್ಇಇಎಸ್-CFEES) ಈ ತನಿಖೆಯನ್ನು ನಡೆಸಿದೆ.

ಬ್ಯಾಟರಿಗಳು ಮತ್ತು ಇವಿ ಮಾಡ್ಯೂಲ್ಗಳಲ್ಲಿ ಕೆಲವು ಗಂಭೀರ ದೋಷಗಳಿವೆ ಎಂದು ವರದಿಗಳು ಹೇಳುತ್ತವೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ತಯಾರಕರು ಬಳಸುತ್ತಿರುವ ಕಡಿಮೆ-ದರ್ಜೆಯ ವಸ್ತುಗಳು. ಇದು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಂಬಂಧ ಪ್ರಶ್ನಿಸಲು ಸರ್ಕಾರ ಇವಿ ತಯಾರಕರನ್ನು ಕರೆಸಿ ವಿಚಾರಣೆ ನಡೆಸಿದೆ. ಸಿಎಫ್‌ಇಇಎಸ್ (CFEES) ಗೆ ಕೇವಲ ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸುವುದರ ಜೊತೆಗೆ, ಅದಕ್ಕೆ ಪರಿಹಾರ ಕ್ರಮಗಳನ್ನು ಹಂಚಿಕೊಳ್ಳಲು ಕೇಳಲಾಗಿದೆ. ಇದುವರೆಗೆ ಅರ್ಧ ಡಜನ್ಗಿಂತಲೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳು ನಡೆದಿವೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲೆಕ್ಟ್ರಿಕ್ ವಾಹನ ಪಾರ್ಕಿಂಗ್‌ನಲ್ಲಿ ಬೆಂಕಿ

ಅನೇಕ ಇವಿ (EV) ತಯಾರಕರು ಬೆಂಕಿ ಅವಘಡದ ನಂತರ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹಿಂಪಡೆದಿದ್ದಾರೆ. ಅಂತಹ ತಯಾರಕರು ಓಲಾ ಎಲೆಕ್ಟ್ರಿಕ್, ಓಕಿನಾವಾ, ಪ್ಯೂರ್ ಇವಿ, ಜಿತೇಂದ್ರ ಇವಿ ಮತ್ತು ಬೂಮ್ ಮೋಟಾರ್ಸ್‌ಗಳು. ಬ್ಯಾಟರಿ ಸೆಲ್ಗಳು ಮತ್ತು ಬ್ಯಾಟರಿಯ ವಿನ್ಯಾಸದಲ್ಲಿಯೂ ಸಮಸ್ಯೆಗಳಿವೆ ಎಂದು ವರದಿ ಹೇಳಿದೆ. ಕೇಂದ್ರ ಸಚಿವಾಲಯ ಇದನ್ನು ತಡೆಯಲು ತಕ್ಷಣದ ಕ್ರಮ ಕೈಗೊಂಡಿದೆ. ಅಂತಹ ಘಟನೆಗಳ ಕಾರಣಗಳನ್ನು ತನಿಖೆ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಮತ್ತು ತಯಾರಕರು ತಪ್ಪಿತಸ್ಥರೆಂದು ಕಂಡುಬಂದರೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ವಾಹನಗಳು ಇಂತಹ ಘಟನೆಗಳನ್ನು ಹೊಂದಿರುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheelers) ತಯಾರಕರಿಗೆ ತನಿಖೆಗೆ ಅಗತ್ಯವಿರುವ ಆದೇಶಗಳನ್ನು ಸಚಿವಾಲಯವು ಈಗಾಗಲೇ ಹೊರಡಿಸಿದೆ ಎಂದು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nithin Gakdari) ಹೇಳಿದ್ದಾರೆ. ಹೊಸ ಗುಣಮಟ್ಟ-ಕೇಂದ್ರಿತ ಮಾರ್ಗಸೂಚಿಗಳು ಮಾರಾಟಕ್ಕೆ ಹೋಗುವ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಬೇಕಿದೆ.

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್