ರಾಂಗ್ ಪಾರ್ಕಿಂಗ್- ಕಾರು ಚಾಲಕನಿಗೆ 16,565 ರೂಪಾಯಿ ದಂಡ!

By Web DeskFirst Published Feb 1, 2019, 3:22 PM IST
Highlights

ರಾಂಗ್ ಸೈಡ್‌ನಲ್ಲಿ ಪಾರ್ಕಿಂಗ್ ಮಾಡಿದ ಕಾರು ಚಾಲಕನಿಗೆ ಬರೋಬ್ಬರಿ 16,565 ರೂಪಾಯಿ ದಂಡ ಹಾಕಲಾಗಿದೆ. ಫೋರ್ಡ್ ಆಸ್ಪೈರ್ ಕಾರಿನ ರಾಂಗ್ ಪಾರ್ಕಿಂಗ್‌ಗೆ ಇಷ್ಟೊಂದು ದಂಡ ವಧಿಸಿದ್ದು ಯಾಕೆ? ಇಲ್ಲಿದೆ ವಿವರ.

ಹೈದರಾಬಾದ್(ಜ.31): ಸರ್ಕಾರಿ ಇಲಾಖೆಗಳಲ್ಲಿ ಪೊಲೀಸ್ ಇಲಾಖೆ ಅತೀ ಹೆಚ್ಚು ತಂತ್ರಜ್ಞಾನವನ್ನ ಬಳಸಿಕೊಳ್ಳುತ್ತೆ. ಹೀಗಾಗಿಯೇ ಟ್ರಾಫಿಕ್ ನಿಯಮ ಉಲ್ಲಂಘನೆಗಳಿಗೆ ಇ ಚಲನ್ ಮೂಲಕ ದಂಡ ಪಾವತಿ ಮಾಡುತ್ತದೆ. ಇದೀಗ ನಿಯಮ ಬಾಹಿರವಾಗಿ ಕಾರು ಪಾರ್ಕಿಂಗ್ ಮಾಡಿಗ ಕಾರು ಚಾಲಕನಿಗೆ ಬರೋಬ್ಬರಿ 16,565 ರೂಪಾಯಿ ದಂಡ ಹಾಕಿದ ಘಟನೆ ನಡೆದಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!

ತೆಲಂಗಾಣದ ತಾವ್ರ ನಾಯಕ್ ಫೋರ್ಡ್ ಆಸ್ಪೈರ್ ಕಾರು ಹೊಂದಿದ್ದಾರೆ. ಇಷ್ಟು ದಿನ ಬೇಕಾ ಬಿಟ್ಟಿ ಕಾರು ಪಾರ್ಕಿಂಗ್ ಮಾಡಿ, ಸಿಗ್ನಲ್ ಜಂಪ್ ಮಾಡಿದ್ದ. ಟ್ರಾಫಿಕ್‌ಗಳಲ್ಲಿ ಪೊಲೀಸರು ಇದ್ದಾಗ ನಿಯಮ ಮೀರಿಲ್ಲ. ಆದರೆ ಪೊಲೀಸ್ ಇಲ್ಲದ ಕಡೆಗಳಲ್ಲಿ ಯಾವುದೇ ನಿಯಮ ಪಾಲಿಸಿಲ್ಲ. ಆದರೆ ಇದೆಲ್ಲವೂ ಪೊಲೀಸ್ ಕ್ಯಾಮರಾದಲ್ಲಿ ದಾಖಲಾಗಿತ್ತು. 

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

ಬರೋಬ್ಬರಿ 102 ಇ ಚಲನ್‌ಗಳು ತಾವ್ರ ನಾಯಕ್ ಹೆಸರಲ್ಲಿತ್ತು. ಇದರಲ್ಲಿ ಶೇಕಡಾ 95 ರಷ್ಟು ಇ ಚಲನ್‌ಗಳು ರಾಂಗ್ ಪಾರ್ಕಿಂಗ್‌ಗಾಗಿ ನೀಡಲಾಗಿತ್ತು. ತೆಲಂಗಾಣ ಪೊಲೀಸರು 102 ನಿಯಮ ಉಲ್ಲಂಘನೆಗೆ ಒಟ್ಟು 16,565 ರೂಪಾಯಿ ದಂಡ ವಿಧಿಸಿದ್ದಾರೆ. ಟ್ಯಾಕ್ಸಿ ಚಲಾಯಿಸುತ್ತಿರುವ ತಾವ್ರ ನಾಯಕ್ ಪೊಲೀಸರ ದಂಡದ ಮೊತ್ತ ಕೇಳಿ ದಂಗಾದ್ದಾನೆ. ಇಷ್ಟೇ ಅಲ್ಲ ದಂಡ ಕಟ್ಟದೆ ಬೇರೆ ದಾರಿಯಿಲ್ಲ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ

ಟ್ರಾಫಿಕ್ ಪೊಲೀಸರು ಇಲ್ಲ ಎಂದು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ಮಾಡಬೇಡಿ. ಎಲ್ಲವೂ ಕ್ಯಾಮರದಲ್ಲಿ ದಾಖಲಾಗಿರುತ್ತೆ. ಇನ್ನು ಸಿಗ್ನಲ್ ಜಂಪ್, ಗ್ರೀನ್ ಲೈಟ್ ಬರೋ ಮುನ್ನವೇ ಸಿಗ್ನಲ್ ಪಾಸ್ ಮಾಡುವುದು, ಒನ್ ವೇ, ರಾಂಗ್ ಸೈಡ್ ಚಲಾವಣೆ ಮಾಡುವುದು ಅಪಾಯಾಕಾರಿ ಹಾಗೂ ದಂಡ ಪಾವತಿಸಬೇಕಾಗುತ್ತೆ.

click me!