ಅಪಘಾತದ ನಂತರ ರಸ್ತೆಯಲ್ಲೇ ಒಂದಕ್ಕೊಂದು ಅಂಟಿಕೊಂಡು ನೆಲಚಕ್ರದಂತೆ ತಿರುಗಿದ ಸ್ಕೂಟಿ ಬೈಕ್

Published : Aug 20, 2025, 12:05 PM IST
Scooty and Bike Spin in Circles After Accident

ಸಾರಾಂಶ

ರಸ್ತೆ ಅಪಘಾತದ ನಂತರ ಸ್ಕೂಟಿ ಮತ್ತು ಬೈಕ್‌ ಒಂದಕ್ಕೊಂದು ಸಿಲುಕಿಕೊಂಡು ಸುತ್ತುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದ ಸತ್ಯಾಸತ್ಯತೆ ತಿಳಿದಿಲ್ಲವಾದರೂ, ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

ರಸ್ತೆಯಲ್ಲಿ ಅಪಘಾತದ ನಂತರ ಸ್ಕೂಟಿ ಹಾಗೂ ಬೈಕ್ ಜೊತೆಯಾಗಿ ನೆಲಚಕ್ರದಂತೆ ತಿರುಗಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಅದರೆ ಇದು ಯಾವಾಗ ಎಲ್ಲಿ ನಡೆದಿದೆ. ಇದು ನಿಜವಾದ ವೀಡಿಯೋನಾ ಅಥವಾ ಎಐನಿಂದ ನಿರ್ಮಿಸಲಾಗಿದೆಯೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವೀಡಿಯೋದಲ್ಲಿ ಮನುಷ್ಯರು ಒಬ್ಬರ ಕೈ ಹಿಡಿದು ಮತ್ತೊಬ್ಬರು ಸುತ್ತ ತಿರುಗಿದಂತೆ ರಸ್ತೆ ಮಧ್ಯೆ ಸ್ಕೂಟಿ ಹಾಗೂ ಬೈಕ್ ಒಂದಕ್ಕೊಂದು ಅಂಟಿಕೊಂಡು ಹಲವು ನಿಮಿಷಗಳ ಕಾಲ ಸುತ್ತಿವೆ. ಕೆಲ ನಿಮಿಷಗಳ ಕಾಲ ಇದನ್ನು ನೋಡಿದ ಸಾರ್ವಜನಿಕರು ಹಾಗೂ ಸವಾರರು ಇವೆರಡು ಸುತ್ತುವುದನ್ನು ನಿಲ್ಲಿಸದೇ ಹೋದಾಗ ಒಬ್ಬರು ಕೋಲೊಂದನ್ನು ತೆಗೆದುಕೊಂಡು ಬಂದು ಅದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಸ್ಕೂಟಿ ಹಾಗೂ ಬೈಕನ್ನು ಬೇರ್ಪಡಿಸುವ ಯತ್ನ ಮಾಡಿದ್ದಾರೆ. ಇದಕ್ಕೆ ಹಲವು ನಿಮಿಷ ಹಿಡಿದಿದೆ.

ಅಪಘಾತದ ಬಳಿಕ ರಸ್ತೆಯಲ್ಲಿಯೇ ಸುತ್ತಿದ್ದ ಬೈಕ್-ಸ್ಕೂಟಿ:

ಆ ರಸ್ತೆಯಲ್ಲಿ ಬಂದ ವಾಹನ ಸವಾರರೆಲ್ಲಾ ಈ ಅಪರೂಪದ ಘಟನೆಯನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಸ್ಕೂಟಿ ಹಾಗೂ ಬೈಕ್‌ ವೊಂದಕ್ಕೊಂದು ಅಂಟಿಕೊಂಡು ನಡುರಸ್ತೆಯಲ್ಲಿ ಸುತ್ತುತ್ತಿರುವುದನ್ನು ನೋಡಿದ ಆ ರಸ್ತೆಯಲ್ಲಿ ಬಂದ ವಾಹನ ಸವಾರರು ಮುಂದೆ ಹೋಗಲಾಗದೇ ವಾಹನವನ್ನು ನಿಲ್ಲಿಸಿದ್ದರಿಂದ ಆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಎಲ್ಲಾ ಸೋಶಿಯಲ್‌ ಮೀಡಿಯಾಗಳಲ್ಲಿ ಇದೀಗ ವೀಡಿಯೋ ವೈರಲ್ ಆಗ್ತಿದ್ದು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವ ವೀಡಿಯೋದಲ್ಲಿಯೂ ಸ್ಪಷ್ಟವಾದ ಮಾಹಿತಿ ಇಲ್ಲ.

