ಇನ್ನೊಂದೇ ವರ್ಷದಲ್ಲಿ ಪೆಟ್ರೋಲ್ ವಾಹನದ ಬೆಲೆಯಲ್ಲಿ ಸಿಗಲಿದೆ ಎಲೆಕ್ಟ್ರಿಕ್ ಕಾರು!

By Santosh Naik  |  First Published Jun 17, 2022, 9:58 PM IST

ಎಲ್ಲಾ ಎಲೆಕ್ಟ್ರಿಕ್ ವಾಹನಗಳ (ಇವಿ) ಬೆಲೆಗಳು ಒಂದು ವರ್ಷದೊಳಗೆ ದೇಶದಲ್ಲಿನ ಪೆಟ್ರೋಲ್ ವಾಹನಗಳ ಬೆಲೆಯಲ್ಲಿ ಸಿಗಲಿದೆ. ಅದಕ್ಕಾಗಿ ಸರ್ಕಾರದ ಪ್ರಯತ್ನ ಸಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.


ನವದೆಹಲಿ (ಜೂನ್ 17): ಮುಂದಿನ ಒಂದು ವರ್ಷದ ಒಳಗಾಗಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳ (ELECTRIC VEHICLES) ಬೆಲೆಗಳು ದೇಶದಲ್ಲಿನ ಪೆಟ್ರೋಲ್ ವಾಹನಗಳ (PETROL VEHICLES) ಬೆಲೆಯಲ್ಲಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Road Transport and Highways Minister Nitin Gadkari) ಶುಕ್ರವಾರ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಬೆಳೆಯ ಅವಶೇಷಗಳಿಂದ ಉತ್ಪಾದಿಸುವ ಎಥೆನಾಲ್ ಅನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದು ಗಡ್ಕರಿ ಹೇಳಿದರು. "ನಾನು ಪ್ರಯತ್ನಿಸುತ್ತಿದ್ದೇನೆ...ಒಂದು ವರ್ಷದೊಳಗೆ, ಎಲೆಕ್ಟ್ರಿಕ್ ವಾಹನಗಳ ವೆಚ್ಚವು ದೇಶದಲ್ಲಿ ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರುತ್ತದೆ ಮತ್ತು ನಾವು ಸಾಂಪ್ರದಾಯಿಕ ಇಂಧನಗಳಿಗೆ ಖರ್ಚು ಮಾಡುವ ಹಣವನ್ನು ಈ ಮೂಲಕ ಉಳಿಸಲಿದ್ದೇವೆ " ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸರ್ಕಾರ ಈಗಾಗಲೇ ಹಸಿರು ಇಂಧನವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುತ್ತಿದೆ ಎಂದು ಸಚಿವರು ಹೇಳಿದರು. ರಸ್ತೆಗಿಂತ ಜಲಮಾರ್ಗಗಳು ನಮಗೆ ಅಗ್ಗದ ಸಾರಿಗೆ ವಿಧಾನವಾಗಿದೆ ಮತ್ತು ಇದು ದೊಡ್ಡ ರೀತಿಯಲ್ಲಿ ಬರಲಿದೆ ಎಂದು ಗಡ್ಕರಿ ಈ ವೇಳೆ ಹೇಳಿದ್ದಾರೆ.
 

ನಿತಿನ್ ಗಡ್ಕರಿ ಅವರು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಬಗ್ಗೆ ಬಹಳ ಆಶಾವಾದಿಯಾಗಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಾರು ಕಂಪನಿಗಳಿಗೆ ಭಾರತ ಸರ್ಕಾರವು ಬೆಂಬಲ ನೀಡುತ್ತಿದೆ. ಈಗ, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೂ ಸರ್ಕಾರಿ ಪ್ಯಾಕೇಜ್ ನೀಡಲಾಗುವುದು ಎಂದು ಜಲಸಾರಿಗೆ ಸಚಿವರೂ ಆಗಿರುವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲವಾದರೂ, ಇವಿ ಉತ್ಸಾಹಿಗಳಿಗೆ ಇದು ದೊಡ್ಡ ಸುದ್ದಿಯಾಗಿದೆ. ಇಂತಹ ಪ್ಯಾಕೇಜ್ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅತ್ಯಂತ ಅಗ್ಗವಾಗಿಸಲು ಬದ್ಧವಾಗಿದೆ.

