ದೈತ್ಯ ಗಾತ್ರದ JCB ಮುಂದೆ ಪೊಲೀಸರು ಹಾಗೂ ಜೀಪ್ ಯಾವ ಲೆಕ್ಕ. ಕುಡಿದ ಅಮಲಿನಲ್ಲಿದ್ದ ಜೆಸಿಬಿ ಚಾಲಕ ಇದೇ ರೀತಿ JCB ಮೂಲಕ ಪೊಲೀಸರು ಹಾಗೂ ಜೀಪ್ ಮೇಲೆ ದಾಳಿ ನಡೆಸಿದ್ದಾನೆ. ಜೆಸಿಬಿ ಹಾಗೂ ಪೊಲೀಸರ ಬಡಿದಾಟದಲ್ಲಿ ಕೊನೆಗೆ ಗೆದ್ದಿದ್ದು ಯಾರು? ಇಲ್ಲಿದೆ ವಿವರ.
ಜೋಧಪುರ(ನ.18): ದಾರಿಯಲ್ಲಿ ಜೆಸಿಬಿ ಹೋಗುತ್ತಿದ್ದರೆ ಎಲ್ಲರೂ ಮಾರುದ್ದ ದೂರ ಹೋಗುತ್ತಾರೆ. ಈ ಘನ ವಾಹನದ ಖದರೇ ಆ ರೀತಿ ಇದೆ. JCB ಕೆಲಸದ ವೇಳೆ ಚಾಲನಕ ಅಜಾಗರೂಕತೆಯಿಂದ ಭಾರಿ ಅನಾಹುತಗಳು ಸಂಭವಿಸಿದ ಊದಾಹರಣೆಗಳಿವೆ. ಇದೀಗ ಕುಡಿದ ಮತ್ತಿನಲ್ಲಿ ಜೆಸಿಬಿ ಚಾಲಕ ರಂಪಾಟಕ್ಕೆ ಪೊಲೀಸರು ಹೈರಾಣಾಗಿದ್ದಾರೆ. ಇಷ್ಟೇ ಅಲ್ಲ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು
ಈ ಘಟನೆ ನಡೆದಿರುವುದು ರಾಜಸ್ಥಾನದ ಜೋಧಪುರದಲ್ಲಿ. ಕುಡಿದ ಅಮಲಿನಲ್ಲಿದ್ದ ಜೆಸಿಬಿ ಚಾಲಕ ಮಧ್ಯ ರಾತ್ರಿ ಜೆಸಿಬಿ ವಾಹನದ ಜೊತೆ ಪೆಟ್ರೋಲ್ ಬಂಕ್ ತೆರಳಿದ್ದಾನೆ. ಡೀಸೆಲ್ ಹಾಕಿದ ಬಳಿಕ ಪೆಟ್ರೋಲ್ ಬಂಕ್‌ನಲ್ಲಿದ್ದ ಕೆಲಸಗಾರರ ಜೊತೆ ವಾಗ್ವಾದ ನಡೆಸಿದ್ದಾನೆ. ಹೆಚ್ಚಿನ ಅನಾಹುತವಾಗೋ ಮೊದಲು ಬಂಕ್ ಕೆಲಸಗಾರರು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಲಾಂಚ್!
ಪೊಲೀಸರನ್ನು ನೋಡಿದ ಜೆಸಿಬಿ ಚಾಲಕ ಮತ್ತಷ್ಟು ಕೋಪಗೊಂಡಿದ್ದಾನೆ. ಜೆಸಿಬಿ ಮಂಭಾಗದಲ್ಲಿ ಪೊಲೀಸ್ ಜೀಪ್ ಗಮನಿಸಿದ ಚಾಲಕ ವೇಗವಾಗಿ ಜೆಸಿಬಿಯನ್ನು ಮುಂದಕ್ಕೆ ಚಲಾಯಿಸಿ, ಪೊಲೀಸರ ಜೀಪನ್ನೇ ಮಗುಚಿ ಹಾಕಿದ್ದಾನೆ. ಜೀಪಿನೊಳಗಿದ್ದ ಪೊಲೀಸ್ ಅದೃಷ್ಟವಶಾತ್ ಹೊರಬಂದಿದ್ದಾನೆ. ಇತ್ತ ಇತರ ಪೊಲೀಸರು ಚಾಲಕನಿಗೆ ಲಾಠಿ ಏಟು ನೀಡಲು ಮುಂದಾಗಿದ್ದಾರೆ. ಅಷ್ಟರಲ್ಲೇ ವೇಗವಾಗಿ ಜೆಸಿಬಿ ತಿರುಗಿಸಿದ ಚಾಲಕ ಮುಂದಕ್ಕೆ ಚಲಿಸಿದ್ದಾನೆ.
ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ಬಹುಬೇಡಿಕೆಯ MPV ಕಾರು ಲಿಸ್ಟ್ ಪ್ರಕಟ!
ತಕ್ಷಣವೇ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜೆಸಿಬಿ ಅಡ್ಡಗಟ್ಟಿದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮರದಲ್ಲಿ ಜೆಸಿಬಿ ಚಾಲಕನ ರಂಪಾಟ ದಾಖಲಾಗಿದೆ. ಪೊಲೀಸರ ಮೇಲೆ ದಾಳಿ, ಕೊಲೆ ಯತ್ನ, ಸಾರ್ವಜನಿಕ ಪ್ರದೇಶದಲ್ಲಿ ರಂಪಾಟ ಹಾಗೂ ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಪ್ರಕರಣ ದಾಖಲಿಸಿದ್ದಾರೆ.