ನೆಟ್ಟಿಗರಿಂದ ವೀಡಿಯೋಗೆ ಸ್ವಾರಸ್ಯಕರ ಕಾಮೆಂಟ್:

ಇನ್ಸ್ಟಾಗ್ರಾಮ್‌ನಲ್ಲಿ indianindian163 ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಹೀಗೂ ಆಗುತ್ತಾ ಅಂತ ಅಚ್ಚರಿಪಟ್ಟಿದ್ದಾರೆ. ಕೆಲವರು ಹಲವು ಹಾಸ್ಯಮಯವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಪ್ತಪದಿ ತುಳಿಯುವುದನ್ನು ನೋಡಿದೆ ಈಗ ನೂರು ಸುತ್ತು ಸುತ್ತಿದ್ದನ್ನು ನೋಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಕೂಟಿಯ ಮೇಲೆ ಹುಚ್ಚು ಪ್ರೇಮವನ್ನಿರಿಸಿಕೊಂಡ ಬೈಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಗರ್ಲ್‌ಫ್ರೆಂಡ್ ಹಾಗೂ ಬಾಯ್‌ಫ್ರೆಂಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರಬ್ ನೇ ಬನಾದಿ ಜೋಡಿ, ಸೈಯಾರ ಸಿನಿಮಾ ನೋಡಿ ಬಂದಿರಬೇಕು, ಸವಾರರ ನಡುವಿನ ಜಗಳ ನೋಡಿದ್ದೆವು ಇಂದು ಸ್ಕೂಟಿ ಬೈಕ್‌ನ ಕಿತ್ತಾಟವನ್ನು ನೋಡಿದೆವು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ನಿಲ್ಲಿಸದೇ ಹೋಗಿದ್ದರೆ ಪೆಟ್ರೋಲ್ ಮುಗಿಯುವವರೆಗೂ ಇದು ಸುತ್ತಲೂ ತಿರುಗುತ್ತಿತ್ತು ಎಂದು ಕಾಣುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ಬೈಕ್‌ಗೂ ಗರ್ಲ್‌ಫ್ರೆಂಡ್ ಸಿಕ್‌ಬಿಟ್ಲು ಎಂದು ಮತ್ತೊಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದ್ದು, ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರೆ ಅಪಘಾತದ ನಂತರ ಹೀಗೆ ಆಗುವ ಸಾಧ್ಯತೆಗಳಿವೆಯಾ ಎಂದು ನೋಡಿದಾಗ ಖಂಡಿತ ಇದೆ. ದ್ವಿಚಕ್ರ ವಾಹನಗಳಿಂದಾಗುವ ಅಪಘಾತಗಳಲ್ಲಿ ಸ್ಕೂಟಿ ಮತ್ತು ಬೈಸಿಕಲ್ ನಡುವೆ ಡಿಕ್ಕಿ ಸಂಭವಿಸಿ, ನಂತರ ಎರಡೂ ವಾಹನಗಳು ರಸ್ತೆಯಲ್ಲಿ ತಿರುಗುವುದು ಸಾಮಾನ್ಯ. ಅಪಘಾತದ ಪರಿಣಾಮವಾಗಿ ನಿಯಂತ್ರಣ ತಪ್ಪಿ ವಾಹನಗಳು ತಿರುಗುವ ಸ್ಥಿತಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿನ ವೇಗ, ಸಮತೋಲನ ಕಳೆದುಕೊಳ್ಳುವುದು ಮತ್ತು ಅಪಘಾತದ ತೀವ್ರ ಸ್ವರೂಪ ಸೇರಿದಂತೆ ಹಲವಾರು ಅಂಶಗಳು ಇದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಪೂಜಾ ನ ಪ್ರೀತಿಸ್ತಿದ್ದವ ಪೂಜಾರಿ ಆದ: ಬ್ರೇಕಪ್ ಮೊದಲು ನಂತರದ ಫೋಟೋ ಭಾರಿ ವೈರಲ್‌

ಇದನ್ನೂ ಓದಿ: ಬೈಕನ್ನು ಹೆಗಲ ಮೇಲೆ ಹೊತ್ತು ಬಾಹುಬಲಿಯಂತೆ ಸಾಗಿದ ಭೂಪ: ಭಾರತೀಯ ಹಾಡಿಗೆ ರಷ್ಯನ್ ಪುಟಾಣಿಗಳ ಡಾನ್ಸ್‌

 

 

 

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