Latest Videos

undefined

ಹೆಚ್ಚುತ್ತಿರುವ ಇಂಧನ ಬೆಲೆಗಳೊಂದಿಗೆ, ಗ್ರಾಹಕರು ಸಕ್ರಿಯವಾಗಿ ಪರ್ಯಾಯಗಳತ್ತ ನೋಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳು ಉತ್ತಮ ಆಯ್ಕೆಯಾಗಿದ್ದರೂ, ಎಲೆಕ್ಟ್ರಿಕ್ ವಾಹನಗಳ ವಿಭಾಗವು ಸ್ಥಿರವಾಗಿ ಬೆಳೆಯುತ್ತಿದೆ. ಸರ್ಕಾರದ ಸಬ್ಸಿಡಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಗ್ರಾಹಕರು ಪೆಟ್ರೋಲ್ / ಡೀಸೆಲ್ ವಾಹನಗಳಿಂದ ದೂರ ಸರಿಯುವುದರಿಂದ, ಇದು ದೇಶದ ವಾಯು ಮಾಲಿನ್ಯದ ಮೇಲೂ ಪರಿಣಾಮ ಬೀರುತ್ತದೆ. ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನಗಳ ಬೆಲೆ ಶೀಘ್ರದಲ್ಲೇ ತಮ್ಮ ಪೆಟ್ರೋಲ್ ರೂಪಾಂತರಗಳಿಗೆ ಸಮನಾಗಿರುತ್ತದೆ ಎಂದು ಹೇಳಿರುವುದು ಗ್ರಾಹಕರ ಖುಷಿಗೆ ಕಾರಣವಾಗಿದೆ.

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಂತ ಚಿತ್ರ ಕಳಿಸಿದರೆ ಸಿಗುತ್ತೆ ಬಹುಮಾನ!

ಬಹುಶಃ ಒಂದು ಅಥವಾ ಹೆಚ್ಚೆಂದರೆ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು, ಆಟೋರಿಕ್ಷಾದ ಬೆಲೆಗಳು, ಪೆಟ್ರೋಲ್ ಚಾಲಿತ ವಾಹನಗಳ ಬೆಲೆಯಷ್ಟೇ ಆಗಲಿದೆ. ಲೀಥಿಯಂ-ಅಯಾನ್ ಬ್ಯಾಟರಿಯ ಬೆಲೆಗಳೂ ಕೂಡ ಕಡಿಮೆ ಆಗುತ್ತಿದೆ. ನಾವು ಜಿಂಕ್-ಐಯಾನ್, ಅಲ್ಯೂಮಿನಿಯಂ-ಐಯಾನ್, ಸೋಡಿಯಂ-ಐಯಾನ್ ಬ್ಯಾಟರಿಗಳ ಕೆಮಿಸ್ಟ್ರಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಪೆಟ್ರೋಲ್, ನೀವು ₹ 100 ಖರ್ಚು ಮಾಡುತ್ತಿದ್ದೀರಿ, ನಂತರ ನೀವು ಎಲೆಕ್ಟ್ರಿಕ್ ವಾಹನಕ್ಕೆ ₹ 10 (ಬಳಸಲು) ಖರ್ಚು ಮಾಡುತ್ತೀರಿ ಎಂದು ಗಡ್ಕರಿ ಹೇಳಿದ್ದಾರೆ.

Nitin Gadkari Target ಪ್ರತಿ ದಿನ 60 ಕಿ.ಮೀ ರಸ್ತೆ ನಿರ್ಮಿಸುವ ಗುರಿ, ಹೊಸ ದಾಖಲೆಗೆ ಸಜ್ಜಾದ ನಿತಿನ್ ಗಡ್ಕರಿ!

ಹೆಚ್ಚುವರಿಯಾಗಿ, ದೇಶದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವರು ಹೇಳಿದರು. ಪ್ರಮುಖ ಹೆದ್ದಾರಿಗಳಲ್ಲಿ 600ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸೇರಿಸಲಾಗುವುದು. ಇಂತಹ ಕ್ರಮಗಳು 6 ತಿಂಗಳೊಳಗೆ ಸಾಮಾನ್ಯ ಜನರಿಗೆ ಎಲಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ. 2023 ರ ವೇಳೆಗೆ ಎಲೆಕ್ಟ್ರಿಕ್ ವಾಹನ ವ್ಯವಹಾರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಮಾಡಲು ಸರ್ಕಾರವು ಆಶಿಸುತ್ತಿದೆ. ಪ್ರತಿ ಕಿ.ಮೀ ಎಲೆಕ್ಟ್ರಿಕ್ ವಾಹನಗಳ ವೆಚ್ಚವು ಪೆಟ್ರೋಲ್-ಡೀಸೆಲ್‌ಗಿಂತ ಅರ್ಧಕ್ಕಿಂತ ಕಡಿಮೆಯಿರುವುದರಿಂದ, ಹೊಸ ಕ್ರಮವು ಖಂಡಿತವಾಗಿಯೂ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಕಾಣಿಸಿಕೊಂಡ ಹಲವಾರು ಪ್ರಕರಣಗಳು ಇವಿಗಳ ಕೆಟ್ಟ ಚಿತ್ರಣವನ್ನು ನಿರ್ಮಿಸಿದ್ದರೂ, ಸರ್ಕಾರದ ಪರಿಶೀಲನೆಗಳು ಜನರ ವಿಶ್ವಾಸವನ್ನು ಮರಳಿ ಗಳಿಸಲಿದೆ ಎಂದಿದ್ದಾರೆ.

click me!