ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು ಭಾರತದಲ್ಲಿ ಬಿಡುಗಡೆ!

Suvarna News   | Asianet News
Published : Jan 25, 2020, 03:45 PM ISTUpdated : Jan 25, 2020, 05:54 PM IST
ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು ಭಾರತದಲ್ಲಿ ಬಿಡುಗಡೆ!

ಸಾರಾಂಶ

ವಿಶ್ವದ ಅತ್ಯಂತ ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಇದೀಗ ಗರಿಷ್ಠ ಬೆಲೆಯ ಕಲ್ಲಿನಾನ್ ಬ್ಯಾಡ್ಜ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ವಿಶ್ವದ ಅತ್ಯಂತ ದುಬಾರಿ ಕಾರು. ಇದೀಗ ಅಪ್‌ಗ್ರೇಡ್ ವರ್ಶನ್  ಕಲ್ಲಿನಾನ್  ಬ್ಯಾಡ್ಜ್ ಕಾರು ಮತ್ತಷ್ಟು ದುಬಾರಿಯಾಗಿದೆ. ಈ ಕಾರಿನ ಬೆಲೆ, ವಿಶೇಷತೆ  ಹಾಗೂ ಇತರ ಮಾಹಿತಿ ಇಲ್ಲಿದೆ. 

ನವದೆಹಲಿ(ಜ.25): ರೋಲ್ಸ್ ರಾಯ್ಸ್  ಶ್ರೀಮಂತರ ಕಾರಲ್ಲ, ಇದು ಆಗರ್ಭ ಶ್ರೀಮಂತರಿಗೆ ಮಾತ್ರ. ಕೋಟಿ ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಖರೀದಿಸುವುದು ಹಾಗೂ ನಿರ್ವಹಣೆ ಮಾಡುವುದು  ಸುಲಭದ ಮಾತಲ್ಲ. ರೋಲ್ಸ್ ರಾಯ್ಸ್ ಈಗಾಗಲೇ ವಿಶ್ವದ ಅತ್ಯಂದ ದುಬಾರಿ ಕಲ್ಲಿನಾನ್ ಕಾರನ್ನು ಬಿಡುಗಡೆ ಮಾಡಿತ್ತು. ಇದೀಗ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ರೋಲ್ಸ್ ರಾಯ್ಸ್ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಕಾರಿನ ಬೆಲೆ 8.2 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಬ್ಲಾಕ್ ಪೈಂಟ್ ಜೊತೆಗೆ ಶೇಡ್ ಮೂಲಕ ನೂತನ ಕಾರು ಕಂಗೊಳಿಸುತ್ತಿದೆ. ಈ ಕಾರು ಖರೀದಿಸವವರಿಗೆ ಬರೋಬ್ಬರಿ 44,000 ಕಲರ್ ಶೇಡ್ ಪೈಂಟ್ ಆಯ್ಕೆಯನ್ನು ರೋಲ್ಸ್ ರಾಯ್ಸ್ ನೀಡಿದೆ.

ಇದನ್ನೂ ಓದಿ: ಸಿಂಗ್ ಈಸ್ ಕಿಂಗ್: ಈತನ ಪ್ರತಿ ಟರ್ಬನ್ ಕಲರ್‌ಗೂ ಇದೆ ರೋಲ್ಸ್ ರಾಯ್ಸ್ ಕಾರು!

ಫ್ರಂಟ್ ಗ್ರಿಲ್, ಸಡ್ ಫ್ರೇಮ್ ಫಿನೀಸ್, ಬೂಟ್ ಹ್ಯಾಂಡಲ್, ಬೂಟ್ ಟ್ರಿಮ್, ಲೋವರ್ ಏರ್ ಇನ್‌ಲೆಟ್ ಫನೀಶರ್, ಎಕ್ಸಾಸ್ಟ್ ಪೈಪ್‌ಗಳು ಹೈ ಗ್ಲಾಸ್ ಬ್ಲಾಕ್ ಕ್ರೋಮ್ ಹೊಂದಿದೆ. ಇದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. 22 ಇಂಚಿನ್ ಅಲೋಯ್ ವೀಲ್ಹ್ ಈ ಕಾರಿನ ಮತ್ತೊಂದು ವಿಶೇಷತೆ.

ಇದನ್ನೂ ಓದಿ:ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!.

ಕಾರಿನ ಇಂಟೀರಿಯರ್ ಸೇರಿದಂತೆ ಹಲವು ಹೊರಭಾಗದಲ್ಲೂ ಗ್ರಾಹಕರಿಗೆ ಕಸ್ಟಮೈಸೇಶನ್ ಆಯ್ಕೆ ನೀಡಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲ ಬದಲಾವಣೆಗಳನ್ನು ಈ ಕಾರಿನಲ್ಲಿ ಮಾಡಬಹುದು. ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಕಾರಿನ ಹಿಂಬದಿ ಪ್ರಯಾಣಿಕರಿಗೂ 12 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ನೀಡಲಾಗಿದೆ. ಕಾರಿನಲ್ಲಿ ಒಟ್ಟು 18 ಮ್ಯೂಸಿಕ್ ಸ್ಪೀಕರ್ ಇಡಲಾಗಿದೆ.

ಇದನ್ನೂ ಓದಿ:ರೋಲ್ಸ್ ರಾಯ್ಸ್ ಕಲಿನಿಯನ್ : ವಿಶ್ವದ ಅತ್ಯಂತ ದುಬಾರಿ SUV ಕಾರು!

ನೂತನ  ಕಾರು 6.75-ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ V12 ಮೋಟಾರ್ ಹೊಂದಿದೆ. ಕಲ್ಲಿನಾನ್ ಕಾರಿಗಿಂತ 28 bhp ಹೆಚ್ಚು ಪವರ್ ಹಾಗೂ 50 Nm ಹೆಚ್ಚು ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮರ್ಥ್ ಹೊಂದಿದೆ. ಈ ಹಿಂದೆ ಬಿಡುಗಡೆಯಾಗಿರುವ ಕಲ್ಲಿನಾನ್ ಕಾರು 592 bhp ಪವರ್ ಹಾಗೂ 900 Nm  ಪೀಕ್ ಟಾರ್ಕ್ ಉತ್ಪಾದಿಸಲಿದೆ. 
 

ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